ಬೆಳ್ಳಿ ಉಂಗುರ ಧರಿಸ್ತೀರ ಹಾಗಾದರೆ ಈ ಮಾಹಿತಿ ಮಿಸ್ ಮಾಡದೇ ನೋಡಿ!

0
34

Silver Ring wearing : ಹಲವರು ತಮ್ಮ ಜೀವನದಲ್ಲಿ ಬದಲಾವಣೆಯಾಗಬೇಕು. ವೃತ್ತಿ ಜೀವನದಲ್ಲಿ, ವ್ಯಾಪಾರ, ವ್ಯವಹಾರದಲ್ಲಿ ಉತ್ತಮರಾಗಬೇಕು ಅಂತಾ ಜ್ಯೋತಿಷ್ಯಕ್ಕೆ ಮೊರೆ ಹೋಗ್ತಾರೆ. ವಿವಿಧ ತರಹದ ಹರಳನ್ನು ಧರಿಸುತ್ತಾರೆ. ಆದ್ರೆ ನೀವು ಬರೀ ಬೆಳ್ಳಿ ಉಂಗುರವನ್ನು ಹಾಕುವುದರಿಂದ ಹಲವು ಪ್ರಯೋಜನಗಳಿದೆ. ಹಾಗಾದ್ರೆ ಏನದು ಪ್ರಯೋಜನ ಅಂತಾ ನೋಡೋಣ ಬನ್ನಿ..

If you wear a silver ring then don’t miss this information!

12 ವರ್ಷಗಳ ನಂತರ, ಈ 3 ರಾಶಿಗಳ ಜಾತಕದಲ್ಲಿ ‘ಗಜಲಕ್ಷ್ಮಿ ರಾಜಯೋಗ’ !ಹಠಾತ್ ಸಂಪತ್ತು ಮತ್ತು ಅದೃಷ್ಟದ ಬಲವಾದ ಯೋಗ

ಬೆಳ್ಳಿ ಉಂಗುರವನ್ನು ಧರಿಸುವುದ್ಯಾಕೆ ಎಂದರೆ, ಇದರಿಂದ ಆರೋಗ್ಯ ಉತ್ತಮವಾಗಿರುತ್ತದೆ. ಜೀವನದಲ್ಲಿ ನೆಮ್ಮದಿ ಇರುತ್ತದೆ. ಗುರು ಮತ್ತು ಚಂದ್ರನ ಪ್ರಭಾವ ಬೆಳ್ಳಿಯ ಮೇಲೆ ಉತ್ತಮವಾಗರುವುದರಿಂದ, ಬೆಳ್ಳಿ ಉಂಗುರ ಧರಿಸೋದು ತುಂಬಾ ಉತ್ತಮ ಅಂತಾ ಹೇಳ್ತಾರೆ. ಹೆಚ್ಚಾಗಿ ಬೆಳ್ಳಿ ಉಂಗುರವನ್ನ ಕಿರುಬೆರಳಿಗೆ ಧರಿಸಲಾಗುತ್ತದೆ.

ಬೆಳ್ಳಿಯ ಉಂಗುರ ಧರಿಸುವುದರಿಂದ ನಮ್ಮ ದೇಹದಲ್ಲಿ ಸಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಾಗುತ್ತದೆ. ಅಲ್ಲದೇ ಬೆಳ್ಳಿ ದೇಹಕ್ಕೆ ತಂಪು ನೀಡುತ್ತದೆ. ನಾವು ಮೈತುಂಬ ಚಿನ್ನ ಹಾಕಿಕೊಂಡರೂ, ಕಾಲಿಗೆ ಬೆಳ್ಳಿ ಗೆಜ್ಜೆಯನ್ನು, ವಿವಾಹಿತರು ಬೆಳ್ಳಿ ಕಾಲುಂಗುರವನ್ನೇ ಹಾಕಬೇಕು ಎಂಬ ಪದ್ಧತಿ ಇದೆ. ಯಾಕಂದ್ರೆ, ದೇಹ ತಂಪಾಗಿರಬೇಕು ಅಂದ್ರೆ, ಪಾದ ತಂಪಾಗಿರಬೇಕು. ಪಾದ ತಂಪಾಗಿರಬೇಕು ಅಂದ್ರೆ ಬೆಳ್ಳಿ ಕಾಲ್ಗೆಜ್ಜೆ, ಹಾಕಬೇಕು.

12 ವರ್ಷಗಳ ನಂತರ, ಈ 3 ರಾಶಿಗಳ ಜಾತಕದಲ್ಲಿ ‘ಗಜಲಕ್ಷ್ಮಿ ರಾಜಯೋಗ’ !ಹಠಾತ್ ಸಂಪತ್ತು ಮತ್ತು ಅದೃಷ್ಟದ ಬಲವಾದ ಯೋಗ

Silver Ring wearing ನಾವು ಆಗಲೇ ವ್ಯಾಪಾರ ವಹಿವಾಟಿನಲ್ಲಿ ಯಶಸ್ಸು ಗಳಿಸಬೇಕಂದ್ರೆ ಬೆಳ್ಳಿ ಉಂಗುರ ಧರಿಸಬೇಕು ಅಂತಾ ಹೇಳಿದ್ವಿ. ನಮ್ಮ ಆರೋಗ್ಯ ಉತ್ತಮವಾಗಿದ್ರೆ, ನಾವು ನೆಮ್ಮದಿಯಿಂದ ಇದ್ರೆ, ನಮ್ಮ ಕೆಲಸ ಕಾರ್ಯದಲ್ಲಿ ಯಶಸ್ಸು ಸಿಗುತ್ತದೆ. ಅಲ್ಲದೇ, ಬೆಳ್ಳಿ ಉಂಗುರ ಧರಿಸುವುದರಿಂದ ಅದೃಷ್ಟ ಒಲಿಯುತ್ತದೆ. ಈ ಕಾರಣಕ್ಕೆ ಬೆಳ್ಳಿ ಉಂಗುರ ಧರಿಸಿದವರು ಯಶಸ್ಸು ಗಳಿಸುತ್ತಾರೆಂಬ ನಂಬಿಕೆ ಇದೆ.

LEAVE A REPLY

Please enter your comment!
Please enter your name here