ಬಿಗ್ ಬಾಸ್ ಇದು ಕನ್ನಡದ ಅತಿದೊಡ್ಡ ಮತ್ತು ಅತಿಹೆಚ್ಚು ಬೇಡಿಕೆ ಇರುವ ರಿಯಾಲಿಟಿ ಶೋ ಎಂದರೆ ತಪ್ಪಲ್ಲ. ಈ ಶೋ ಶುರುವಾಗುತ್ತೆ ಎಂದರೆ ಕನ್ನಡ ಕಿರುತೆರೆ ವೀಕ್ಷಕರು ಕಾಯುತ್ತಾ ಇರುತ್ತಾರೆ. ನಿನ್ನೆಯಷ್ಟೇ ಬಿಗ್ ಬಾಸ್ ಕನ್ನಡ ಸೀಸನ್ 10ಕ್ಕೆ ಚಾಲನೆ ಸಿಕ್ಕಿದ್ದು, ಕಿಚ್ಚ ಸುದೀಪ್ ಅವರು ಬಹಳಷ್ಟು ಟ್ವಿಸ್ಟ್ ಗಳ ಜೊತೆಗೆ 19 ಜನ ಸ್ಪರ್ಧಿಗಳನ್ನು ಮನೆಯೊಳಗೆ ಕಳಿಸಿದ್ದಾರೆ.
ಈ ಬಾರಿ ವೀಕ್ಷಕರು ಆಯ್ಕೆ ಮಾಡಿ ಸ್ಪರ್ಧಿಗಳನ್ನು ಮನೆಯೊಳಗೆ ಕಳಿಸಿದ್ದು, 6 ಸ್ಪರ್ಧಿಗಳು ವೇಟಿಂಗ್ ಲಿಸ್ಟ್ ನಲ್ಲಿದ್ದರು, ಇವರನ್ನು ಬಿಗ್ ಬಾಸ್ ಮನೆಗೆ ಕಳಿಸಲಾಗಿದ್ದು, ಒಂದು ವಾರ ಸಮಯಾವಕಾಶ ನೀಡಲಾಗಿದೆ, ಅಷ್ಟರ ಒಳಗೆ ಸ್ಪರ್ಧಿಗಳು ಬಿಗ್ ಬಾಸ್ ಕೊಡುವ ಟಾಸ್ಕ್ ನಲ್ಲಿ ಉತ್ತಮ ಪ್ರದರ್ಶನ ನೀಡಿ, ತಮ್ಮನ್ನು ತಾವು ಸಮರ್ಥರು ಎಂದು ಪ್ರೂವ್ ಮಾಡಿಕೊಂಡರೆ ಮನೆಯೊಳಗೆ ಉಳಿದುಕೊಳ್ಳುತ್ತಾರೆ.
ಈ ಸೀಸನ್ ನಲ್ಲಿ ಇದೊಂದು ಹೊಸ ಪ್ರಯತ್ನ ಆಗಿದ್ದು, ವೀಕ್ಷಕರಿಗು ಆಸಕ್ತಿದಾಯಕ ಅನ್ನಿಸಿದೆ. ಇನ್ನು ಈ ಸೀಸನ್ ನಲ್ಲಿ 7ನೇ ಸ್ಪರ್ಧಿಯಾಗಿ ಮನೆಯೊಳಗೆ ಎಂಟ್ರಿ ಕೊಟ್ಟವರು ನಟಿ ಸಿರಿಜಾ. ಇವರ ಬಗ್ಗೆ ಹೊಸದಾಗಿ ಪರಿಚಯ ಮಾಡಿಕೊಡುವ ಅಗತ್ಯವಿಲ್ಲ. ಸಿರಿಜಾ ಅವರು 20 ವರ್ಷಗಳಿಂದ ಕನ್ನಡ ಕಿರುತೆರೆ ಮತ್ತು ಬೆಳ್ಳಿತೆರೆ ಎರಡರಲ್ಲೂ ಸಕ್ರಿಯವಾಗಿದ್ದಾರೆ. ಬಹಳ ಚಿಕ್ಕವಯಸ್ಸಿಗೆ ನಟನೆ ಶುರು ಮಾಡಿದ ಸಿರಿಜಾ ಅವರು ಅಂಬಿಕಾ, ರಂಗೋಲಿ, ಮನೆಯೊಂದು ಮೂರು ಬಾಗಿಲು, ಬಂದೆ ಬರುತಾವ ಕಾಲ ಸೇರಿದಂತೆ ಸಾಕಷ್ಟು ಧಾರವಾಹಿಗಳಲ್ಲಿ ನಟಿಸಿದ್ದಾರೆ..
ಹಾಗೆಯೇ ಸುದೀಪ್ ಅವರೊಡನೆ ಚಂದು, ಸಾಹಸಸಿಂಹ ವಿಷ್ಣುವರ್ಧನ್ ಅವರ ಸಿಂಹಾದ್ರಿಯ ಸಿಂಹ ಸೇರಿದಂತೆ ಕೆಲವು ಕನ್ನಡ ಮತ್ತು ತೆಲುಗು ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ ಸಿರಿ. ಇತ್ತೀಚೆಗೆ ಕಲರ್ಸ್ ಕನ್ನಡ ವಾಹಿನಿಯ ರಾಮಾಚಾರಿ ಧಾರವಾಹಿಯಲ್ಲಿ ಶರ್ಮಿಳಾ ಪಾತ್ರದಲ್ಲಿ ನಟಿಸುತ್ತಿದ್ದರು. ಇದ್ದಕ್ಕಿದ್ದ ಹಾಗೆ ಧಾರವಾಹಿ ಇಂದಲೂ ಹೊರಬಂದಿದ್ದರು. ಇದೀಗ ಸಿರಿ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
ಸಿರಿ ಅವರ ಬಗ್ಗೆ ಆಸಕ್ತಿದಾಯಕ ವಿಚಾರ ಏನು ಎಂದರೆ, ಸಿರಿಜಾ ಅವರ ವಯಸ್ಸು 40 ದಾಟಿದ್ದರು ಕೂಡ ಅವರಿನ್ನು ಮದುವೆಯಾಗಿಲ್ಲ, ಇನ್ನು ಸಿಂಗಲ್ ಆಗಿಯೇ ಇದ್ದಾರೆ. ಈ ವಿಷಯದ ಬಗ್ಗೆ ವೇದಿಕೆ ಮೇಲೆ ಸ್ವತಃ ಸುದೀಪ್ ಅವರು ಪ್ರಶ್ನಿಸಿದರು, ಅದಕ್ಕೆ ಸಿರಿ ಅವರು ಉತ್ತರ ಕೊಟ್ಟಿದ್ದು, ತಾವು ಯಾಕೆ ಇನ್ನು ಮದುವೆಯಾಗಿಲ್ಲ ಎಂದು ತಿಳಿಸಿದ್ದಾರೆ.
ಸಿರಿ ಅವರು ಹೇಳಿದ್ದು ಏನು ಎಂದರೆ, “ನಮ್ಮ ತಂದೆಯನ್ನ ಕಳೆದುಕೊಂಡ ಮೇಲೆ ನಾವು ಮನೆಯಲ್ಲಿ ಇಬ್ಬರು ಹೆಣ್ಣುಮಕ್ಕಳು, ಮನೆಗೆ ಅಳಿಯ ಅನ್ನೋದಕ್ಕಿಂತ ಮಗನ ಹಾಗೆ ಇರುವ ಹುಡುಗ ಬೇಕಿತ್ತು, ಅದನ್ನ ಅರ್ಥ ಮಾಡಿಕೊಂಡು ಇರೋ ಅಂಥ ಹುಡುಗ ಸಿಗಬೇಕು ಅಂತ ಅಂದುಕೊಂಡಿದ್ದೆ. ಅಂಥ ಹುಡುಗ ಇನ್ನು ಸಿಕ್ಕಿಲ್ಲ. ಕೆಲವೊಮ್ಮೆ ಮದುವೆಯ ಅಗತ್ಯ ಇದೆಯಾ ಅಂತ ಕೂಡ ಅನ್ನಿಸಿದೆ, ಬೇಕೇ ಬೇಕು ಅನ್ನುವಂಥ ಅಗತ್ಯ ಕೂಡ ಇಲ್ಲ, ಒಳ್ಳೆ ಹುಡುಗ ಸಿಕ್ಕರೆ ನೋಡೋಣ..” ಎಂದು ಹೇಳಿದ್ದಾರೆ ಸಿರಿ..