Sithara: ವಯಸ್ಸು 50 ದಾಟಿದ್ದರು ನಟಿ ಸಿತಾರ ಯಾಕಿನ್ನು ಮದುವೆಯಾಗಿಲ್ಲ? ಅಸಲಿ ಕಾರಣ ಇದು..

0 15

Sithara: 80ರ ದಶಕ ಮುಗಿಯುವ ಸಮಯದಲ್ಲಿ ಹಲವಾರು ಹೊಸ ನಟ ನಟಿಯರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಅಂತಹ ಪ್ರತಿಭಾನ್ವಿತ ನಟಿಯರಲ್ಲಿ ಒಬ್ಬರು ಸಿತಾರ. ಸಾಹಸಸಿಂಹ ವಿಷ್ಣುವರ್ಧನ್ ಅವರೊಡನೆ ಹಾಲುಂಡ ತವರು ಸಿನಿಮಾದಲ್ಲಿನ ಸಿತಾರ ಅವರ ಅಭಿನಯ ಇಂದಿಗೂ ಮರೆಯಲು ಸಾಧ್ಯವಿಲ್ಲ. ಗಂಡನ ಕಷ್ಟಕ್ಕೆ ಸಹಾಯ ಮಾಡಿ, ಕೊನೆಗೆ ಗಂಡ ತೀರಿಕೊಂಡ ಮೇಲೆ ಆಕೆ ಪಡುವ ಕಷ್ಟ ವೇದನೆಯ ಅಭಿನಯವನ್ನು ಮರೆಯಲು ಸಾಧ್ಯವಿಲ್ಲ.

ಸಿತಾರ ಅವರು ಜೂನ್ 30, 1973 ರಂದು ಕೇರಳದಲ್ಲಿ ಜನಿಸಿದರು. ಇವರ ತಂದೆಯ ಹೆಸರು ಪರಮೇಶ್ವರಂ ನಾಯರ್ ಮತ್ತು ತಾಯಿ ವಲ್ಸಲಾ ನಾಯರ್. ಮನೆಯ ಹಿರಿಯ ಮಗಳಾಗಿ ಜನಿಸುತ್ತಾರೆ ಸಿತಾರ. ಇವರಿಗೆ ಇಬ್ಬರು ತಮ್ಮಂದಿರು. ಇವರ ತಂದೆ ತಾಯಿ ಇಬ್ಬರು ಕೂಡ ಎಲೆಕ್ಟ್ರಿಕ್ ಬೋರ್ಡ್ ನಲ್ಲಿ ಅಧಿಕಾರಿಗಳಾಗಿದ್ದರು. ಕೆರಳದಲ್ಲಿಯೇ ವ್ಯಾಸಂಗ ಮಾಡುತ್ತಿದ್ದರು. ಸಿತಾರ ನಟಿಸಿದ ಮೊದಲ ಸಿನಿಮಾ ಪುಧು ಪುಧು ಅರ್ಥಂಗಳ್, ಈ ಸಿನಿಮಾದ ನಿರ್ದೇಶಕರು ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಕೆ.ಬಾಲಚಂದರ್.

ಮೊದಲ ಸಿನಿಮಾದಲ್ಲಿ ನಟಿಸಿದಾಗ ಸಿತಾರ ಪದವಿ ಕಾಲೇಜಿನಲ್ಲಿ ಓದುತ್ತಿದ್ದರು. ನಂತರದ ದಿನಗಳಲ್ಲಿ ಮಲಯಾಳಂ, ತಮಿಳು, ಕನ್ನಡ, ತೆಲುಗು ಚಿತ್ರರಂಗದಲ್ಲಿ ಸುಮಾರು 60ಕ್ಕು ಹೆಚ್ಚು ವಿಭಿನ್ನವಾದ ಪಾತ್ರಗಳಲ್ಲಿ ನಟಿಸಿದ್ದಾರೆ ಸಿತಾರ. ಬಹುತೇಕ ಮಹಿಳಾ ಪ್ರಧಾನ ಪಾತ್ರಗಳಲ್ಲೇ ನಟಿಸಿದ್ದಾರೆ. ಕನ್ನಡದಲ್ಲಿ ಹಾಲುಂಡ ತವರು, ಜೇನು ಗೂಡು, ಕಾವ್ಯ, ಕರುಳಿನ ಕುಡಿ, ದೀರ್ಘ ಸುಮಂಗಲಿ ಮುಂತಾದವು ಇವರು ನಟಿಸಿದ ಪ್ರಮುಖ ಸಿನಿಮಾಗಳು.

ಇತ್ತೀಚಿಗೆ ನೀಡಿದ ಇಂಟರ್ವ್ಯೂ ಒಂದರಲ್ಲಿ ಸಿತಾರ ಅವರು ಹಂಚಿಕೊಂಡ ವಿಷಯ ಬಹಳ ಚರ್ಚೆಯಾಗಿತ್ತು. ಅದೇನೆಂದರೆ, ಸಿತಾರ ಅವರಿಗೆ 45 ವರ್ಷವಾಗಿದೆ, ಆದರೆ ಅವರು ಇನ್ನು ಮದುವೆಯಾಗಿಲ್ಲ ಇದಕ್ಕೆ ಕಾರಣ ಏನೆಂಬುದನ್ನು ಸ್ವತಃ ಸಿತಾರ ಅವರೇ ಸಂದರ್ಶನದಲ್ಲಿ ತಿಳಿಸಿದ್ದರು. ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಿರ್ದೇಶಕ ಶ್ರೀ ಸಿದ್ದಲಿಂಗಯ್ಯ ಅವರ ಮಗ ನಟ ಮುರಳಿ ಸಿತಾರ ಅವರ ಕ್ಲೋಸ್ ಫ್ರೆಂಡ್, ಮುರಳಿ ಅವರ ದಿಢೀರ್ ನಿಧನ ಸಿತಾರ ಅವರಿಗೆ ಮಾನಸಿಕ ಖಿನ್ನತೆ ಉಂಟಾಯಿತು, ಅದೇ ಸಮಯದಲ್ಲಿ ಸಿತಾರ ಅವರ ತಂದೆ ಕೂಡ ಸಾವನ್ನಿಪ್ಪಿದರು ಈ ಎರಡು ಘಟನೆಗಳು ಸಿತಾರ ಅವರಿಗೆ ಬಹಳ ನೋವನ್ನುಂಟು ಮಾಡಿತು.

ಈ ಘಟನೆಗಳು ಅವರ ಮನಸ್ಸಿನ ಮೇಲೆ ಬೀರಿರುವ ಪರಿಣಾಮದಿಂದ ಸಿತಾರ ಅವರು 50 ವರ್ಷವಾದರೂ ಮದುವೆಯಾಗದೆ ಇದ್ದಾರೆ. ಮದುವೆಯಾಗಬಾರದು ಎಂಬುದು ಅವರ ಮನಸ್ಸಿನಲ್ಲಿ ದಟ್ಟವಾಗಿ ಉಳಿದುಬಿಟ್ಟಿದೆ. ಈ ಕಾರಣಗಳನ್ನು ಸಿತಾರ ಅವರು ಸಂದರ್ಶನದಲ್ಲಿ ತಿಳಿಸಿದರು. ನಾನು ನನ್ನ ಕನಸು ಸಿನಿಮಾ ಮೂಲಕ 2010 ರಲ್ಲಿ ಸಿತಾರ ಅವರು ಕನ್ನಡ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಿದ್ದರು, ಕನ್ನಡ ಇವರು ನಟಿಸಿದ ಕೊನೆಯ ಸಿನಿಮಾ ಅಮ್ಮ ಐ ಲವ್ ಯೂ, ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಪೋಷಕ ಪಾತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.

Leave A Reply

Your email address will not be published.