ನಮ್ಮ ಪಠಾಣ್ ದೇಶಭಕ್ತಿ ಸಾರುವ ಸಿನಿಮಾ: ಪಠಾಣ್ ಬಗ್ಗೆ ಶಾರೂಖ್ ಖಾನ್ ಹೆಮ್ಮೆಯ ಮಾತು

0
36

Shah Rukh Khan about Pathan movie ಬಾಲಿವುಡ್ ನ(Bollywood) ಸ್ಟಾರ್ ನಟ ಶಾರೂಖ್ (Shah Rukh Khan) ಅಭಿನಯದ ಬಹು ನಿರೀಕ್ಷಿತ ಸಿನಿಮಾ ಪಠಾಣ್ ನ(Pathan Trailer) ಟ್ರೈಲರ್ ನಿನ್ನೆ ಬಿಡುಗಡೆ ಆಗಿದೆ. ಈಗಾಗಲೇ ಪಠಾಣ್ ಸಿನಿಮಾದ ಕುರಿತಾಗಿ ಎದ್ದಿರುವ ವಿ ವಾ ದಗಳ ವಿಷಯ ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಇಲ್ಲ. ಈ ಸಿನಿಮಾವನ್ನು ಬಾಯ್ಕಾಟ್ ಮಾಡಬೇಕೆನ್ನುವ ಕೂಗು ಸಹಾ ಸೋಶಿಯಲ್ ಮೀಡಿಯಾಗಳಲ್ಲಿ ಕೇಳಿ ಬಂದಿದೆ. ಈಗ ಬಿಡುಗಡೆ ಆಗಿರುವ ಟ್ರೈಲರ್ ನಲ್ಲಿ ಸಿನಿಮಾದಲ್ಲಿನ ಹತ್ತು ಹಲವು ಅಂಶಗಳನ್ನು ಪ್ರೇಕ್ಷಕರ ಮುಂದೆ ಇಡುವ ಪ್ರಯತ್ನವನ್ನು ಮಾಡಲಾಗಿದೆ.‌ ಉ ಗ್ರ ವಾ ದಿಗಳು ಮತ್ತು ಭಾರತದ ರಕ್ಷಣೆ ಹೊತ್ತ ‘ರಾ’ ಏಜೆಂಟ್ ನಡುವಿನ ಕಥಾಹಂದರವನ್ನು ಸಿನಿಮಾ ಒಳಗೊಂಡಿದೆ.

ರಾಕಿಭಾಯ್ ಪಾತ್ರಕ್ಕೆ ಬೇರೊಬ್ಬ ನಟ ಬರಬಹುದು: ಹೊಂಬಾಳೆ ಫಿಲ್ಮ್ಸ್ ಕೊಟ್ಟ ಶಾಕ್!

ಪಠಾಣ್ ಅಪ್ಪಟ ದೇಶಪ್ರೇಮಿಯೊಬ್ಬನು ಭ ಯೋ ತ್ಪಾ ದಕರನ್ನು ಹೇಗೆ ಹಿಮ್ಮೆಟ್ಟಿಸುವನು ಎನ್ನುವ ಕಥಾ ಹಂದರದೊಂದಿಗೆ ಸಾಗುತ್ತದೆ. ಇದೊಂದು ಅಪ್ಪಟ ದೇಶಭಕ್ತಿಯನ್ನು(Patriotic) ಸಾರುವ ಸಿನಿಮಾ ಆಗಿದೆ ಎಂದು ನಟ ಶಾರುಖ್ ಖಾನ್(Shah Rukh Khan) ಹೇಳಿದ್ದಾರೆ. ಟ್ರೈಲರ್ ಪ್ರೇಕ್ಷಕರ ಮುಂದೆ ಒಂದಷ್ಟು ಅಚ್ಚರಿ ವಿಷಯಗಳನ್ನು ಹೊತ್ತು ತಂದಿದೆ. ಸಿನಿಮಾದ ಪ್ರಮುಖ ಪಾತ್ರಗಳ ಹಿನ್ನೆಲೆಯನ್ನು ಸಹಾ ಟ್ರೈಲರ್ ನಲ್ಲಿ ನಾವು ನೋಡಬಹುದಾಗಿದೆ. ಬಾಲಿವುಡ್ ನ ಮತ್ತೊಬ್ಬ ಸ್ಟಾರ್ ನಟ ಜಾನ್ ಅಬ್ರಾಹಂ ಉ ಗ್ರ ಸಂಘಟನೆಯ ನಾಯಕನಾಗಿದ್ದಾರೆ.

ನಾಯಕ ಶಾರೂಖ್ ಈ ಸಿನಿಮಾದಲ್ಲಿ ಶಾರುಖ್ ರಾ ಏಜೆಂಟ್ ಪಾತ್ರವನ್ನು ಮಾಡಿದ್ದಾರೆ. ನಟ ಜಾನ್ ಅಬ್ರಹಾಂ (John Abraham) ಔಟ್ ಪುಟ್ ಎಕ್ಸ್ ಎನ್ನುವ ಹೆಸರಿನ ಉ ಗ್ರ ಸಂಘಟನೆಯ ಮುಖ್ಯಸ್ಥನಾಗಿ ಭಾರತದ ಮೇಲೆ ಧಾ ಳಿ ಯನ್ನು ಮಾಡುವ ಸಂಚನ್ನು ಹೂಡಿದಾಗ ರಾ ಏಜೆಂಟ್ ಆದ ಶಾರೂಖ್ ಖಾನ್( Shah Rukh Khan about Pathan movie ) ಅದನ್ನು ಹೇಗೆ ತಡೆಯುತ್ತಾರೆ? ಎನ್ನುವ ರೋಚಕ ಕಥೆಯನ್ನು ಒಳಗೊಂಡಿದೆ. ಅಲ್ಲದೇ ಈ ಸಿನಿಮಾದಲ್ಲಿ ಶಾರೂಖ್ ವರ್ಷಗಳ ನಂತರ ಸಾಹಸಮಯ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶಾರೂಖ್ ಖಾನ್ ಲುಕ್ ನೋಡಿ ಅವರ ಫ್ಯಾನ್ಸ್ ಫಿದಾ ಆಗಿದ್ದಾರೆ.

LEAVE A REPLY

Please enter your comment!
Please enter your name here