Shiva Rajkumar: ಕನ್ನಡದ ಮೇರುನಟ ಡಾ. ರಾಜ್ ಕುಮಾರ್ ಅವರ ಮೊದಲ ಮಗನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು ಶಿವಣ್ಣ. ಶಿವಣ್ಣ ಅವರ ಮೊದಲ ಸಿನಿಮಾ ಆನಂದ್ ಬಿಡುಗಡೆಯಾಗಿ 37 ವರ್ಷ ಕಳೆದಿದೆ. ಆದರೆ ಶಿವಣ್ಣ ಅವರಿಗೆ ಚಿತ್ರರಂಗದಲ್ಲಿ ಇರುವ ಬೇಡಿಕೆ ಮಾತ್ರ ಕಡಿಮೆ ಆಗಿಲ್ಲ. ಇಂದಿಗೂ ಶಿವಣ್ಣ ಅವರ ಎನರ್ಜಿ ಎಲ್ಲರಿಗೂ ಸ್ಪೂರ್ತಿ ಎಂದರೆ ತಪ್ಪಲ್ಲ.
ಆದರೆ ಇದೀಗ ಶಿವಣ್ಣ ಅವರ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಿದ್ದು, ಇದ್ದಕ್ಕಿದ್ದ ಹಾಗೆ ಶಿವಣ್ಣ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಶಿವಣ್ಣ ಅವರು ಆಸ್ಪತ್ರೆಗೆ ಹೋಗುತ್ತಿದ್ದ ಹಾಗೆಯೇ ಇತ್ತ ಅಭಿಮಾನಿಗಳಿಗೆ ಬಹಳ ಆತಂಕ ಶುರುವಾಗಿತ್ತು. ಶಿವಣ್ಣ ಅವರಿಗೆ ಏನಾಗಿದೆ? ಇದ್ದಕ್ಕಿದ್ದ ಹಾಗೆ ಯಾಕೆ ಆಸ್ಪತ್ರೆಗೆ ಹೋಗಿದ್ದಾರೆ, ಆರೋಗ್ಯದಲ್ಲಿ ಗಂಭೀರವಾದ ಸಮಸ್ಯೆ ಉಂಟಾಗಿದ್ಯಾ ಎಂದು ಆತಂಕ ಪಟ್ಟುಕೊಂಡಿದ್ದರು.
ಶಿವಣ್ಣ ಅವರು ನಿನ್ನೆ ಬೆಂಗಳೂರಿನ ವೈದೇಹಿ ಆಸ್ಪತ್ರೆಗೆ ಹೋಗಿ, ದಾಖಲಾಗಿ ಪರೀಕ್ಷೆಗೆ ಒಳಪಡಿಸಲಾಯಿತು. ಶಿವಣ್ಣ ಅವರ ಆರೋಗ್ಯದ ಬಗ್ಗೆ ವೈದ್ಯರು ಈಗ ಮಾಹಿತಿ ಸಿಕ್ಕಿದ್ದು, ಶಿವಣ್ಣ ಅವರು ಒಂದೆರಡು ದಿನಗಳಿಂದ ಜ್ವರದಿಂದ ಬಳಲುತ್ತಿದ್ದಾರೆ. ಹಾಗೆಯೇ ನಿನ್ನೆ ಅವರಿಗೆ ಸುಸ್ತು ಹೆಚ್ಚಾದ ಕಾರಣ ಶಿವಣ್ಣ ಅವರು ಆಸ್ಪತ್ರೆಗೆ ಹೋಗಿ ಚೆಕ್ ಮಾಡಿಸಿಕೊಂಡಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಶಿವಣ್ಣ ಅವರ ಆರೋಗ್ಯದ ಬಗ್ಗೆ ಆತಂಕ ಪಡುವ ಹಾಗೇನಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಇತ್ತೀಚೆಗೆ ಶಿವಣ್ಣ ಅವರು ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಕೂಡ ಸಿಕ್ಕಾಪಟ್ಟೆ ಪಾಪ್ಯುಲರ್ ಆಗಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ಅವರ ಜೈಲರ್ ಸಿನಿಮಾದಲ್ಲಿ ಶಿವಣ್ಣ ಅವರು ಅತಿಥಿ ಪಾತ್ರದಲ್ಲಿ ನಟಿಸಿದರು. ಶಿವಣ್ಣ ಕಾಣಿಸಿಕೊಂಡಿದ್ದು ಎರಡೇ ದೃಶ್ಯದಲ್ಲಿ ಆದರೂ ಜೈಲರ್ ಸಿನಿಮಾದಲ್ಲಿ ಅತಿಹೆಚ್ಚು ಹೈಲೈಟ್ ಆಗಿದ್ದು ಶಿವಣ್ಣ ಅವರೇ ಎಂದರೆ ತಪ್ಪಲ್ಲ.
ಶಿವಣ್ಣ ಅವರ ಆ ವಾಕ್ ಮತ್ತು ಅವರ ಕಣ್ಣುಗಳಲ್ಲಿ ಇದ್ದ ಪವರ್ ಗೆ ಅಭಿಮಾನಿಗಳು ಫಿದಾ ಆಗಿ, ಥಿಯೇಟರ್ ನಲ್ಲಿ ಶಿಳ್ಳೆ ಚಪ್ಪಾಳೆ ಕೇಳಿಬಂದಿತ್ತು. ಆಗಿನಿಂದ ಬೇರೆ ಭಾಷೆಯ ಸಿನಿಪ್ರಿಯರು ಕೂಡ ಶಿವಣ್ಣ ಅವರ ಸಿನಿಮಾಗಳನ್ನು ಹುಡುಕಿ ನೋಡುತ್ತಿದ್ದಾರೆ. ಶಿವಣ್ಣ ಅವರ ಅಭಿಮಾನಿ ಬಳಗ ಕೂಡ ಇನ್ನು ದೊಡ್ಡದಾಗಿದೆ. ಎರಡು ವಾರಗಳ ಹಿಂದೆ ಶಿವಣ್ಣ ಅವರ ಘೋಸ್ಟ್ ಸಿನಿಮಾ ಬಿಡುಗಡೆಯಾಗಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡುತ್ತಿದೆ.