Silk Smitha: ಸಿಲ್ಕ್ ಸ್ಮಿತಾ ಅವರ ಮೈಯನ್ನು ಸಿಗರೇಟ್ ಇಂದ ಸುಟ್ಟಿದ್ರಂತೆ ಸ್ಟಾರ್ ಹೀರೋ! ಯಾರು ಗೊತ್ತಾ?

0 1

Silk Smitha: 80 ಮತ್ತು 90ರ ದಶಕದಲ್ಲಿ ನಟಿ ಸಿಲ್ಕ್ ಸ್ಮಿತಾ ಅವರು ದಕ್ಷಿಣ ಭಾರತ ಚಿತ್ರರಂಗದಲ್ಲಿ ಅತ್ಯಂತ ಬೇಡಿಕೆ ಮತ್ತು ಜನಪ್ರಿಯತೆ ಹೊಂದಿದ್ದ ನಟಿಯಾಗಿದ್ದರು ಎನ್ನುವ ವಿಷಯ ನಮಗೆಲ್ಲ ಗೊತ್ತೇ ಇದೆ. ಸಿಲ್ಕ್ ಸ್ಮಿತಾ ಅವರು ಇಂದು ನಮ್ಮ ಜೊತೆಗೆ ದೈಹಿಕವಾಗಿ ಇಲ್ಲ ಎಂದರು ತಮ್ಮ ಮಾದಕ ನೋಟದ ಹಾಡುಗಳು, ಸಿನಿಮಾಗಳ ಮೂಲಕ ಸಿನಿಪ್ರೇಕ್ಷಕರ ನೆನಪಿನಲ್ಲಿ ಹಸಿರಾಗಿ ಉಳಿದಿದ್ದಾರೆ. ಬೆಳ್ಳಿಪರದೆ ಮೇಲೆ ರಾರಾಜಿಸಿದ ಸಿಲ್ಕ್ ಸ್ಮಿತಾ ಅವರು ಮೈಯನ್ನು ಸಿಗರೇಟ್ ಇಂದ ಸುಟ್ಟಿದ್ದರಂತೆ ಸ್ಟಾರ್ ಹೀರೋ..

ಜೀವನದಲ್ಲಿ ಬಹಳ ಕಷ್ಟಪಟ್ಟು ಮುಂದಕ್ಕೆ ಬಂದವರು ಸಿಲ್ಕ್ ಸ್ಮಿತಾ. ಕೃಷ್ಣಸುಂದರಿ ಆಗಿದ್ದ ಸಿಲ್ಕ್ ಸ್ಮಿತಾ ಅವರು ಹುಟ್ಟಿದ್ದು ಬೆಳೆದಿದ್ದು ಆಂಧ್ರಪ್ರದೇಶದಲ್ಲಿ. ಸಿಲ್ಕ್ ಸ್ಮಿತಾ ಅವರಿಗೆ ಬಹಳ ಚಿಕ್ಕ ವಯಸ್ಸಿನಲ್ಲೇ ಮದುವೆ ಮಾಡಿಬಿಟ್ಟಿದ್ದರು, ಆದರೆ ಅವರ ಗಂಡ ಒಳ್ಳೆಯ ವ್ಯಕ್ತಿ ಆಗಿರಲಿಲ್ಲ, ಗಂಡ ಮತ್ತು ಆತನ ಮನೆಯವರಿಂದ ಆಗುತ್ತಿದ್ದ ತೊಂದರೆ ಮತ್ತು ಹಿಂಸೆಯನ್ನು ತಡೆಯಲಾಗದೆ ಸಿಲ್ಕ್ ಸ್ಮಿತಾ ಅವರು ಮನೆಬಿಟ್ಟು ಚೆನ್ನೈಗೆ ಬಂದರು..

ಚಿತ್ರರಂಗದಲ್ಲಿ ಅವಕಾಶಕ್ಕಾಗಿ ಕಷ್ಟಪಡುತ್ತಿದ್ದ ಸಿಲ್ಕ್ ಸ್ಮಿತಾ ಅವರು ನಿರ್ದೇಶಕ ವಿನು ಚಕ್ರವರ್ತಿ ಅವರ ಮನೆಯಲ್ಲಿ ಕೆಲಸ ಮಾಡಲು ಶುರು ಮಾಡಿದರು. ಸಿಲ್ಕ್ ಸ್ಮಿತಾ ಅವರನ್ನು ಗುರುತಿಸಿದ ನಿರ್ದೇಶಕರು ತಮ್ಮ ಸಿನಿಮಾದಲ್ಲಿ ಸಿಲ್ಕ್ ಎನ್ನುವ ಪಾತ್ರವನ್ನು ಅವರಿಗೆ ನೀಡಿದರು. ಆಗಿನಿಂದ ಆಕೆಯ ಹೆಸರು ಸಿಲ್ಕ್ ಸ್ಮಿತಾ ಎಂದೇ ಹೆಸರು ಪಡೆಯಿತು. ಬರುಬರುತ್ತಾ ಸಿಲ್ಕ್ ಸ್ಮಿತಾ ಅವರ ಜನಪ್ರಿಯತೆ ಎಷ್ಟರ ಮಟ್ಟಿಗೆ ಜನಪ್ರಿಯತೆ ಗಳಿಸಿದರು ಎಂದರೆ, ಸ್ಟಾರ್ ಹೀರೋಗಳ ಸಿನಿಮಾ ಇದರು ಸಿಲ್ಕ್ ಅವರ ಒಂದು ಹಾಡು ಸಿನಿಮಾದಲ್ಲಿ ಇರಲೇಬೇಕಿತ್ತು.

ದೊಡ್ಡ ದೊಡ್ಡ ಹೀರೋಗಳ ಡೇಟ್ಸ್ ಸಿಕ್ಕರೂ ಸಿಲ್ಕ್ ಸ್ಮಿತಾ ಅವರ ಡೇಟ್ಸ್ ಮಾತ್ರ ಸಿಗುತ್ತಿರಲಿಲ್ಲ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹೀಗೆ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ಸಿಲ್ಕ್ ಸ್ಮಿತಾ ಅವರ ಹವಾ ಜೋರಾಗಿತ್ತು. ಸಿಲ್ಕ್ ಸ್ಮಿತಾ ಅವರ ಹಾಡುಗಳನ್ನ, ದೃಶ್ಯಗಳನ್ನ ನೋಡುವ ಸಲುವಾಗಿಯೇ ಜನರು ಥಿಯೇಟರ್ ಗೆ ಬರುವಷ್ಟು ಕ್ರೇಜ್ ಹೊಂದಿದ್ದರು ಸಿಲ್ಕ್. ಎಲ್ಲಾ ನಿರ್ಮಾಪಕರು ಕೂಡ ಸಿಲ್ಕ್ ಸ್ಮಿತಾ ಅವರ ಮನೆಯ ಮುಂದೆ ಡೇಟ್ಸ್ ಗಾಗಿ ಕ್ಯೂ ನಿಲ್ಲುತ್ತಿದ್ದರು.

ಎಲ್ಲರೂ ಸ್ಮಿತಾ ಅವರನ್ನು ದುರುಪಯೋಗ ಪಡಿಸಿಕೊಳ್ಳೋದಕ್ಕೆ ಪ್ರಯತ್ನ ಪಟ್ಟವರೇ, ಆದರೆ ಸಿಲ್ಕ್ ಸ್ಮಿತಾ ಅವರು ಮಾತ್ರ ಹಾತೊರೆದಿದ್ದು ಸ್ನೇಹಕ್ಕೆ. ಆದರೆ ಯಾರೂ ಕೂಡ ಅವರಿಗೆ ಒಳ್ಳೆಯ ಸ್ನೇಹಿತರಾಗಿ ಇರಲಿಲ್ಲ. ಒಬ್ಬ ಸ್ಟಾರ್ ಹೀರೋ ಇವರ ಜೊತೆಗೆ ಫ್ರೆಂಡ್ ಆಗಿ ಇರುತ್ತೀನಿ ಎಂದು ಹೇಳಿ, ಸ್ನೇಹದ ಗುರುತಿಗಾಗಿ ಸಿಲ್ಕ್ ಸ್ಮಿತಾ ಅವರ ಮೈಯನ್ನು ಸಿಗರೇಟ್ ಇಂದ ಸುಟ್ಟಿದ್ದರಂತೆ. ಇಂಥ ಹಿಂಸೆಗಳನ್ನು ಸಹಿಸಿಕೊಂಡಿದ್ದಾರೆ ಸಿಲ್ಕ್.

Leave A Reply

Your email address will not be published.