Shubha Poonja: ಶೂಟಿಂಗ್ ಸೆಟ್ ನಲ್ಲಿ ನಟಿ ಶುಭಾ ಪೂಂಜಾ ಅವರೊಡನೆ ಕಿರಿಕ್ ಮಾಡಿದ ಅಪರಿಚಿತ ಯುವಕರು, ಏನಾಗಿದೆ ಗೊತ್ತಾ?

Written by Pooja Siddaraj

Published on:

Shubha Poonja: ನಟಿ ಶುಭಾ ಪೂಂಜಾ ಅವರು ಇದೀಗ ಒಂದು ಹೊಸ ಕನ್ನಡ ಸಿನಿಮಾ ಮಾಡುತ್ತಿದ್ದಾರೆ. ಇದು ಮಂಗಳೂರಿನ ದೈವ ಕೊರಗಜ್ಜನ ಬಗೆಗಿನ ಸಿನಿಮಾ ಆಗಿದ್ದು, ಈ ಸಿನಿಮಾದ ಹಾಡೊಂದರ ಚಿತ್ರೀಕರಣ ನಡೆಯುತ್ತಿತ್ತು. ಹಾಡನ್ನು ಬಾಲಿವುಡ್ ನ ಡ್ಯಾನ್ಸ್ ಮಾಸ್ಟರ್ ಗಣೇಶ್ ಆಚಾರ್ಯ ಅವರು ಡೈರೆಕ್ಟ್ ಮಾಡುತ್ತಿದ್ದರು ಎಂದು ಮಾಹಿತಿ ಸಿಕ್ಕಿದ್ದು, ಚಿತ್ರೀಕರಣದ ವೇಳೆ ಸೆಟ್ ನಲ್ಲಿ ಅಪರಿಚಿತರಿಂದ ರಾದ್ಧಾಂತ ನಡೆದಿದೆ.

ಹಾಡಿನ ದೃಶ್ಯಗಳ ಚಿತ್ರೀಕರಣ ನಡೆಯುವಾಗ ಇಂಥದ್ದೊಂದು ಘಟನೆ ಸಂಭವಿಸಿದೆ ಎಂದು ಮಾಹಿತಿ ಸಿಕ್ಕಿದೆ. ಕುದುರೆಮುಖದ ಮೈದಾಡಿ ಗುಡ್ಡ ಎನ್ನುವ ಪ್ರದೇಶದಲ್ಲಿ ಹಾಡಿನ ಚಿತ್ರೀಕರಣ ಮಾಡಲಾಗುತ್ತಿತ್ತು, ಶೂಟಿಂಗ್ ನಡೆಯುವಾಗ ಸ್ಥಳಕ್ಕೆ ಕೆಲವರು ಅಪರಿಚಿತ ಹುಡುಗರು ಬಂದಿದ್ದು, ಶೂಟಿಂಗ್ ಸೆಟ್ ನಲ್ಲಿ ಇದ್ದವರ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ತಕ್ಷಣವೇ ಚಿತ್ರೀಕರಣ ನಿಲ್ಲಿಸಲು ತಾಕೀತು ಮಾಡಿದ್ದಾರೆ.

ಕೊರಗಜ್ಜನ ಸಿನಿಮಾ ಮಾಡಬಾರದು ಎನ್ನುವುದು ಆ ಹುಡುಗರ ವಾದ ಆಗಿತ್ತು. ಈ ಕಾರಣಕ್ಕೆ ಶುಭಾ ಪೂಂಜಾ ಅವರೊಡನೆ ಮತ್ತು ಶೂಟಿಂಗ್ ನಲ್ಲಿ ಇದ್ದವರು, ಪ್ರೊಡಕ್ಷನ್ ನವರ ಜೊತೆಗೆ ಗಲಾಟೆ ಮಾಡಿಕೊಂಡಿದ್ದಾರೆ. ಕೊರಗಜ್ಜನ ಬಗ್ಗೆ ಸಿನಿಮಾ ಮಾಡಲು ಬಿಡುವುದಿಲ್ಲ ಎಂದು ಆ ಹುಡುಗರು ಜಗಳ ಆಡಿದ್ದಾರಂತೆ. ಇದೀಗ ಈ ಸುದ್ದಿ ತಿಳಿದುಬಂದಿದ್ದು, ಮುಂದಿನ ಅಪ್ಡೇಟ್ ಗಾಗಿ ಕಾಯಬೇಕಿದೆ..

ಶುಭಾ ಪೂಂಜಾ ಅವರಿಂದ ಇನ್ನು ಅಧಿಕೃತ ಮಾಹಿತಿ ಸಿಕ್ಕಿಲ್ಲ. ಇನ್ನು ಶುಭಾ ಪೂಂಜಾ ಅವರ ಕೆರಿಯರ್ ಬಗ್ಗೆ ಹೇಳುವುದಾದರೆ, ಮೊಗ್ಗಿನ ಮನಸ್ಸು ಸಿನಿಮಾ ಇವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತು. ಅದಾದ ಬಳಿಕ ಕೆಲವು ಸಿನಿಮಾಗಳಲ್ಲಿ ನಟಿಸಿದರು ಕೂಡ, ಶುಭಾ ಪೂಂಜಾ ಅವರಿಗೆ ಅಂದುಕೊಂಡ ಮಟ್ಟಿಗೆ ಯಶಸ್ಸು ಸಿಗಲಿಲ್ಲ. ಬಿಗ್ ಬಾಸ್ ಶೋಗೆ ಸ್ಪರ್ಧಿಯಾಗಿ ಬಂದು ಹೆಚ್ಚು ಜನಪ್ರಿಯತೆ ಪಡೆದುಕೊಂಡರು ಶುಭಾ ಪೂಂಜಾ.

ಬಿಗ್ ಬಾಸ್ ಶೋ ಮುಗಿದ ನಂತರ ತಾವು ಪ್ರೀತಿಸುತ್ತಿದ್ದ ಹುಡುಗ ಸುಮಂತ್ ಅವರೊಡನೆ ಮದುವೆಯಾದರು. ಪ್ರಸ್ತುತ ದಾಂಪತ್ಯ ಜೀವನವನ್ನು ಎಂಜಾಯ್ ಮಾಡುವುದರ ಜೊತೆಗೆ, ಚಿತ್ರರಂಗದಲ್ಲಿ ಕೂಡ ಬ್ಯುಸಿ ಆಗಿದ್ದಾರೆ. ಕೆಲವು ಸಿನಿಮಾಗಳಲ್ಲಿ ಕೂಡ ನಟಿಸುತ್ತಾ ಆಕ್ಟಿವ್ ಆಗಿದ್ದಾರೆ ಶುಭಾ ಪೂಂಜಾ.

Leave a Comment