Shreyas Talpade: 47 ವರ್ಷದ ಬಾಲಿವುಡ್ ನಟ ಶ್ರೇಯಸ್ ತಲ್ಪಾಡೆಗೆ ಹೃದಯಾಘಾತ! ಬೆಚ್ಚಿಬಿದ್ದ ಚಿತ್ರರಂಗ

0 1

Shreyas Talpade: ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಎಷ್ಟೇ ಕಾಳಜಿ ವಹಿಸಿದರು ನಮ್ಮ ಊಹೆಗೂ ಮೀರಿದ ಘಟನೆಗಳು ನಡೆದು ಹೋಗುತ್ತದೆ. ಹೃದಯಾಘಾತ ಎನ್ನುವುದು ಚಿಕ್ಕವರಿಂದ ಹಿಡಿದು ದೊಡ್ಡವರವರೆಗು ಬರುತ್ತಿದೆ. ಚಿತ್ರರಂಗದ ಕಲಾವಿದರು ಫಿಟ್ನೆಸ್ ಬಗ್ಗೆ ಹೆಚ್ಚು ಗಮನ ಕೊಡುತ್ತಿದ್ದಾರೆ, ಹಾಗಿದ್ದರೂ ಸಹ ಅವರಲ್ಲಿ ಈ ಥರದ ಸಮಸ್ಯೆಗಳು ಕಂಡುಬರುತ್ತಿರುವುದು ಸಾಮಾನ್ಯ ಜನರಿಗು ಒಂದು ರೀತಿ ಶಾಕಿಂಗ್ ಆಗಿದೆ ಎಂದರೆ ತಪ್ಪಲ್ಲ.

ಇದೀಗ ಬಾಲಿವುಡ್ ನ ಖ್ಯಾತ ನಟ ಶ್ರೇಯಸ್ ತಲ್ಪಾಡೆ ಅವರು ಹೃದಯಾಘಾತಕ್ಕೆ ಒಳಗಾಗಿದ್ದಾರೆ. ನಿನ್ನೆ ಸಂಜೆ ಇವರಿಗೆ ಹೃದಯಾಘಾತವಾಗಿದೆ ಎಂದು ತಿಳಿದುಬಂದಿದೆ. ಶ್ರೇಯಸ್ ಅವರು ನಿನ್ನೆ ವೆಲ್ಕಮ್ ಟು ದಿ ಜಂಗಲ್ ಸಿನಿಮಾ ಶೂಟಿಂಗ್ ನಲ್ಲಿದ್ದರು. ಎಲ್ಲರೊಡನೆ ಖುಷಿಯಾಗಿ ತಮಾಷೆ ಮಾಡುತ್ತಾ ಮಾತನಾಡುತ್ತಿದ್ದ ವಿಡಿಯೋ ಸಹ ವೈರಲ್ ಆಗಿತ್ತು.

ಶೂಟಿಂಗ್ ಮುಗಿಸಿ ಮನೆಗೆ ಹೋದ ನಂತರ ಆರೋಗ್ಯದಲ್ಲಿ ಏರುಪೇರಾಗುತ್ತಿದೆ ಎಂದು ಪತ್ನಿಯ ಜೊತೆಗೆ ಹೇಳಿದ್ದಾರೆ., ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಮಾರ್ಗಮದ್ಯದಲ್ಲೇ ಶ್ರೇಯಸ್ ಅವರಿಗೆ ಹೃದಯಾಘಾತ ಆಗಿದ್ದು, ಆಸ್ಪತ್ರೆಯಲ್ಲಿ ಅವರಿಗೆ ಆಂಜಿಯೋಪ್ಲಾಸ್ಟಿ ಮಾಡಲಾಗಿದೆಯಂತೆ. ಅವರ ಆರೋಗ್ಯ ಈಗ ಸುಧಾರಿಸಿದ್ದು, ಆಸ್ಪತ್ರೆಯಲ್ಲೇ ಸ್ವಲ್ಪ ಸಮಯ ಇರಬೇಕು ಎಂದು ವೈದ್ಯರು ತಿಳಿಸಿದ್ದಾರೆ.

ಈ ಘಟನೆ ಇಂದ ಬಾಲಿವುಡ್ ಮಂದಿ ಶಾಕ್ ಆಗಿದ್ದಾರೆ ಎಂದರೆ ತಪ್ಪಲ್ಲ. ಶ್ರೇಯಸ್ ಅವರು ಫಿಟ್ ಆಗಿರಬೇಕು ಎಂದು ಜಿಮ್ ಹೋಗುವುದು, ವ್ಯಾಯಾಮ ಮಾಡುವುದು ಮಾಡುತ್ತಾರೆ, ಆದರು ಈ ರೀತಿ ಆಗಿರುವುದು ಶಾಕ್ ಆಗಿದೆ. ನಟ ಶ್ರೇಯಸ್ ಬೇಗ ಹುಷಾರಾಗಿ ಬರಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.

Leave A Reply

Your email address will not be published.