Latest Breaking News

ಆಕೆ ನನ್ನ ಹಿಂದೆ ಬಿದ್ದಿದ್ದಳು: ಬಾಲಿವುಡ್ ನಟಿ ಮೇಲೆ 200 ಕೋಟಿ ವಂಚಕನಿಂದ ಗಂಭೀರ ಆರೋಪ

0 3,905

Get real time updates directly on you device, subscribe now.

ವಂಚಕ ಸುಕೇಶ್‌ ಚಂದ್ರಶೇಖರ್‌(Sukhesh Chandrasekhar) ಕುರಿತಾಗಿ ಕಳೆದ ಕೆಲವು ತಿಂಗಳುಗಳಿಂದಲೂ ಸಹಾ ಸಾಕಷ್ಟು ಸುದ್ದಿಗಳಾಗುತ್ತಲೇ ಇದೆ. ಇದಕ್ಕೆ ಪ್ರಮುಖ ಕಾರಣ ಈ ಪ್ರಕರಣದಲ್ಲಿ ಬಾಲಿವುಡ್ ನ(Bollywood) ಇಬ್ಬರು ಜನಪ್ರಿಯ ನಟಿಯರ ಹೆಸರು ತಳಕು ಹಾಕಿಕೊಂಡಿರುವುದೇ ಆಗಿದೆ. ಹೌದು, ಬಾಲಿವುಡ್ ನಟಿಯರಾದ ಜಾಕ್ವೆಲಿನಾ ಫರ್ನಾಂಡೀಸ್ (Jacqueline Fernandez) ಮತ್ತು ಡ್ಯಾನ್ಸರ್ ಹಾಗೂ ನಟಿ ಕೂಡಾ ಆಗಿರುವ ನೋರಾ ಫತೇಹಿ (Nora Fatehi) ಇಬ್ಬರೂ ಸಹಾ ಸುಕೇಶ್ ಜೊತೆಗೆ ನಂಟು ಹೊಂದಿದ್ದರು ಎನ್ನುವ ಕಾರಣದಿಂದಾಗಿ ಅವರನ್ನು ಈಗಾಗಲೇ ವಿಚಾರಣೆ ಸಹಾ ಮಾಡಲಾಗಿದೆ.

ಈ ಪ್ರಕರಣದ ವಿಚಾರವಾಗಿ ದೇಶವ್ಯಾಪಿಯಾಗಿ ದೊಡ್ಡ ಮಟ್ಟದಲ್ಲಿ ಸುದ್ದಿಗಳಾಗಿದೆ. ಇವೆಲ್ಲವುಗಳ ನಟಿ ನೋರಾ ಫತೇಹಿ(Nora Fatehi) ಸುಕೇಶ್ ಬಗ್ಗೆ ಮಾತನಾಡುತ್ತಾ, ಆತ ತನಗೆ ಆಮಿಷವನ್ನು ಒಡ್ಡಿದ್ದನೆಂದು ಆರೋಪವನ್ನು ಮಾಡಿದ್ದರು. ಆದರೆ ಈಗ ನಟಿಯ ಆರೋಪದ ಬೆನ್ನಲ್ಲೇ, ಸುಕೇಶ್‌ ಚಂದ್ರಶೇಖರ್(Sukhesh Chandrasekhar) ಕೂಡಾ ಬಾಲಿವುಡ್ ನ ಈ ನಟಿಯ ವಿ ರು ದ್ಧ ಮತ್ತೊಂದು ಹೇಳಿಕೆಯನ್ನು ನೀಡುವ ಮೂಲಕ ಅಚ್ಚರಿಯನ್ನು ಮೂಡಿಸಿದ್ದು, ಇಷ್ಟಕ್ಕೂ ಸುಕೇಶ್ ಈಗ ನೋರಾ ಮೇಲೆ ಮಾಡಿದ ಆ ರೋ ಪ ವಾದರೂ ಏನು ಎನ್ನುವುದಕ್ಕೆ ಇಲ್ಲಿದೆ ಉತ್ತರ.

ಸುಕೇಶ್(Sukhesh) ಮಾಡಿರುವ ಆ ರೋ ಪ ದಲ್ಲಿ ಆತ, ನೋರಾ(Nora) ನನ್ನ ಹಿಂದೆ ಬಿದ್ದಿದ್ದಳು ಎಂದಿದ್ದು, ಆಕೆ ತನಗೆ ದಿನಕ್ಕೆ 10 ಬಾರಿ ಕರೆ ಮಾಡುತ್ತಿದ್ದಳು ಎಂದಿದ್ದಾನೆ. ಅಲ್ಲದೇ,  ನಾನು ನಟಿ ಜಾಕ್ವೆಲಿನಾ ಫೆರ್ನಾಂಡಿಸ್‌ ಜೊತೆಗೆ ಡೇಟ್‌ ಮಾಡುತ್ತಿದ್ದ ದಿನಗಳಲ್ಲಿ, ನೋರಾ ಆಕೆಯ ಬಗ್ಗೆ ಬಹಳ ಅಸೂಯೆ ಪಟ್ಟುಕೊಂಡಿದ್ದಳು ಎನ್ನುವ ಮಾತನ್ನು ಸಹಾ ಸುಕೇಶ್ ಹೇಳಿದ್ದಾನೆ. ನಾನು ನೋರಾಳನ್ನು ದೂರ ತಳ್ಳುತ್ತಿದ್ದರೂ ಸಹಾ ಅದಕ್ಕೆ ಆಕೆ ಕಿರಿ ಕಿರಿ ಮಾಡುತ್ತಿದ್ದಳು ಎಂದು ಸುಕೇಶ್‌ ನಟಿ ನೋರಾ ಫತೇಹಿಯನ್ನು ದೂರಿದ್ದಾನೆ. ಪ್ರಸ್ತುತ ಸುಕೇಶ್ ಚಂದ್ರಶೇಖರ್ ತಿಹಾಲ್ ಜೈಲಿನಲ್ಲಿ ಇದ್ದಾನೆ.

Get real time updates directly on you device, subscribe now.

Leave a comment