Shruti Hasan: ಕದ್ದುಮುಚ್ಚಿ ಮದುವೆ ಆಗಿದ್ದಾರಾ ನಟಿ ಶ್ರುತಿ ಹಾಸನ್? ವದಂತಿಗಳಿಗೆ ಸಿಕ್ತು ಕ್ಲಾರಿಟಿ!

0 16

Shruti Hasan: ನಟಿ ಶ್ರುತಿ ಹಾಸನ್ ಅವರಿ ಭಾರತ ಚಿತ್ರರಂಗದ ಖ್ಯಾತ ನಟರಾಗಿರುವ ಕಮಲ್ ಹಾಸನ್ ಅವರ ಮಗಳು, ಶ್ರುತಿ ಹಾಸನ್ ಅವರು ಸ್ಟಾರ್ ನಟನ ಮಗಳಾಗಿದ್ದು ಇಂದು ಚಿತ್ರರಂಗದಲ್ಲಿ ತಮ್ಮದೇ ಆದ ರೀತಿಯಲ್ಲಿ ಛಾಪು ಮೂಡಿಸಿದ್ದಾರೆ. ಶ್ರುತಿ ಹಾಸನ್ ಅವರು ಸಿನಿಮಾಗಿಂತ ಹೆಚ್ಚಾಗಿ ತಮ್ಮ ಪರ್ಸನಲ್ ಲೈಫ್ ಗಾಸಿಪ್ ಗಳ ವಿಚಾರಕ್ಕೆ ಹೆಚ್ಚು ಸುದ್ದಿಯಾಗುತ್ತಾರೆ. ಇತ್ತೀಚೆಗೆ ಮದುವೆ ವಿಚಾರಕ್ಕೆ ಸುದ್ದಿಯಾಗಿದ್ದರು ಶ್ರುತಿ.

ಬಾಲಿವುಡ್ ನಲ್ಲಿ ಜನಪ್ರಿಯತೆ ಪಡೆದಿರುವ ಓರಿ ಅವರು ಒಂದು ಕಾರ್ಯಕ್ರಮದಲ್ಲಿ ಶ್ರುತಿ ಅವರ ಬಾಯ್ ಫ್ರೆಂಡ್ ಶಾಂತನು ಅವರನ್ನು ಪತಿ ಎಂದು ಕರೆದಿದ್ದರು, ಆಗಿನಿಂದ ಬಹುಶಃ ಶ್ರುತಿ ಅವರು ಯಾರಿಗೂ ಹೇಳದೆ, ಕದ್ದು ಮದುವೆ ಆಗಿರಬೇಕು ಎನ್ನುವ ವಿಚಾರ ಸದ್ದು ಮಾಡಿತ್ತು. ಅದರ ಬಗ್ಗೆ ಈಗ ಖುದ್ಧು ಶ್ರುತಿ ಅವರಿಂದಲೇ ಕ್ಲಾರಿಟಿ ಕೊಟ್ಟಿರುವ ಶ್ರುತಿ ಅವರು..

ಪೋಸ್ಟ್ ಒಂದನ್ನು ಶೇರ್ ಮಾಡಿ, ನನಗೆ ಇನ್ನು ಮದುವೆ ಆಗಿಲ್ಲ. ನನ್ನ ಬದುಕು ಒಂದು ರೀತಿ ಓಪನ್ ಬುಕ್ ಇದ್ದ ಹಾಗೆ, ಮದುವೆಯಾದರೆ ಆ ವಿಚಾರವನ್ನು ಖಂಡಿತವಾಗಿ ಮುಚ್ಚಿಡುವುದಿಲ್ಲ. ನನ್ನ ಬಗ್ಗೆ ಗೊತ್ತಿಲ್ಲದವರು ಸುಮ್ಮನಿರುವುದು ಒಳ್ಳೆಯದು.. ಎಂದು ಬರೆದುಕೊಂಡಿದ್ದಾರೆ ನಟಿ ಶ್ರುತಿ ಹಾಸನ್. ಇದೇ ಪೋಸ್ಟ್ ಅನ್ನು ಶಾಂತನು ಅವರು ಕೂಡ ಶೇರ್ ಮಾಡಿದ್ದಾರೆ.

ಶ್ರುತಿ ಅವರ ಕೆರಿಯರ್ ಬಗ್ಗೆ ಹೇಳುವುದಾದರೆ, ಪ್ರಶಾಂತ್ ನೀಲ್ ಅವರ ನಿರ್ದೇಶನದಲ್ಲಿ ಪ್ರಭಾಸ್ ಅವರು ನಾಯಕನಾಗಿ ನಟಿಸಿದ ಸಲಾರ್ ಸಿನಿಮಾದ ನಾಯಕಿಯಾಗಿ ಅಭಿನಯಿಸಿದ್ದಾರೆ ಶ್ರುತಿ, ಈ ಸಿನಿಮಾ ಎಷ್ಟು ದೊಡ್ಡ ಹಿಟ್ ಆಗಿವೆ ಎನ್ನುವ ವಿಷಯ ಗೊತ್ತೇ ಇದೆ. ಇದನ್ನು ಹೋರತುಪಡಿಸಿ, ತೆಲುಗು ಸಿನಿಮಾ ಹಾಯ್ ನಾನ್ನಾದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಇದಷ್ಟೇ ಅಲ್ಲದೇ ಇನ್ನು ಕೆಲವು ಪ್ರಾಜೆಕ್ಟ್ ಗಳಲ್ಲಿ ಬ್ಯುಸಿ ಇದ್ದಾರಂತೆ.

Leave A Reply

Your email address will not be published.