Puneeth Rajkumar: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಪಾಲಿನ ಪ್ರೀತಿಯ ಅಪ್ಪು ಇಂದು ನಮ್ಮೊಡನೆ ದೈಹಿಕವಾಗಿ ಇಲ್ಲ. ಅಪ್ಪು ಅವರು 2 ವರ್ಷಗಳ ಹಿಂದೆ, 2021ರ ಆಕ್ಟೊಬರ್ 29ರಂದು ಇಹಲೋಕ ತ್ಯಜಿಸಿದರು. ನಿನ್ನೆ ಅಪ್ಪು ಅವರ ಪುಣ್ಯಸ್ಮರಣೆ ದಿನ ಅವರ ಪುಣ್ಯಭೂಮಿಯ ಬಳಿ ಸಾವಿರಾರು ಜನ ಸೇರಿದ್ದರು. ಶಿವಣ್ಣ ಅವರು ಕೂಡ ಗೀತಕ್ಕ ಅವರ ಜೊತೆಗೆ ಬಂದು ಪೂಜೆ ಸಲ್ಲಿಸಿದರು. ನಿನ್ನೆ ಅಪ್ಪು ಅವರನ್ನು ನೆನೆದು ಶಿವಣ್ಣ ಅವರು ಹೇಳಿದ್ದೇನು ಗೊತ್ತಾ?
ಈ ಒಂದು ದಿನ ಬರಲೇಬಾರದಿತ್ತು ಎಂದೇ ಅಭಿಮಾನಿಗಳು ಬಯಸುತ್ತಾರೆ. ಆ ಒಂದು ದಿನ ಬಂದಿಲ್ಲ ಅಂದ್ರೆ ಇಡೀ ಕರ್ನಾಟಕಕ್ಕೆ ಈ ನೋವು ಇರುತ್ತಿರಲಿಲ್ಲ ಎನ್ನುತ್ತಾರೆ ಪವರ್ ಸ್ಟಾರ್ ಫ್ಯಾನ್ಸ್. ಅಪ್ಪು ಅವರು ಇನ್ನಿಲ್ಲ ಎನ್ನುವ ನೋವು ಅವರ ಅಭಿಮಾನಿಗಳಿಗೆ ಮಾತ್ರವಲ್ಲ, ಇಡೀ ಕರ್ನಾಟಕಕ್ಕೆ ದುಃಖ ನೀಡಿದ ವಿಷಯ. ಸದಾ ನಗುನಗುತ್ತಾ, ಎಲ್ಲರೊಡನೆ ಒಳ್ಳೆಯ ಒಡನಾಟ ಇಟ್ಟುಕೊಂಡು, ಸಮಾಜ ಸೇವೆ ಮಾಡಿಕೊಂಡು ಬಂದವರು ಅಪ್ಪು.
ಇಂದು ಅಪ್ಪು ಅವರು ಇಲ್ಲ ಎಂದರು ಕೂಡ ಅವರ ಅಭಿಮಾನಿಗಳು ಅಪ್ಪು ಅವರು ತೋರಿಸಿಕೊಟ್ಟ ದಾರಿಯಲ್ಲೇ ನಡೆಯುತ್ತಿದ್ದಾರೆ. ನಿನ್ನೆ ಅಪ್ಪು ಅವರ ಪುಣ್ಯ ಸ್ಮರಣೆಯ ದಿನ ಶಿವಣ್ಣ ಅವರು ಪುಣ್ಯಭೂಮಿಯ ಬಳಿ ಬಂದಾಗ ಹೇಳಿದ್ದೇನು ಗೊತ್ತಾ? ಶಿವಣ್ಣ ಅವರು ಗೀತಕ್ಕ ಅವರೊಡನೆ ಬಂದು ನಿನ್ನೆ ಪೂಜೆ ಸಲ್ಲಿಸಿದರು, ಆದರೆ ಅಪ್ಪು ಅವರ ಸಮಾಧಿ ಬಳಿ ಶಿವಣ್ಣ ಅವರು ಹೆಚ್ಚಾಗಿ ಬರುವುದಿಲ್ಲ, ಇದಕ್ಕೆ ಕಾರಣ ಏನು ಎನ್ನುವುದನ್ನು ತಿಳಿಸಿದ್ದಾರೆ.
ನಿನ್ನೆ ಮಾಧ್ಯಮದ ಎದುರು ಮಾತನಾಡಿದ ಶಿವಣ್ಣ, “ಅಪ್ಪು ಯಾವಾಗಲೂ ನಮ್ಮ ಜೊತೆಗೆ ಇದ್ದಾನೆ ಅಂತ ನಾನು ಯಾವಾಗಲೂ ಹೇಳ್ತೀನಿ.. ನಾನು ಇಲ್ಲಿಗೆ ಯಾಕೆ ಜಾಸ್ತಿ ಬರಲ್ಲ ಅಂದ್ರೆ ಇಲ್ಲಿಗೆ ಬಂದು, ಪೂಜೆ ಮಾಡಿ ಅಪ್ಪುನ ದೂರ ಕಳಿಸೋಕೆ ನನಗೆ ತುಂಬಾ ನೋವಾಗುತ್ತೆ. ಆದರೆ ಕಾರ್ಯ ಮಾಡಲೇಬೇಕಾಗಿರುವುದರಿಂದ ಬಂದಿದ್ದೇವೆ. ಇಲ್ಲದಿದ್ರೆ ಪೂಜೆ ಮಾಡೋದಿಲ್ಲ, ಅಪ್ಪು ಯಾವಾಗಲೂ ಮನಸ್ಸಲ್ಲೇ ಇರ್ತಾನೆ.
ದಿನಾ ಒಂದಲ್ಲ ಒಂದು ಸಾರಿ ಮಾತು ಬರುತ್ತೆ, ಹರ್ಟ್ ಆಗುತ್ತೆ, ಈ ಕಣ್ಣು ಎಲ್ಲಾನು ನೋಡ್ತಿದೆ, ಒಂದ್ಕಡೆ ಅದು ಕೂಡ ಸಮಾಧಾನ ಅಷ್ಟೇ. ರಾತ್ರಿ ಇಂದಾನು ಜನ ಇದ್ರಂತೆ, ಮನುಷ್ಯ ಸಂಪಾದನೆ ಮಾಡೋದು ಇದನ್ನೇ ಅಲ್ವಾ..ಹಣ ಸಂಪಾದನೆ ಮಾಡೋದಲ್ಲ, ಹೆಸರು ಸಂಪಾದನೆ ಮಾಡಬೇಕು. ಅಪ್ಪಾಜಿಯ ಮಗ ಆಗಿರೋದಕ್ಕೆ ಸಾರ್ಥಕ ಆಗಿದೆ, ಅಪ್ಪಾಜಿಗೆ ಇರೋ ಹೆಸರಿಗಿಂತ ಡಬಲ್ ಹೆಸರು ಮಾಡಿದ್ದಾನೆ ಅಪ್ಪು ಅಂದ್ರೆ ತಪ್ಪಾಗಲ್ಲ. ಇಷ್ಟು ಪ್ರೀತಿ ವಿಶ್ವಾಸ ಗಳಿಸಿರೋವಾಗ, ಬೇರೆ ಏನನ್ನು ನಾವು ಉಳಿಸಿಕೊಳ್ಳಲ್ಲ. ಹೆಸರನ್ನು ಮಾತ್ರ ಉಳಿಸಿಕೊಳ್ಳುತ್ತೇವೆ..” ಎಂದು ಹೇಳಿ ಭಾವುಕರಾಗಿದ್ದಾರೆ ಶಿವಣ್ಣ.