Shiva Rajkumar: ಚಂದನವನದ ಸೆಂಚುರಿ ಸ್ಟಾರ್ ಶಿವಣ್ಣ ಅವರ ಒಟ್ಟು ಆಸ್ತಿ ಎಷ್ಟು ಗೊತ್ತಾ?

Written by Pooja Siddaraj

Published on:

Shiva Rajkumar: ಕನ್ನಡದ ಮೇರುನಟ ಡಾ. ರಾಜ್ ಕುಮಾರ್ ಅವರ ಮೊದಲ ಮಗನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು ಶಿವಣ್ಣ. ಶಿವಣ್ಣ ಅವರ ಮೊದಲ ಸಿನಿಮಾ ಆನಂದ್ ಬಿಡುಗಡೆಯಾಗಿ 37 ವರ್ಷ ಕಳೆದಿದೆ. ಆದರೆ ಶಿವಣ್ಣ ಅವರಿಗೆ ಚಿತ್ರರಂಗದಲ್ಲಿ ಇರುವ ಬೇಡಿಕೆ ಮಾತ್ರ ಕಡಿಮೆ ಆಗಿಲ್ಲ. ಇಂದಿಗೂ ಶಿವಣ್ಣ ಅವರ ಎನರ್ಜಿ ಎಲ್ಲರಿಗೂ ಸ್ಪೂರ್ತಿ ಎಂದರೆ ತಪ್ಪಲ್ಲ.

ಇತ್ತೀಚೆಗೆ ಶಿವಣ್ಣ ಅವರು ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಕೂಡ ಸಿಕ್ಕಾಪಟ್ಟೆ ಪಾಪ್ಯುಲರ್ ಆಗಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ಅವರ ಜೈಲರ್ ಸಿನಿಮಾದಲ್ಲಿ ಶಿವಣ್ಣ ಅವರು ಅತಿಥಿ ಪಾತ್ರದಲ್ಲಿ ನಟಿಸಿದರು. ಶಿವಣ್ಣ ಕಾಣಿಸಿಕೊಂಡಿದ್ದು ಎರಡೇ ದೃಶ್ಯದಲ್ಲಿ ಆದರೂ ಜೈಲರ್ ಸಿನಿಮಾದಲ್ಲಿ ಅತಿಹೆಚ್ಚು ಹೈಲೈಟ್ ಆಗಿದ್ದು ಶಿವಣ್ಣ ಅವರೇ ಎಂದರೆ ತಪ್ಪಲ್ಲ.

ಶಿವಣ್ಣ ಅವರ ಆ ವಾಕ್ ಮತ್ತು ಅವರ ಕಣ್ಣುಗಳಲ್ಲಿ ಇದ್ದ ಪವರ್ ಗೆ ಅಭಿಮಾನಿಗಳು ಫಿದಾ ಆಗಿ, ಥಿಯೇಟರ್ ನಲ್ಲಿ ಶಿಳ್ಳೆ ಚಪ್ಪಾಳೆ ಕೇಳಿಬಂದಿತ್ತು. ಆಗಿನಿಂದ ಬೇರೆ ಭಾಷೆಯ ಸಿನಿಪ್ರಿಯರು ಕೂಡ ಶಿವಣ್ಣ ಅವರ ಸಿನಿಮಾಗಳನ್ನು ಹುಡುಕಿ ನೋಡುತ್ತಿದ್ದಾರೆ. ಶಿವಣ್ಣ ಅವರ ಅಭಿಮಾನಿ ಬಳಗ ಕೂಡ ಇನ್ನು ದೊಡ್ಡದಾಗಿದೆ. ಪ್ರಸ್ತುತ ಶಿವಣ್ಣ ಅವರ ಸಿನಿಮಾ ಘೋಸ್ಟ್ ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನಿಮಾವನ್ನು ಶ್ರೀನಿ ನಿರ್ದೇಶನ ಮಾಡಿದ್ದಾರೆ..

ಘೋಸ್ಟ್ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಬಿಡುಗಡೆ ಆಗುತ್ತಿದೆ. ಘೋಸ್ಟ್ ಸಿನಿಮಾ ಟೀಸರ್, ಟ್ರೈಲರ್ ಮತ್ತು ಹಾಡುಗಳಿಂದಲೇ ಭಾರಿ ಸದ್ದು ಮಾಡುತ್ತಿದೆ. ಆಕ್ಟೊಬರ್ 19ರಂದು ಘೋಸ್ಟ್ ಸಿನಿಮಾ ಬಿಡುಗಡೆ ಆಗುತ್ತಿದೆ. ಈ ಸಿನಿಮಾದಲ್ಲಿ ಬಾಲಿವುಡ್ ನ ಅನುಪಮ್ ಖೇರ್, ಮಲಯಾಳಂ ಚಿತ್ರರಂಗದ ನಟ ಜಯರಾಮ್ ಅವರು ಅತಿಥಿ ಪಾತ್ರಗಳಲ್ಲಿ ನಟಿಸಿರುವುದು ವಿಶೇಷವಾಗಿದೆ. ಹಾಗೆಯೇ ಶಿವಣ್ಣ ಅವರು ಆನಂದ್ ಸಿನಿಮಾದ ಲುಕ್ ನಲ್ಲಿ ಸಹ ಕಾಣಿಸಿಕೊಂಡಿದ್ದಾರೆ.

ಸಾಕಷ್ಟು ವಿಶೇಷತೆಗಳನ್ನು ಒಳಗೊಂಡಿರುವ ಘೋಸ್ಟ್ ಸಿನಿಮಾ ನೋಡಲು ಸಿನಿಪ್ರಿಯರು ಕಾತುರರಾಗಿ ಕಾಯುತ್ತಿದ್ದಾರೆ. ಸಿನಿಮಾ ಪ್ರೊಮೋಷನ್ ನಲ್ಲಿ ಬ್ಯುಸಿ ಇರುವ ಶಿವಣ್ಣ ಅವರ ಒಟ್ಟು ಆಸ್ತಿ ಎಷ್ಟು ಎನ್ನುವ ಚರ್ಚೆ ಈಗ ನಡೆಯುತ್ತಿದ್ದು, ಶಿವಣ್ಣ ಅವರ ಸಂಭಾವನೆ ಎಷ್ಟಿರಬಹುದು ಎನ್ನುವ ಕುತೂಹಲ ಕೂಡ ಜನರಲ್ಲಿದೆ, ಈ ಪ್ರಶ್ನೆಗೆ ಇಂದು ಉತ್ತರ ತಿಳಿದುಕೊಳ್ಳೋಣ.

ಶಿವಣ್ಣ ಅವರು ಭಾರತದ ದೊಡ್ಡ ಸ್ಟಾರ್ ಹೀರೋ ಮಗ ಆಗಿದ್ದರು ಕೂಡ ತಮ್ಮ ಪ್ರತಿಭೆ ಇಂದ ಹೆಸರು ಮಾಡಿದ್ದಾರೆ, ಇಷ್ಟು ಎತ್ತರಕ್ಕೆ ಬೆಳೆದಿದ್ದಾರೆ. ಈಗ ಶಿವಣ್ಣ ಅವರು ಒಂದು ಸಿನಿಮಾಗೆ 1 ಕೋಟಿ ವರೆಗು ಸಂಭಾವನೆ ಪಡೆದುಕೊಳ್ಳುತ್ತಾರೆ ಎನ್ನಲಾಗುತ್ತಿದ್ದು, ಶಿವಣ್ಣ ಅವರ ಒಟ್ಟು ಆಸ್ತಿ ಸುಮಾರು 180 ರಿಂದ 200 ಕೋಟಿವರೆಗು ಇದೆ ಎಂದು ಮಾಹಿತಿಯ ಪ್ರಕಾರ ತಿಳಿದುಬಂದಿದೆ.

Leave a Comment