Shilpa Shetty: ಕರಾವಳಿ ಮೂಲದ ಬೆಡಗಿ ಶಿಲ್ಪಾ ಶೆಟ್ಟಿ ಬಾಲಿವುಡ್ ನಲ್ಲಿ ಎಷ್ಟು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ ಎನ್ನುವ ವಿಷಯ ನಮಗೆಲ್ಲ ಗೊತ್ತೇ ಇದೆ. ಶಿಲ್ಪಾ ಶೆಟ್ಟಿ ಅವರು ಕಳೆದ ವರ್ಷ ಗಂಡನ ವಿಚಾರಕ್ಕೆ ಸಿಕ್ಕಾಪಟ್ಟೆ ಸುದ್ದಿಯಾಗಿದ್ದರು. ಶಿಲ್ಪಾ ಶೆಟ್ಟಿ ಅವರ ಗಂಡ ರಾಜ್ ಕುಂದ್ರಾ ವಯಸ್ಕರ ಸಿನಿಮಾ ನಿರ್ಮಾಣ ಮಾಡಿದ್ದಾರೆ ಎನ್ನುವ ಕಾರಣಕ್ಕೆ ಅವರನ್ನು ಅರೆಸ್ಟ್ ಮಾಡಲಾಗಿತ್ತು.
ರಾಜ್ ಕುಂದ್ರಾ ಅವರು ಸುಮಾರು 63 ದಿನಗಳ ಕಾಲ ಜೈಲಿನಲ್ಲಿ ಇರುವ ಪರಿಸ್ಥಿತಿ ಬಂದು, ನಂತರ ಬೇಲ್ ಮೂಲಕ ಹೊರಗಡೆ ಬಂದಿದ್ದರು. ಆಗಿನಿಂದ ರಾಜ್ ಕುಂದ್ರಾ ಅವರು ಹೊರಗಡೆ ಕಾಣಿಸಿಕೊಂಡಾಗ ಮುಖಕ್ಕೆ ಮಾಸ್ಕ್ ಹಾಕಿಕೊಂಡೆ ಬರುತ್ತಿದ್ದರು. ಎಲ್ಲಿಯೂ ಮುಖ ತೋರಿಸುತ್ತಿರಲಿಲ್ಲ, ಆದರೆ ಅವರು ನಿರ್ಮಾಣ ಮಾಡಿರುವ ಸಿನಿಮಾ ಟ್ರೈಲರ್ ಲಾಂಚ್ ವೇಳೆ ಮಾಸ್ಕ್ ತೆಗೆದು ಎಲ್ಲರಿಗೂ ಮುಖ ತೋರಿಸಿದರು..
ರಾಜ್ ಕುಂದ್ರಾ ಅವರ UT69 ಸಿನಿಮಾ ಟ್ರೈಲರ್ ಬಿಡುಗಡೆ ಆಗಿದ್ದು, ಇದು ರಾಜ್ ಕುಂದ್ರಾ ಅವರ ಜೀವನದ ಘಟನೆಗಳನ್ನು ಆಧರಿಸಿ ಮಾಡಿರುವ ಸಿನಿಮಾ ಎನ್ನಲಾಗಿದೆ. ಈ ಟ್ರೈಲರ್ ಗೆ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿನಿಮಾ ವಿಷಯ ಒಂದು ಕಡೆಯಾದರೆ, ಮತ್ತೊಂದು ಕಡೆ ರಾಜ್ ಕುಂದ್ರಾ ಅವರು ವೈಯಕ್ತಿಕ ಜೀವನಫ ವಿಚಾರವಾಗಿ ಸುದ್ದಿಯಾಗಿದ್ದಾರೆ.
ಇಂದು ಮಧ್ಯರಾತ್ರಿ ರಾಜ್ ಕುಂದ್ರಾ ಅವರು ಒಂದು ಟ್ವೀಟ್ ಮಾಡಿದ್ದಾರೆ, “ನಾವು ಸೆಪರೇಟ್ ಆಗಿದ್ದೇವೆ, ಈ ಕಷ್ಟದ ಸಂದರ್ಭದಲ್ಲಿ ನಮಗೆ ಸ್ಪೇಸ್ ಕೊಡಿ..” ಎಂದು ಟ್ವೀಟ್ ಮಾಡಿದ್ದು, ಈ ಟ್ವೀಟ್ ಗೆ ನೆಟ್ಟಿಗರು ವಿಭಿನ್ನವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ವಿಚ್ಛೇದನ ಪಡೆದುಕೊಳ್ಳುತ್ತಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ, ಇನ್ನು ಕೆಲವರು ಶಿಲ್ಪಾ ಶೆಟ್ಟಿ ವಿಚ್ಛೇದನ ನೀಡಿಲ್ಲ ಎನ್ನುತ್ತಿದ್ದಾರೆ. ಸೆಪರೇಟ್ ಆಗಿದ್ದೇವೆ ಎಂದು ಮಾತ್ರ ಟ್ವೀಟ್ ಮಾಡಲಾಗಿದ್ದು, ವಿಚ್ಛೇದನ ಎನ್ನುವ ಪದಬಳಕೆ ಆಗಿಲ್ಲ.
ಅಭಿಮಾನಿಗಳು ಇದನ್ನು ನೋಡಿ, ಸಿನಿಮಾ ಪ್ರಚಾರದ ಗಿಮಿಕ್ಸ್ ಇರಬಹುದು ಎಂದು ಸಹ ಊಹಿಸಿದ್ದಾರೆ. ಇಂಥ ಚೀಪ್ ಗಿಮಿಕ್ಸ್ ಮಾಡಬೇಡಿ ಎಂದು ಕೆಲವರು ರಾಜ್ ಕುಂದ್ರಾ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದು ಎಷ್ಟರ ಮಟ್ಟಿಗೆ ನಿಜ ಅಥವಾ ಸುಳ್ಳು ಎನ್ನುವುದು ಗೊತ್ತಿಲ್ಲ, ಆದರೆ ಈ ವಿಚಾರ ವೈರಲ್ ಆಗುತ್ತಿದ್ದು, ಶಿಲ್ಪಾ ಶೆಟ್ಟಿ ಅವರ ಪ್ರತಿಕ್ರಿಯೆಗೆ ಕಾಯುತ್ತಿದ್ದಾರೆ ನೆಟ್ಟಿಗರು
We have separated and kindly request you to give us time during this difficult period 🙏💔
— Raj Kundra (@onlyrajkundra) October 19, 2023