Shrirasthu Shubhamasthu: ಅಭಿ ಮದುವೆ ನಡೆಯುತ್ತಿದ್ದ ಹಾಗೆ ಮನೆಬಿಟ್ಟು ಹೊರಟ ತುಳಸಿ! ಒಂಟಿಯಾಗ್ತಾನ ಮಾಧವ?

0 20

Shrirasthu Shubhamasthu: ಜೀಕನ್ನಡ ವಾಹಿನಿಯ ಶ್ರೀರಸ್ತು ಶುಭಮಸ್ತು ಧಾರವಾಹಿ ಒಳ್ಳೆಯ ಜನಪ್ರಿಯತೆ ಜೊತೆಗೆ, ವಿಭಿನ್ನವಾದ ಕಥಾಹಂದರ ಹೊಂದಿರುವ ಧಾರವಾಹಿ. ಪ್ರಭುದ್ಧ ಕಲಾವಿದರನ್ನು ಒಳಗೊಂಡಿರುವ ಈ ಧಾರವಾಹಿ ಟಿಆರ್ಪಿ ರೇಟಿಂಗ್ ನಲ್ಲಿ ಕೂಡ ಟಾಪ್5 ಒಳಗೆ ಬರುತ್ತದೆ. ಚಂದನವನದ ಸ್ಟಾರ್ ನಟಿ ಸುಧಾರಾಣಿ ಅವರು, ಒಂದು ಕಾಲದ ಕಿರುತೆರೆ ಸ್ಟಾರ್ ಅಜಿತ್ ಹಂದೆ ಅವರು, ವೆಂಕಟ್ ರಾವ್, ನೇತ್ರಾ ಜಾಧವ್ ಇವರೆಲ್ಲರು ನಟಿಸುತ್ತಿರುವ ಧಾರವಾಹಿ..

ಇದೀಗ ಶ್ರೀರಸ್ತು ಶುಭಮಸ್ತು ಧಾರವಾಹಿಯಲ್ಲಿ ಪ್ರಮುಖ ಟ್ವಿಸ್ಟ್ ಕಂಡುಬಂದಿದೆ. ಧಾರವಾಹಿಯಲ್ಲಿ ಮಾಧವನ ಮಗ ಅಭಿ ಮದುವೆಗೆ ಬಹಳಷ್ಟು ಅಡ್ಡಿಗಳು ಬರುತ್ತಲೇ ಇದ್ದವು. ಮಗನ ಮದುವೆ ದಿವಸ ಅನಿವಾರ್ಯ ಕಾರಣಗಳಿಂದ ಮಾಧವ ತುಳಸಿ ಮದುವೆಯಾಗಿ ಬಂದಿದ್ದಕ್ಕೆ ಅಭಿ ದೀಪಿಕಾ ಮದುವೆ ನಿಂತು ಹೋಗುತ್ತದೆ. ಎಷ್ಟೇ ಪ್ರಯತ್ನ ಪಟ್ಟರು ಮದುವೆ ನಡೆಯಲು ಆಗಿರುವುದಿಲ್ಲ.

ಕೊನೆಗೆ ತುಳಸಿಯ ಪ್ರಯತ್ನದಿಂದ ಮದುವೆ ನಡೆಯುತ್ತಿದೆ, ಆದರೆ ಸೊಸೆಯಾಗಿ ಬರುತ್ತಿರುವ ದೀಪಿಕಾ ಮನೆಯನ್ನು ಸರ್ವನಾಶ ಮಾಡುವ ಸಲುವಾಗಿ ಮದುವೆಯಾಗಿ ಬರುತ್ತಿದ್ದಾಳೆ. ಇತ್ತ ದೀಪಿಕಾ ತಂದೆ ಜನಾರ್ಧನ್ ಹಾಗೂ ಶಾರ್ವರಿ ಮದುವೆಯಾದ ಮರುಕ್ಷಣವೇ ತುಳಸಿ ಮನೆ ಬಿಟ್ಟು ಹೋಗಬೇಕು ಎಂದು ಪ್ಲಾನ್ ಮಾಡಿ, ಮದುವೆ ಆಗುತ್ತಿದ್ದ ಹಾಗೆಯೇ ಯಾರಿಗೂ ಸಿಗದ ಹಾಗೆ ದೂರ ಹೋಗಬೇಕು ಎಂದು ಜನಾರ್ಧನ್ ಹೇಳಿದ್ದಾನೆ.

ಶುಕ್ರವಾರದ ಸಂಚಿಕೆಯಲ್ಲಿ, ತುಳಸಿ ಮನೆಬಿಟ್ಟು ಬಂದಿದ್ದಾರೆ. ಆಕೆ ಎಲ್ಲಿಗೆ ಹೋಗಿದ್ದಾರೆ ಎಂದು ಇನ್ನು ಗೊತ್ತಾಗಿಲ್ಲ. ಒಟ್ಟಿನಲ್ಲಿ ತುಳಸಿ ಮನೆಬಿಟ್ಟು ಹೋಗ್ತಾರಾ? ಮಾಧವ ಒಂಟಿಯಾಗ್ತಾರಾ? ಎನ್ನುವ ಈ ಪ್ರಶ್ನೆ ಈಗ ಧಾರವಾಹಿ ನೋಡುತ್ತಿರುವ ವೀಕ್ಷಕರಲ್ಲಿ ಶುರುವಾಗಿದ್ದು, ಮುಂದಿನ ವಾರದ ಸಂಚಿಕೆಗಳಲ್ಲಿ ಕಥೆ ಹೇಗೆ ಸಾಗುತ್ತದೆ ಎಂದು ನೋಡಬೇಕಿದೆ..

Leave A Reply

Your email address will not be published.