Shriya Reddy: ಸಲಾರ್ ಸಿನಿಮಾ ಇಂದ ವೈರಲ್ ಆಗಿರುವ ನಟಿ ಶ್ರೀಯಾ ರೆಡ್ಡಿ ಯಾರು ಗೊತ್ತಾ?

0 21

Shriya Reddy: ಸಲಾರ್ ಸಿನಿಮಾ ಡಿಸೆಂಬರ್ 22ರಂದು ಬಿಡುಗಡೆಯಾಗಿ ಮೊದಲ ದಿನವೇ 178 ಕೋಟಿ ಬಾಚಿಕೊಂಡಿದೆ. ಈ ಸಿನಿಮಾ ಇಂದ ನಟ ಪ್ರಭಾಸ್ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ ಎಂದರೆ ತಪ್ಪಲ್ಲ. ಸಲಾರ್ ಸಿನಿಮಾ ನೋಡಿದವರಿಗೆ ಪ್ರಭಾಸ್ ಅವರ ಪಾತ್ರದ ಜೊತೆಗೆ ಮತ್ತೊಂದು ಪಾತ್ರ ಮನಸ್ಸಲ್ಲಿ ಉಳಿಯುತ್ತದೆ. ಅದು ಶ್ರೀಯಾ ರೆಡ್ಡಿ ಅವರ ಪಾತ್ರ.

ಶ್ರೀಯಾ ರೆಡ್ಡಿ ಅವರದ್ದು ವರದ ರಾಜ ಮನ್ನಾರ್ ತಂಗಿ ರಾಧಾ ಪಾತ್ರ. ತಮ್ಮ ಪಾತ್ರ, ಆ ಖಡಕ್ ಲುಕ್ಸ್ ಹಾಗೂ ಅಭಿನಯದಿಂದ ಎಲ್ಲರ ಗಮನ ಸೆಳೆದಿದ್ದಾರೆ ಶ್ರೀಯಾ ರೆಡ್ಡಿ. ಸಲಾರ್ ಸಿನಿಮಾ ಬಿಡುಗಡೆಯಾದ ನಂತರ ಇವರ ಬಗ್ಗೆ ಹುಡುಕಾಟ ನಡೆಸುತ್ತಿರುವವರೇ ಹೆಚ್ಚು. ಅಷ್ಟಕ್ಕೂ ಶ್ರೀಯಾ ರೆಡ್ಡಿ ಅವರ ಬ್ಯಾಗ್ರೌಂಡ್ ಬಗ್ಗೆ ಹೇಳಿದರೆ, ನೀವೇ ಶಾಕ್ ಆಗುತ್ತೀರಿ.

ಇವರ ತಂದೆಯ ಹೆಸರು ಭರತ್ ರೆಡ್ಡಿ, ಇವರು 1978 ರಿಂದ 1981ರವರೆಗು ಭಾರತ ಕ್ರಿಕೆಟ್ ತಂಡದಲ್ಲಿ ಅನೇಕ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಈಗಿನ ಸ್ಟಾರ್ ಕ್ರಿಕೆಟರ್ ದಿನೇಶ್ ಕಾರ್ತಿಕ್ ಅವರ ಕೋಚ್ ಸಹ ಇವರೇ. ಇವರ ಮಗಳಾದ ಶ್ರೀಯಾ ರೆಡ್ಡಿ ಅವರು 2003ರಲ್ಲಿ ತೆಲುಗು ಸಿನಿಮಾ ಮೂಲಕ ನಟನೆ ಶುರು ಮಾಡಿದರು ಆದರೆ ಇವರಿಗೆ ಹೆಚ್ಚಿನ ಅವಕಾಶ ಸಿಗಲಿಲ್ಲ.

ಬಳಿಕ ಶ್ರೀಯಾ ಅವರು ತಮಿಳಿನ ಖ್ಯಾತ ನಟ ವಿಶಾಲ್ ಅವರ ಅಣ್ಣ ವಿಕ್ರಂ ಕೃಷ್ಣ ಅವರನ್ನು ಪ್ರೀತಿಸಿ ಮದುವೆಯಾದರು. ಬಳಿಕ ವಿದೇಶಕ್ಕೆ ಹೋದರು, ಕಳೆದ ವರ್ಷದವರೆಗು ವಿದೇಶದಲ್ಲಿದ್ದ ಶ್ರೀಯಾ ಅವರು, ಸುಳಲ್ ಸಿನಿಮಾ ಮೂಲಕ ಮತ್ತೆ ನಟನೆಗೆ ಕಂಬ್ಯಾಕ್ ಮಾಡಿದರು. ಇದೀಗ ಸಲಾರ್ ಸಿನಿಮಾ ಮೂಲಕ ಭಾರಿ ಸದ್ದು ಮಾಡುತ್ತಿದ್ದಾರೆ.

Leave A Reply

Your email address will not be published.