80 ಮತ್ತು 90ರ ದಶಕದಲ್ಲಿ ನಟಿ ಸಿಲ್ಕ್ ಸ್ಮಿತಾ ಅವರು ದಕ್ಷಿಣ ಭಾರತ ಚಿತ್ರರಂಗದಲ್ಲಿ ಅತ್ಯಂತ ಬೇಡಿಕೆ ಮತ್ತು ಜನಪ್ರಿಯತೆ ಹೊಂದಿದ್ದ ನಟಿಯಾಗಿದ್ದರು ಎನ್ನುವ ವಿಷಯ ನಮಗೆಲ್ಲ ಗೊತ್ತೇ ಇದೆ. ಸಿಲ್ಕ್ ಸ್ಮಿತಾ ಅವರು ಇಂದು ನಮ್ಮ ಜೊತೆಗೆ ದೈಹಿಕವಾಗಿ ಇಲ್ಲ ಎಂದರು ತಮ್ಮ ಮಾದಕ ನೋಟದ ಹಾಡುಗಳು, ಸಿನಿಮಾಗಳ ಮೂಲಕ ಸಿನಿಪ್ರೇಕ್ಷಕರ ನೆನಪಿನಲ್ಲಿ ಹಸಿರಾಗಿ ಉಳಿದಿದ್ದಾರೆ. ಬೆಳ್ಳಿಪರದೆ ಮೇಲೆ ರಾರಾಜಿಸಿದ ಸಿಲ್ಕ್ ಸ್ಮಿತಾ ಅವರು ಕೊನೆಯ ದಿನಗಳಲ್ಲಿ ಎಷ್ಟು ಕಷ್ಟಪಟ್ಟಿದ್ದಾರೆ ಗೊತ್ತಾ ? ಅವರ ಸ್ನೇಹಿತೆ ನೆನಪು ಮಾಡಿಕೊಂಡಿದ್ದಾರೆ.
ಜೀವನದಲ್ಲಿ ಬಹಳ ಕಷ್ಟಪಟ್ಟು ಮುಂದಕ್ಕೆ ಬಂದವರು ಸಿಲ್ಕ್ ಸ್ಮಿತಾ. ಕೃಷ್ಣಸುಂದರಿ ಆಗಿದ್ದ ಸಿಲ್ಕ್ ಸ್ಮಿತಾ ಅವರು ಹುಟ್ಟಿದ್ದು ಬೆಳೆದಿದ್ದು ಆಂಧ್ರಪ್ರದೇಶದಲ್ಲಿ. ಸಿಲ್ಕ್ ಸ್ಮಿತಾ ಅವರಿಗೆ ಬಹಳ ಚಿಕ್ಕ ವಯಸ್ಸಿನಲ್ಲೇ ಮದುವೆ ಮಾಡಿಬಿಟ್ಟಿದ್ದರು, ಆದರೆ ಅವರ ಗಂಡ ಒಳ್ಳೆಯ ವ್ಯಕ್ತಿ ಆಗಿರಲಿಲ್ಲ, ಗಂಡ ಮತ್ತು ಆತನ ಮನೆಯವರಿಂದ ಆಗುತ್ತಿದ್ದ ತೊಂದರೆ ಮತ್ತು ಹಿಂಸೆಯನ್ನು ತಡೆಯಲಾಗದೆ ಸಿಲ್ಕ್ ಸ್ಮಿತಾ ಅವರು ಮನೆಬಿಟ್ಟು ಚೆನ್ನೈಗೆ ಬಂದರು..
ಚಿತ್ರರಂಗದಲ್ಲಿ ಅವಕಾಶಕ್ಕಾಗಿ ಕಷ್ಟಪಡುತ್ತಿದ್ದ ಸಿಲ್ಕ್ ಸ್ಮಿತಾ ಅವರು ನಿರ್ದೇಶಕ ವಿನು ಚಕ್ರವರ್ತಿ ಅವರ ಮನೆಯಲ್ಲಿ ಕೆಲಸ ಮಾಡಲು ಶುರು ಮಾಡಿದರು. ಸಿಲ್ಕ್ ಸ್ಮಿತಾ ಅವರನ್ನು ಗುರುತಿಸಿದ ನಿರ್ದೇಶಕರು ತಮ್ಮ ಸಿನಿಮಾದಲ್ಲಿ ಸಿಲ್ಕ್ ಎನ್ನುವ ಪಾತ್ರವನ್ನು ಅವರಿಗೆ ನೀಡಿದರು. ಆಗಿನಿಂದ ಆಕೆಯ ಹೆಸರು ಸಿಲ್ಕ್ ಸ್ಮಿತಾ ಎಂದೇ ಹೆಸರು ಪಡೆಯಿತು. ಬರುಬರುತ್ತಾ ಸಿಲ್ಕ್ ಸ್ಮಿತಾ ಅವರ ಜನಪ್ರಿಯತೆ ಎಷ್ಟರ ಮಟ್ಟಿಗೆ ಜನಪ್ರಿಯತೆ ಗಳಿಸಿದರು ಎಂದರೆ, ಸ್ಟಾರ್ ಹೀರೋಗಳ ಸಿನಿಮಾ ಇದರು ಸಿಲ್ಕ್ ಅವರ ಒಂದು ಹಾಡು ಸಿನಿಮಾದಲ್ಲಿ ಇರಲೇಬೇಕಿತ್ತು.
ದೊಡ್ಡ ದೊಡ್ಡ ಹೀರೋಗಳ ಡೇಟ್ಸ್ ಸಿಕ್ಕರೂ ಸಿಲ್ಕ್ ಸ್ಮಿತಾ ಅವರ ಡೇಟ್ಸ್ ಮಾತ್ರ ಸಿಗುತ್ತಿರಲಿಲ್ಲ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹೀಗೆ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ಸಿಲ್ಕ್ ಸ್ಮಿತಾ ಅವರ ಹವಾ ಜೋರಾಗಿತ್ತು. ಸಿಲ್ಕ್ ಸ್ಮಿತಾ ಅವರ ಹಾಡುಗಳನ್ನ, ದೃಶ್ಯಗಳನ್ನ ನೋಡುವ ಸಲುವಾಗಿಯೇ ಜನರು ಥಿಯೇಟರ್ ಗೆ ಬರುವಷ್ಟು ಕ್ರೇಜ್ ಹೊಂದಿದ್ದರು ಸಿಲ್ಕ್. ಎಲ್ಲಾ ನಿರ್ಮಾಪಕರು ಕೂಡ ಸಿಲ್ಕ್ ಸ್ಮಿತಾ ಅವರ ಮನೆಯ ಮುಂದೆ ಡೇಟ್ಸ್ ಗಾಗಿ ಕ್ಯೂ ನಿಲ್ಲುತ್ತಿದ್ದರು.
ಇಷ್ಟು ಹೆಸರು ಜನಪ್ರಿಯತೆ ಗಳಿಸಿದ್ದ ಸಿಲ್ಕ್ ಸ್ಮಿತಾ ಅವರಿಗೆ ಹಸರಿನ ಜೊತೆಗೆ ಐಶ್ವರ್ಯ ಸಂಪತ್ತು ಕೂಡ ಲಭಿಸಿತು. ಆದರೆ ಅವರ ಕಡೆಯ ದಿನಗಳು ಅಷ್ಟೇ ಕಠೋರವಾಗಿದ್ದವು. ಸಿಲ್ಕ್ ಸ್ಮಿತಾ ಅವರು ನಂತರದ ದಿನಗಳಲ್ಲಿ ಇಷ್ಟಪಟ್ಟ ವ್ಯಕ್ತಿಯಿಂದಲೇ ಅವರಿಗೆ ಮೋಸವಾಗಿತ್ತು. ಸಿನಿಮಾ ನಿರ್ಮಾಣ ಮಾಡುವ ಪ್ರಯತ್ನ ಮಾಡಿ, ಅದರಲ್ಲೂ ಕೈಸುಟ್ಟುಕೊಂಡಿದ್ದರು. ಕಷ್ಟದ ಪರಿಸ್ಥಿತಿಗಳನ್ನು ಎದುರಿಸಲು ಸಾಧ್ಯವಾಗದೆ, ಆತ್ಮಹತ್ಯೆ ಮಾಡಿಕೊಂಡರು ಸಿಲ್ಕ್..
ನಂತರ ನಡೆದಿರುವುದು ಇನ್ನು ಘೋರ, ಆ ನೆನಪುಗಳನ್ನು ಸಿಲ್ಕ್ ಸ್ಮಿತಾ ಅವರ ಸ್ನೇಹಿತೆ ಪುಲಿಯುರ್ ಸರೋಜ ಅವರು ಒಂದು ಸಂದರ್ಶನದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸಿಲ್ಕ್ ಸ್ಮಿತಾ ಅವರು ಇನ್ನಿಲ್ಲ ಎಂದು ಗೊತ್ತಾದ ತಕ್ಷಣವೇ ಸರೋಜ ಅವರು ನೋಡಲು ಹೋದಾಗ, ಆಸ್ಪತ್ರೆಯಲ್ಲಿ ಸಿಲ್ಕ್ ಸ್ಮಿತಾ ಅವರ ಮೃತದೇಹ ಯಾರು ಊಹಿಸಿರದ ಸ್ಥಿತಿಯಲ್ಲಿದ್ದು, ಅದನ್ನು ನೋಡಿ 10 ದಿವಸಗಳ ಕಾಲ ಊಟ ಮಾಡಲು ಸಾಧ್ಯವಾಗಲಿಲ್ಲ ಎಂದು ಸರೋಜ ಅವರು ನೆನಪು ಮಾಡಿಕೊಂಡಿದ್ದಾರೆ.
ಹಾಗೆಯೇ ಅಂದು ಸಿಲ್ಕ್ ಸ್ಮಿತಾ ಅವರು ಇನ್ನಿಲ್ಲ ಎಂದಾಗ ಚಿತ್ರರಂಗದ 5 ಜನರು ಕೂಡ ಅವರನ್ನು ನೋಡಲು ಹೋಗಿರಲಿಲ್ಲ ಎನ್ನುವ ಕಠೋರ ಸತ್ಯವನ್ನು ಸರೋಜ ಅವರು ತಿಳಿಸಿದ್ದಾರೆ. ಇನ್ನು ಕೆಲವರು ಹೇಳಿರುವ ಹಾಗೆ ಸಿಲ್ಕ್ ಸ್ಮಿತಾ ಅವರ ಮೃತದೇಹವನ್ನು ಕೂಡ ಬೇರೆ ರೀತಿಯಲ್ಲಿ ಬಳಸಿಕೊಳ್ಳಲಾಗಿತ್ತಾ ಎನ್ನುವ ಪ್ರಶ್ನೆ ಕೂಡ ಇದೆ. ಆದರೆ ಅದ್ಯಾವುದಕ್ಕೂ ಸರಿಯಾದ ಉತ್ತರ ಸಿಕ್ಕಿಲ್ಲ. ತೆರೆಯ ಮೇಲೆ ರಾರಾಜಿಸಿ, ಅತ್ಯಂತ ಹೆಸರು ಮಾಡಿದ್ದ ಸಿಲ್ಕ್ ಸ್ಮಿತಾ ಅವರ ಕೊನೆಯ ದಿನಗಳನ್ನು ನೆನೆದರೆ, ಬಣ್ಣದ ಬದುಕಿನ ಜೀವನ ಇಷ್ಟೇನಾ ಅಂತ ಅನ್ನಿಸದೆ ಇರದು.