Silk Smitha: ಸಿಲ್ಕ್ ಸ್ಮಿತಾ ಅವರು ಕಚ್ಚಿ ತಿಂದಿದ್ದ ಆಪಲ್ ಗು ಇತ್ತು ಭಾರಿ ಬೇಡಿಕೆ! ಎಷ್ಟು ಕೊಟ್ಟು ಖರೀದಿ ಮಾಡಿದ್ರು ಗೊತ್ತಾ?

Written by Pooja Siddaraj

Published on:

Silk Smitha: 80 ಮತ್ತು 90ರ ದಶಕದಲ್ಲಿ ನಟಿ ಸಿಲ್ಕ್ ಸ್ಮಿತಾ ಅವರು ದಕ್ಷಿಣ ಭಾರತ ಚಿತ್ರರಂಗದಲ್ಲಿ ಅತ್ಯಂತ ಬೇಡಿಕೆ ಮತ್ತು ಜನಪ್ರಿಯತೆ ಹೊಂದಿದ್ದ ನಟಿಯಾಗಿದ್ದರು ಎನ್ನುವ ವಿಷಯ ನಮಗೆಲ್ಲ ಗೊತ್ತೇ ಇದೆ. ಸಿಲ್ಕ್ ಸ್ಮಿತಾ ಅವರು ಇಂದು ನಮ್ಮ ಜೊತೆಗೆ ದೈಹಿಕವಾಗಿ ಇಲ್ಲ ಎಂದರು ತಮ್ಮ ಮಾದಕ ನೋಟದ ಹಾಡುಗಳು, ಸಿನಿಮಾಗಳ ಮೂಲಕ ಸಿನಿಪ್ರೇಕ್ಷಕರ ನೆನಪಿನಲ್ಲಿ ಹಸಿರಾಗಿ ಉಳಿದಿದ್ದಾರೆ. ಬೆಳ್ಳಿಪರದೆ ಮೇಲೆ ರಾರಾಜಿಸಿದ ಸಿಲ್ಕ್ ಸ್ಮಿತಾ ಅವರು ಕೊನೆಯ ದಿನಗಳಲ್ಲಿ ಎಷ್ಟು ಕಷ್ಟಪಟ್ಟಿದ್ದಾರೆ ಗೊತ್ತಾ ? ಅವರ ಸ್ನೇಹಿತೆ ನೆನಪು ಮಾಡಿಕೊಂಡಿದ್ದಾರೆ.

ಜೀವನದಲ್ಲಿ ಬಹಳ ಕಷ್ಟಪಟ್ಟು ಮುಂದಕ್ಕೆ ಬಂದವರು ಸಿಲ್ಕ್ ಸ್ಮಿತಾ. ಕೃಷ್ಣಸುಂದರಿ ಆಗಿದ್ದ ಸಿಲ್ಕ್ ಸ್ಮಿತಾ ಅವರು ಹುಟ್ಟಿದ್ದು ಬೆಳೆದಿದ್ದು ಆಂಧ್ರಪ್ರದೇಶದಲ್ಲಿ. ಸಿಲ್ಕ್ ಸ್ಮಿತಾ ಅವರಿಗೆ ಬಹಳ ಚಿಕ್ಕ ವಯಸ್ಸಿನಲ್ಲೇ ಮದುವೆ ಮಾಡಿಬಿಟ್ಟಿದ್ದರು, ಆದರೆ ಅವರ ಗಂಡ ಒಳ್ಳೆಯ ವ್ಯಕ್ತಿ ಆಗಿರಲಿಲ್ಲ, ಗಂಡ ಮತ್ತು ಆತನ ಮನೆಯವರಿಂದ ಆಗುತ್ತಿದ್ದ ತೊಂದರೆ ಮತ್ತು ಹಿಂಸೆಯನ್ನು ತಡೆಯಲಾಗದೆ ಸಿಲ್ಕ್ ಸ್ಮಿತಾ ಅವರು ಮನೆಬಿಟ್ಟು ಚೆನ್ನೈಗೆ ಬಂದರು..

ಚಿತ್ರರಂಗದಲ್ಲಿ ಅವಕಾಶಕ್ಕಾಗಿ ಕಷ್ಟಪಡುತ್ತಿದ್ದ ಸಿಲ್ಕ್ ಸ್ಮಿತಾ ಅವರು ನಿರ್ದೇಶಕ ವಿನು ಚಕ್ರವರ್ತಿ ಅವರ ಮನೆಯಲ್ಲಿ ಕೆಲಸ ಮಾಡಲು ಶುರು ಮಾಡಿದರು. ಸಿಲ್ಕ್ ಸ್ಮಿತಾ ಅವರನ್ನು ಗುರುತಿಸಿದ ನಿರ್ದೇಶಕರು ತಮ್ಮ ಸಿನಿಮಾದಲ್ಲಿ ಸಿಲ್ಕ್ ಎನ್ನುವ ಪಾತ್ರವನ್ನು ಅವರಿಗೆ ನೀಡಿದರು. ಆಗಿನಿಂದ ಆಕೆಯ ಹೆಸರು ಸಿಲ್ಕ್ ಸ್ಮಿತಾ ಎಂದೇ ಹೆಸರು ಪಡೆಯಿತು. ಬರುಬರುತ್ತಾ ಸಿಲ್ಕ್ ಸ್ಮಿತಾ ಅವರ ಜನಪ್ರಿಯತೆ ಎಷ್ಟರ ಮಟ್ಟಿಗೆ ಜನಪ್ರಿಯತೆ ಗಳಿಸಿದರು ಎಂದರೆ, ಸ್ಟಾರ್ ಹೀರೋಗಳ ಸಿನಿಮಾ ಇದರು ಸಿಲ್ಕ್ ಅವರ ಒಂದು ಹಾಡು ಸಿನಿಮಾದಲ್ಲಿ ಇರಲೇಬೇಕಿತ್ತು.

ದೊಡ್ಡ ದೊಡ್ಡ ಹೀರೋಗಳ ಡೇಟ್ಸ್ ಸಿಕ್ಕರೂ ಸಿಲ್ಕ್ ಸ್ಮಿತಾ ಅವರ ಡೇಟ್ಸ್ ಮಾತ್ರ ಸಿಗುತ್ತಿರಲಿಲ್ಲ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹೀಗೆ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ಸಿಲ್ಕ್ ಸ್ಮಿತಾ ಅವರ ಹವಾ ಜೋರಾಗಿತ್ತು. ಸಿಲ್ಕ್ ಸ್ಮಿತಾ ಅವರ ಹಾಡುಗಳನ್ನ, ದೃಶ್ಯಗಳನ್ನ ನೋಡುವ ಸಲುವಾಗಿಯೇ ಜನರು ಥಿಯೇಟರ್ ಗೆ ಬರುವಷ್ಟು ಕ್ರೇಜ್ ಹೊಂದಿದ್ದರು ಸಿಲ್ಕ್. ಎಲ್ಲಾ ನಿರ್ಮಾಪಕರು ಕೂಡ ಸಿಲ್ಕ್ ಸ್ಮಿತಾ ಅವರ ಮನೆಯ ಮುಂದೆ ಡೇಟ್ಸ್ ಗಾಗಿ ಕ್ಯೂ ನಿಲ್ಲುತ್ತಿದ್ದರು.

ಆಗ ಸಿಲ್ಕ್ ಸ್ಮಿತಾ ಅವರ ಸಿನಿಮಾಗಳಿಗೆ ಮಾತ್ರವಲ್ಲ ಅವರು ಕಚ್ಚಿ ತಿಂದಿದ್ದ ಆಪಲ್ ಗು ಭಾರಿ ಬೇಡಿಕೆ ಇತ್ತು, ಆ ಆಪಲ್ ಹರಾಜು ಮಾಡಿದರೆ, ಒಂದು ಆಪಲ್ ಬರೋಬ್ಬರಿ 200 ರೂಪಾಯಿಗಳಿಗೆ ಮಾರಾಟ ಆಗಿತ್ತಂತೆ. ಇದು ನಿಜವಾಗಿದ್ದು, ಇತ್ತೀಚೆಗೆ ಬೆಳಕಿಗೆ ಬಂದಿದೆ.

Leave a Comment