Shubha Poonja: ಪೀರಿಯೆಡ್ಸ್ ಆಗಿದ್ರು ಕೆಲಸ ಮಾಡಿದ್ದೀನಿ ಆದರೆ ಸಂಬಳ ಕೊಟ್ಟಿರ್ಲಿಲ್ಲ: ಶುಭಾ ಪೂಂಜಾ!

0 2

Shubha Poonja: ಸ್ಯಾಂಡಲ್ ವುಡ್ ನಟಿ ಶುಭಾ ಪೂಂಜಾ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾಗಿಂತ ಹೆಚ್ಚಾಗಿ ಬಿಗ್ ಬಾಸ್ ಮನೆಗೆ ಬಂದ ನಂತರವೇ ಅವರ ಬಗ್ಗೆ ಒಳ್ಳೆಯ ಅಭಿಪ್ರಾಯ. ಸೆಕೆಂಡ್ ಇನ್ನಿಂಗ್ಸ್ ಬಿಗ್ ಮನೆಗೆ ಮತ್ತೊಮ್ಮೆ ಹೋಗಿದ್ದ ಶುಭಾ ಫಿನಾಲೆ ವರೆಗೂ ಇದ್ದು ಮನೆಯಿಂದ ಹೊರಬಂದರು. ಶುಭಾ ಪೂಂಜಾ ಬಿಗ್ ಬಾಸ್ ಮನೆಯಲ್ಲಿ ಇದ್ದಿದ್ದು ಒಟ್ಟು 14 ವಾರಗಳ ಕಾಲ. ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಇವರು ಕಾರಳ ಸತ್ಯ ಬಿಚ್ಚಿಟ್ಟಿದ್ದಾರೆ..

ನಟಿ ಶುಭಾ ಪೂಂಜಾ ಜ್ಯಾಕ್ ಪಾಟ್ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ನಾಯಕಿಯಾಗಿ ಎಂಟ್ರಿ ಕೊಟ್ಟರು. ಆದರೆ ಇವರು ಹೆಚ್ಚಿನ ಜನಪ್ರಿಯತೆ ಪಡೆದಿದ್ದು ದುನಿಯಾ ವಿಜಯ್ ಅವರಿಗೆ ನಾಯಕಿಯಾಗಿ ನಟಿಸಿದ ಚಂಡ ಸಿನಿಮಾ ಇಂದ. ಚಂಡ ನಂತರ ಹಲವಾರು ಸಿನಿಮಾಗಳಲ್ಲಿ ಶುಭಾ ನಾಯಕಿಯಾಗಿ ಕಾಣಿಸಿಕೊಂಡರು. ಕನ್ನಡ ಮಾತ್ರವಲ್ಲದೆ ತಮಿಳು ಚಿತ್ರರಂಗಕ್ಕೂ ಎಂಟ್ರಿ ಕೊಟ್ಟರು. ಮೊಗ್ಗಿನ ಮನಸ್ಸು ಸಿನಿಮಾ ಅಭಿನಯಕ್ಕೆ ಫಿಲ್ಮ್ ಫೇರ್ ಪ್ರಶಸ್ತಿ ಪಡೆದುಕೊಂಡರು.

ಈ ಬಾರಿ ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ಸ್ಪರ್ಧಿಯಾಗಿ ಮನೆಯೊಳಗೆ ಹೋದರು ಶುಭಾ. ಬಿಗ್ ಬಾಸ್ ಮನೆಗೆ ಹೋದ ನಂತರ ಶುಭಾ ಅವರ ಬಗ್ಗೆ ಜನರಿಗೆ ಇದ್ದ ಅಭಿಪ್ರಾಯವೇ ಬದಲಾಯಿತು. ಈ ಮೊದಲು ಜನರಿಗೆ ಶುಭಾ ಅವರ ಬಗ್ಗೆ ಸ್ವಲ್ಪ ಬೇರೆಯದೇ ರೀತಿಯ ಅಭಿಪ್ರಾಯ ಇತ್ತು. ಬಿಗ್ ಮನೆಯಲ್ಲಿ ಶುಭಾ ಅವರು ಎಷ್ರು ಮುಗ್ಧರು ಒಳ್ಳೆಯ ಸ್ವಭಾವದವರು ಎನ್ನುವುದು ಎಲ್ಲರಿಗೂ ಗೊತ್ತಾಯಿತು. ಶುಭಾ ಪೂಂಜಾ ಅವರು ಮೂಲತಃ ಉಡುಪಿಯ ಶಿರುವಾ ಗ್ರಾಮದವರು.

ಇಂದು ಯಶಸ್ವಿ ನಟಿ ಆಗಿರುವ ಇವರು ಇತ್ತೀಚೆಗೆ ನಡೆದ ಒಂದು ಸಂದರ್ಶನದಲ್ಲಿ ಕೆರಿಯರ್ ಆರಂಭದಲ್ಲಿ ಪಟ್ಟ ಕಷ್ಟಗಳ ಬಗ್ಗೆ ಮಾತನಾಡಿದ್ದಾರೆ. “ನಾನು ಇಂಡಸ್ಟ್ರಿಗೆ ಬಂದಾಗ ಕ್ಯಾರವಾನ್ ಇರಲಿಲ್ಲ, ಒಂದು ಕಪ್ಪು ಬಟ್ಟೆ ಹಾಕಿ, ಬಟ್ಟೆ ಬದಲಾಯಿಸೋಕೆ ಹೇಳ್ತಿದ್ರು, ಅಥವಾ ಬೇರೆಯವರ ಮನೆಗೆ ಹೋಗಿ ಬಟ್ಟೆ ಬದಲಾಯಿಸುತ್ತಾ ಇದ್ವಿ.. ಈಗ ನಾವು ಇವೆಂಟ್ ಗಳಿಗೆ ಹೋದ್ರೆ ಹಣ ಸಂಪಾದನೆ ಆಗುತ್ತೆ..

ಆದರೆ ಮೊದಲು ಸಿನಿಮಾ ತಯಾರಾಗಿ 3 ತಿಂಗಳು ಆದಮೇಲು ಪೇಮೆಂಟ್ ಬರ್ತಿರ್ಲಿಲ್ಲ. ಸಂಭಾವನೆ ಪಡೆಯದೆ ಸಾಕಷ್ಟು ಶೋಗಳಿಗೆ ಹೋಗಿದ್ದೇನೆ. ಶೋಗೆ ಯಾಕೆ ಹಣ ತಗೊಂಡಿಲ್ಲ ಅಂತ ಕೆಲವು ಸಾರಿ ಯೋಚನೆ ಮಾಡಿದ್ದೀನಿ,.ತುಂಬಾ ಕಷ್ಟಪಟ್ಟು ಕೆಲಸ ಮಾಡಿದ್ದೀನಿ.. ಪೀರಿಯೆಡ್ಸ್ ಆಗಿದ್ರು ತಲೆಕೆಡಿಸಿಕೊಳ್ಳದೆ ಕೆಲಸ ಮಾಡಿದ್ದೀನಿ. ಅಷ್ಟೆಲ್ಲಾ ಮಾಡಿದ್ರು ಸಂಬಳ ಬಂದಿಲ್ಲ ಅಂದ್ರೆ ತುಂಬಾ ಬೇಜಾರಾಗುತ್ತೆ..” ಎಂದು ಹೇಳಿದ್ದಾರೆ ಶುಭಾ.

Leave A Reply

Your email address will not be published.