Shikhar Dhawan: ಸೆಲೆಬ್ರಿಟಿಗಳ ಲೋಕದಲ್ಲಿ ಮತ್ತೊಂದು ವಿಚ್ಛೇದನ ಪ್ರಕರಣ, ಪತ್ನಿಯಿಂದ ವಿಚ್ಛೇದನ ಪಡೆದ ಕ್ರಿಕೆಟರ್ ಶಿಖರ್ ಧವನ್

Written by Pooja Siddaraj

Published on:

ಇತ್ತೀಚಿನ ದಿನಗಳಲ್ಲಿ ಮದುವೆಯ ಸಂಬಂಧ ಹೆಚ್ಚು ದಿನ ಉಳಿಯುತ್ತಿಲ್ಲ. ಇಂದು ಮದುವೆಯಾಗಿ ಕೆಲವೇ ದಿನಕ್ಕೆ ಅಥವಾ ಕೆಲವೇ ವರ್ಷಗಳಿಗೆ ವಿಚ್ಛೇದನ ಪಡೆದುಕೊಳ್ಳುತ್ತಾರೆ. ಇನ್ನು ಕೆಲವರು ವರ್ಷಗಳ ಕಾಲ ಜೊತೆಯಾಗಿ ಜೀವಿಸಿದರು, ಕೊನೆಗೆ ವಿಚ್ಛೇದನ ಪಡೆಯುತ್ತಿದ್ದಾರೆ. ಇಂಥ ಹಲವು ಘಟನೆಗಳನ್ನು ನಾವು ನೋಡುತ್ತಲೇ ಇದ್ದೇವೆ. ಇದೀಗ ಮಾಧ್ಯಮದಲ್ಲಿ ಮತ್ತೊಂದು ವಿಚ್ಛೇದನ ಪ್ರಕರಣ ಚರ್ಚೆಗೆ ಒಳಗಾಗಿದೆ.

ಈ ಬಾರಿ ವಿಚ್ಛೇದನ ಪಡೆದಿರುವುದು ಭಾರತ ತಂಡದ ಮಾಜಿ ಕ್ರಿಕೆಟಿಗ ಶಿಖರ್ ಧವನ್. ಹೌದು, ನಿನ್ನೆ ಶಿಖರ್ ಧವನ್ ಅವರು ದೆಹಲಿಯ ಲೋಕಲ್ ಕೋರ್ಟ್ ಒಂದರ ಮೂಲಕ ಪತ್ನಿ ಆಯೇಷಾ ಮುಖರ್ಜಿ ಅವರಿಗೆ ವಿಚ್ಛೇದನ ನೀಡಿದ್ದಾರೆ. ಈ ಸುದ್ದಿ ಈಗ ಚರ್ಚೆಗೆ ಒಳಗಾಗಿದೆ. ಶಿಖರ್ ಧವನ್ ಅವರು ವಿಚ್ಛೇದನ ಪಡೆಯುವುದಕ್ಕೆ ಕಾರಣ ಪತ್ನಿಯಿಂದ ಅವರಿಗೆ ಮಾನಸಿಕವಾಗಿ ಹಿಂಸೆ ಆಗುತ್ತಿತ್ತು ಎಂದು ತಿಳಿಸಲಾಗಿದೆಯಂತೆ.

ಆಯೇಷಾ ಮುಖರ್ಜಿ ಅವರು ಮಕ್ಕಳ ಜೊತೆಗೆ ಮತ್ತು ಪತಿಯ ಜೊತೆಗೆ ಭಾರತದಲ್ಲೇ ಇರುವುದಾಗಿ ಮಾತು ಕೊಟ್ಟು, ಅದನ್ನು ಉಳಿಸಿಕೊಂಡಿಲ್ಲ ಎಂದು ಶಿಖರ್ ಧವನ್ ಅವರು ಹೇಳಿದ್ದಾರೆ. ಮಕ್ಕಳನ್ನು ಭೇಟಿ ಮಾಡಲು ಅವಕಾಶ ಕೊಡುತ್ತಿಲ್ಲ, ಹೀಗೆಲ್ಲಾ ನಡೆಯುತ್ತರಿವುದರಿಂದ ಮಾನಸಿಕವಾಗಿ ಹಿಂಸೆ ಆಗುತ್ತಿದೆ ಎಂದು ಶಿಖರ್ ಧವನ್ ಅವರು ಆರೋಪ ಮಾಡಿದ್ದು, ಇದನ್ನು ಅವರ ಪತ್ನಿ ನಿರಾಕರಿಸಿಲ್ಲ ಎಂದು ಮಾಹಿತಿ ಸಿಕ್ಕಿದೆ. ದೆಹಲಿಯ ಕೋರ್ಟ್ ನ ಜಡ್ಜ್ ಹರೀಶ್ ಕುಮಾರ್ ಅವರು ಎರಡು ಕಡೆಯಿಂದ ಮಾತುಗಳನ್ನು ಆಲಿಸಿದ್ದಾರೆ.

ಆರೋಪಗಳನ್ನು ಕೇಳಿದ ಬಳಿಕ ಶಿಖರ್ ಧವನ್ ಮತ್ತು ಆಯೇಷಾ ಮುಖರ್ಜಿ ದಂಪತಿಗೆ ವಿಚ್ಛೇದನ ನೀಡಿದೆ..ಆದರೆ ಮಗುವಿನ ಕಸ್ಟಡಿಯನ್ನು ಪೂರ್ತಿಯಾಗಿ ಶಿಖರ್ ಧವನ್ ಅವರಿಗೆ ನೀಡಿಲ್ಲ. ಆದರೆ ಶಿಖರ್ ಧವನ್ ಅವರು ಇಂತಿಷ್ಟು ಸಮಯಗಳ ಕಾಲ ಮಗುವನ್ನು ಭೇಟಿಯಾಗಲು ಅನುಮತಿ ನೀಡಲಾಗಿದೆ, ಕುಟುಂಬದ ಜೊತೆಗೆ ಸ್ಟೇ ಮಾಡುವುದಕ್ಕೂ ಶಿಖರ್ ಧವನ್ ಅವರಿಗೆ ಅವಕಾಶ ನೀಡಲಾಗಿದೆ. ಜೊತೆಗೆ ಮಗನಿಗೆ ಶಾಲೆಯಲ್ಲಿ ರಜೆ ಇದ್ದಾಗ, ಅರ್ಧದಷ್ಟು ಸಮಯವನ್ನಾದರು ಭಾರತಕ್ಕೆ ಬಂದು ತಂದೆಯ ಜೊತೆಗೆ ಕಳೆಯಬೇಕು ಎಂದು ಕೋರ್ಟ್ ತೀರ್ಪು ನೀಡಿದೆ..

ಇಷ್ಟು ಕಂಡೀಷನ್ ಗಳನ್ನು ಶಿಖರ್ ಧವನ್ ಮತ್ತು ಅವರ ಪತ್ನಿಗೆ ಹಾಕಲಾಗಿದ್ದು, ವಿಚ್ಛೇದನ ನೀಡಲಾಗಿದೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಈ ಸುದ್ದಿ ವೈರಲ್ ಆಗಿದ್ದು, ಅಭಿಮಾನಿಗಳು ಬೇಸರ ಪಟ್ಟುಕೊಂಡಿದ್ದಾರೆ. ಶಿಖರ್ ಧವನ್ ಅವರು ಈ ಸಮಯದಲ್ಲಿ ಸ್ಟ್ರಾಂಗ್ ಆಗಿರಬೇಕು ಎಂದು ಎಲ್ಲರೂ ಹಾರೈಸುತ್ತಿದ್ದಾರೆ.

Leave a Comment