Sitara Ghattamneni: 12 ವರ್ಷದ ನಟ ಮಹೇಶ್ ಬಾಬು ಮಗಳು ಗಳಿಸೋದು ಕೋಟಿ ಕೋಟಿ, ಹೇಗೆ ಗೊತ್ತಾ?

Written by Pooja Siddaraj

Published on:

Sitara Ghattamneni: ಟಾಲಿವುಡ್ ನ ಸ್ಟಾರ್ ನಟ ಮಹೇಶ್ ಬಾಬು ಅವರ ಬಗ್ಗೆ ಹೊಸದಾಗಿ ಪರಿಚಯ ಮಾಡಿಕೊಡುವ ಅಗತ್ಯವಿಲ್ಲ. ಮಹೇಶ್ ಬಾಬು ಅವರು ತೆಲುಗಿನ ಹಿರಿಯನಟ ಸೂಪರ್ ಸ್ಟಾರ್ ಕೃಷ್ಣ ಅವರ ಮಗ. ತೆಲುಗಿನಲ್ಲಿ ಸ್ಟಾರ್ ಆಗಿ ತಮ್ಮದೇ ಸ್ಥಾನ ಮಾನ ಗಳಿಸಿ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಫ್ಯಾನ್ ಬೇಸ್ ಹೊಂದಿದ್ದಾರೆ ಮಹೇಶ್ ಬಾಬು. ಇವರು ನಟಿ ನಮ್ರತಾ ಶಿರೋಡ್ಕರ್ ಅವರೊಡನೆ ಮದುವೆಯಾಗಿದ್ದಾರೆ..

ನಟಿ ನಮ್ರತಾ ಅವರು ಸೌತ್ ಇಂಡಿಯಾ ಹಾಗೂ ಬಾಲಿವುಡ್ ಎರಡು ಕಡೆ ಸಕ್ರಿಯವಾಗಿದ್ದ ನಟಿ, ಸ್ಟಾರ್ ನಟಿಯಾಗಿದ್ದ ನಮ್ರತಾ ಅವರು ಮಹೇಶ್ ಬಾಬು ಅವರೊಡನೆ ಮದುವೆಯಾದ ನಂತರ ನಟನೆ ಇಂದ ದೂರ ಉಳಿದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ, ಗೌತಮ್ ಹಾಗೂ ಸಿತಾರ. ಮಹೇಶ್ ಬಾಬು ಅವರ ಮಗಳು ಸಿತಾರ ಈಗಲೇ ಸ್ಟಾರ್ ಕಿಡ್ ಆಗಿ ಜನಪ್ರಿಯತೆ ಗಳಿಸಿದ್ದಾರೆ..

ಸಿತಾರ ಅವರಿಗೆ ಈಗ 12 ವರ್ಷ. ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ಸಿತಾರ ಅವರು ತಂದೆಯ ಹಾಡುಗಳಿಗೆ ಹೆಜ್ಜೆ ಹಾಕಿ, ರೀಲ್ಸ್ ಮಾಡಿ ಪೋಸ್ಟ್ ಮಾಡುತ್ತಾರೆ. ಅವುಗಳಿಗೆ ಮಿಲಿಯನ್ ಗಟ್ಟಲೇ ವೀಕ್ಷಣೆ ಕೂಡ ಬರುತ್ತದೆ. ಸಿತಾರ ಅವರಿಗೆ ಸುಮಾರು 2 ಮಿಲಿಯನ್ ಫಾಲೋವರ್ಸ್ ಇದ್ದಾರೆ ಇನ್ಸ್ಟಾಗ್ರಾಮ್ ನಲ್ಲಿ, ಇವರದ್ದೇ ಆದ ಯೂಟ್ಯೂಬ್ ಚಾನೆಲ್ ಇದ್ದು, ಅದರಲ್ಲಿ 2.79 ಲಕ್ಷ ಚಂದಾದಾರರು ಇದ್ದಾರೆ..

ಸಿತಾರ ಅವರು ಒಂದು ಪೋಸ್ಟ್ ಗೆ ಲಕ್ಷಗಟ್ಟಲೇ ಹಣ ಚಾರ್ಜ್ ಮಾಡುತ್ತಾರೆ. ಇತ್ತೀಚೆಗೆ ಇವರು ಒಂದು ಒಡವೆಯ ಜಾಹೀರಾತಿನಲ್ಲಿ ಕಾಣಿಸಿಕೊಂಡರು. ಅದಕ್ಕೆ 1 ಕೋಟಿ ಸಂಭಾವನೆ ಪಡೆದರು, ಆದರೆ ಆ ಹಣವನ್ನು ಬಡವರಿಗೆ ದಾನ ನೀಡಿ, ಒಳ್ಳೆಯ ಮನಸ್ಸನ್ನು ತೋರಿಸಿದರು. ಒಟ್ಟಿನಲ್ಲಿ 12 ವರ್ಷಕ್ಕೆ ಸಿತಾರ ಸ್ಟಾರ್ ರೀತಿಯಲ್ಲಿ ಹಣ ಸಂಪಾದನೆ ಮಾಡುತ್ತಿದ್ದಾರೆ ಎಂದರೆ ತಪ್ಪಲ್ಲ.

Leave a Comment