Shruti Hasan: ಮದ್ಯವ್ಯಸನಿಯಾಗಿದ್ದಕ್ಕೆ ಅಪ್ಪ ಅಮ್ಮನನ್ನೇ ಹೊಣೆ ಮಾಡಿದ ನಟಿ, ಶ್ರುತಿ ಹಾಸನ್ ಅವರ ಈ ಹೇಳಿಕೆಗೆ ಕಾರಣವೇನು ಗೊತ್ತಾ?

Written by Pooja Siddaraj

Published on:

Shruti Hasan: ನಟಿ ಶ್ರುತಿ ಹಾಸನ್ ಅವರಿ ಭಾರತ ಚಿತ್ರರಂಗದ ಖ್ಯಾತ ನಟರಾಗಿರುವ ಕಮಲ್ ಹಾಸನ್ ಅವರ ಮಗಳು, ಶ್ರುತಿ ಹಾಸನ್ ಅವರು ಸ್ಟಾರ್ ನಟನ ಮಗಳಾಗಿದ್ದು ಇಂದು ಚಿತ್ರರಂಗದಲ್ಲಿ ತಮ್ಮದೇ ಆದ ರೀತಿಯಲ್ಲಿ ಛಾಪು ಮೂಡಿಸಿದ್ದಾರೆ. ಇವರು ಒಂದು ಕಾಲದಲ್ಲಿ ಮದ್ಯಕ್ಕೆ ಅಡಿಕ್ಟ್ ಆಗಿದ್ದು ಕೂಡ ಹೌದೂಜ್ ಈ ರೀತಿ ಆಗಿದ್ದಕ್ಕೆ ತಮ್ಮ ತಂದೆ ತಾಯಿಯೇ ಕಾರಣ ಎಂದು ಹೇಳಿಕೆ ನೀಡಿದ್ದಾರೆ.

ಹೌದು, ನಟಿ ಶ್ರುತಿ ಹಾಸನ್ ಅವರು ಇತ್ತೀಚಿನ ಸಂದರ್ಶನ ಒಂದರಲ್ಲಿ ಈ ರೀತಿ ಹೇಳಿಕೆ ನೀಡಿದ್ದಂತೂ ನಿಜ. ಸ್ಟಾರ್ ನಟ ಕಮಲ್ ಹಾಸನ್ ಮತ್ತು ಸಾರಿಕಾ ಅವರ ಮಗಳಾಗಿರುವ ಶ್ರುತಿ ಹಾಸನ್ ಅವರು ತಂದೆ ತಾಯಿ ಇಬ್ಬರು ಸ್ಟಾರ್ ಕಲಾವಿದರಾಗಿದ್ದರು ಸಹ, ತಾವು ಅವರ ಹೆಸರು ಹೇಳದೆ, ಸ್ವಂತ ಪರಿಶ್ರಮದಿಂದ ಹೆಸರು ಮಾಡಿದ್ದಾರೆ. ಚಿತ್ರರಂಗದಲ್ಲಿ ನಟಿಯಾಗಿ, ಗಾಯಕಿಯಾಗಿ ಮತ್ತು ಮ್ಯೂಸಿಕ್ ಕಂಪೋಸರ್ ಆಗಿ ಗುರುತುಸಿಕೊಂಡಿದ್ದಾರೆ..

ತೆಲುಗು, ತಮಿಳು, ಹಾಗೂ ಹಿಂದಿ ಭಾಷೆಯಲ್ಲಿ ಹೆಚ್ಚಾಗಿ ನಟಿಸಿರುವ ಶ್ರುತಿ ಹಾಸನ್ ಅವರು ಗಾಯಕಿಯಾಗಿ ಹಲವು ಹಾಡುಗಳನ್ನು ಹಾಡಿದ್ದಾರೆ. ಕನ್ನಡದಲ್ಲಿ ಅಪ್ಪು ಅವರ ಪೃಥ್ವಿ ಸಿನಿಮಾದಲ್ಲಿ ಒಂದು ಹಾಡನ್ನು ಹಾಡಿದ್ದರು. ಹಾಗೆಯೇ ದಕ್ಷಿಣ ಭಾರತ ಚಿತ್ರರಂಗದ ಎಲ್ಲಾ ಸ್ಟಾರ್ ಹೀರೋಗಳ ಜೊತೆಗೆ ನಟಿಸಿದ್ದಾರೆ. ಸಿನಿಮಾರಂಗದಲ್ಲಿ ನಟನೆಯ ಮೂಲಕ ಸುದ್ದಿ ಆಗುವುದರ ಜೊತೆಗೆ ಶ್ರುತಿ ಹಾಸನ್ ಅವರು ವಿವಾದಗಳಿಂದಲೂ ಸುದ್ದಿಯಾಗುತ್ತಾರೆ.

ಕೆಲ ವರ್ಷಗಳ ಹಿಂದೆ ಶ್ರುತಿ ಹಾಸನ್ ಅವರು ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದಾರೆ. ಮದ್ಯವ್ಯಸನಿ ಆಗಿದ್ದಾರೆ ಎಂದು ಸುದ್ದಿಗಳು ಹರಡಿದ್ದವು. ಇದೆಲ್ಲದಕ್ಕೂ ಇತ್ತೀಚಿನ ಸಂದರ್ಶನದಲ್ಲಿ ಉತ್ತರ ನೀಡಿರುವ ಶ್ರುತಿ ಹಾಸನ್ ಅವರು ತಾವು ಮದ್ಯವ್ಯಸನಿಯಾಗಿದ್ದು ನಿಜ ಎಂದು ಒಪ್ಪಿಕೊಂಡಿದ್ದಾರೆ. ಆ ರೀತಿ ಆಗುವುದಕ್ಕೆ ಕಾರಣ ತಮ್ಮ ತಂದೆ ತಾಯಿಯೇ ಎಂದು ಕೂಡ ಹೇಳಿದ್ದಾರೆ.

ಶ್ರುತಿ ಹಾಸನ್ ಅವರಿಗೆ 18 ವರ್ಷವಿದ್ದಾಗ ಅವರ ತಂದೆ ತಾಯಿ ವಿಚ್ಛೇದನ ಪಡೆದರು, ಇದರಿಂದ ಶ್ರುತಿ ಹಾಸನ್ ಅವರ ಮನಸ್ಸಿಗೆ ಬಹಳ ನೋವಾಗಿತ್ತು, ಮಾನಸಿಕವಾಗಿ ಡಿಸ್ಟರ್ಬ್ ಆಗಿದ್ದರು, ಅದೇ ವೇಳೆ ಅವರಿಗೆ ಖಿನ್ನತೆ ಉಂಟಾಗಿ ಮದ್ಯವ್ಯಸನಿ ಆಗಿದ್ದರಂತೆ. ಹಲವರು ನಿನ್ನ ಮನಸ್ಸಿನ ಆರೋಗ್ಯ ನೋಡಿಕೋ ಎಂದು ಸಲಹೆ ನೀಡಿದ್ದರಂತೆ. ಆಗ ಡಾಕ್ಟರ್ ಹತ್ತಿರ ಹೋಗಿ ಚಿಕಿತ್ಸೆ ಪಡೆದಿದ್ದಾರಂತೆ.

ಮಾನಸಿಕ ವೈದ್ಯರ ಹತ್ತಿರ ಹೋಗಿ ಚಿಕಿತ್ಸೆ ಪಡೆದ ಮಾತ್ರಕ್ಕೆ ಹುಚ್ಚಿ ಆಗುವುದಿಲ್ಲ ಎನ್ನುತ್ತಾರೆ ಶ್ರುತಿ. ನಂತರ ಶ್ರುತಿ ಅವರು ಲಂಡನ್ ಗೆ ಹೋಗಿ ಮಾನಸಿಕ ಖಿನ್ನತೆಗೆ ಚಿಕಿತ್ಸೆಗೆ ಔಷಧಿ ಪಡೆದು ಇಂದು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ತಮ್ಮ ಸ್ಥಿತಿ ಈ ರೀತಿ ಆಗುವುದಕ್ಕೆ ಕಾರಣ ತಮ್ಮ ತಂದೆ ತಾಯಿ ಬೇರೆಯಾಗಿದ್ದು ಎಂದು ಒಪ್ಪಿಕೊಳ್ಳುತ್ತಾರೆ ಶ್ರುತಿ.

Leave a Comment