Siri: ಬಿಗ್ ಬಾಸ್ ಮನೆಯ ಪ್ರಯಾಣದಲ್ಲಿ ಸಿರಿ ಅವರಿಗೆ ಸಿಕ್ಕಿರೋ ಸಂಭಾವನೆ ಎಷ್ಟು ಗೊತ್ತಾ?

Written by Pooja Siddaraj

Published on:

Siri: ಈ ಬಾರಿ ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ 7ನೇ ಸ್ಪರ್ಧಿಯಾಗಿ ಮನೆಯೊಳಗೆ ಎಂಟ್ರಿ ಕೊಟ್ಟವರು ನಟಿ ಸಿರಿಜಾ. ಇವರ ಬಗ್ಗೆ ಹೊಸದಾಗಿ ಪರಿಚಯ ಮಾಡಿಕೊಡುವ ಅಗತ್ಯವಿಲ್ಲ. ಸಿರಿಜಾ ಅವರು 20 ವರ್ಷಗಳಿಂದ ಕನ್ನಡ ಕಿರುತೆರೆ ಮತ್ತು ಬೆಳ್ಳಿತೆರೆ ಎರಡರಲ್ಲೂ ಸಕ್ರಿಯವಾಗಿದ್ದಾರೆ. ಬಹಳ ಚಿಕ್ಕವಯಸ್ಸಿಗೆ ನಟನೆ ಶುರು ಮಾಡಿದ ಸಿರಿಜಾ ಅವರು ಅಂಬಿಕಾ, ರಂಗೋಲಿ, ಮನೆಯೊಂದು ಮೂರು ಬಾಗಿಲು, ಬಂದೆ ಬರುತಾವ ಕಾಲ ಸೇರಿದಂತೆ ಸಾಕಷ್ಟು ಧಾರವಾಹಿಗಳಲ್ಲಿ ನಟಿಸಿದ್ದಾರೆ..

ಹಾಗೆಯೇ ಸುದೀಪ್ ಅವರೊಡನೆ ಚಂದು, ಸಾಹಸಸಿಂಹ ವಿಷ್ಣುವರ್ಧನ್ ಅವರ ಸಿಂಹಾದ್ರಿಯ ಸಿಂಹ ಸೇರಿದಂತೆ ಕೆಲವು ಕನ್ನಡ ಮತ್ತು ತೆಲುಗು ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ ಸಿರಿ. ಇತ್ತೀಚೆಗೆ ಕಲರ್ಸ್ ಕನ್ನಡ ವಾಹಿನಿಯ ರಾಮಾಚಾರಿ ಧಾರವಾಹಿಯಲ್ಲಿ ಶರ್ಮಿಳಾ ಪಾತ್ರದಲ್ಲಿ ನಟಿಸುತ್ತಿದ್ದರು. ಇದ್ದಕ್ಕಿದ್ದ ಹಾಗೆ ಧಾರವಾಹಿ ಇಂದಲೂ ಹೊರಬಂದಿದ್ದರು. ಇದೀಗ ಸಿರಿ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

ಸಿರಿ ಅವರ ಬಗ್ಗೆ ಆಸಕ್ತಿದಾಯಕ ವಿಚಾರ ಏನು ಎಂದರೆ, ಸಿರಿಜಾ ಅವರ ವಯಸ್ಸು 40 ದಾಟಿದ್ದರು ಕೂಡ ಅವರಿನ್ನು ಮದುವೆಯಾಗಿಲ್ಲ, ಇನ್ನು ಸಿಂಗಲ್ ಆಗಿಯೇ ಇದ್ದಾರೆ. ಬಿಗ್ ಬಾಸ್ ಮನೆಯಲ್ಲಿ 12 ವಾರಗಳ ಕಾಲ ಇದ್ದರು ನಟಿ ಸಿರಿಜಾ. ಇವರು ಫಿನಾಲೆ ವರೆಗು ಬರುತ್ತಾರೆ ಎಂದು ಎಲ್ಲರೂ ನಿರೀಕ್ಷೆ ಮಾಡಿದ್ದರು. ಆದರೆ ಅದು ಆಗಲಿಲ್ಲ. ಬಿಗ್ ಬಾಸ್ ಮನೆಯ ಒಳಗೆ ಯಾವುದೇ ವಿವಾದ ಸೃಷ್ಟಿಸಿಕೊಳ್ಳದೇ ಇದ್ದವರು ಸಿರಿ.

ಇದೀಗ ಇವರಿಗೆ ಬಿಗ್ ಬಾಸ್ ಮನೆಯಲ್ಲಿ ಸಿಕ್ಕ ಸಂಭಾವನೆ ಎಷ್ಟು ಎಂದು ಚರ್ಚೆಯಾಗುತ್ತಿದೆ. ಇತ್ತೀಚಿಗೆ ಸಂದರ್ಶನದಲ್ಲಿ ಪಾಲ್ಗೊಂಡಿದ್ದಾಗ ಸಿರಿ ಅವರಿಗೆ ಸಂಭಾವನೆ ಬಗ್ಗೆ ಪ್ರಶ್ನೆ ಕೇಳಲಾಗಿದ್ದು, ಅದರ ಬಗ್ಗೆ ಹೇಳೋದು ಕಷ್ಟ, ಅದು ಎಥಿಕ್ಸ್ ಅಲ್ವಾ… ಎಂದು ಹೇಳಿದ್ದಾರೆ ನಟಿ ಸಿರಿ. ಆದರೆ ಸಿರಿ ಅವರಿಗೆ ಒಳ್ಳೆಯ ಸಂಭಾವನೆ ಸಿಕ್ಕಿರೋದಂತೂ ಖಂಡಿತ.

Leave a Comment