Sonu gowda about kantara : ರಿಷಬ್ ಶೆಟ್ಟಿ(Rishab Shetty) ನಟಿಸಿ, ನಿರ್ದೇಶನ ಮಾಡಿದ ಕಾಂತರಾ(Kantara) ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಪಡೆದುಕೊಂಡು ಸುಮಾರು 500 ಕೋಟಿಯಷ್ಟು ಕಲೆಕ್ಷನ್ ಮಾಡಿ, ಬ್ಲಾಕ್‌ಬಸ್ಟರ್ ಸಿನಿಮಾಗಳ ಸಾಲಿಗೆ ಸೇರ್ಪಡೆಯಾಗಿದೆ. ಇತ್ತೀಚಿಗಷ್ಟೇ ಈ ಸಿನಿಮಾ ಟಿವಿಯಲ್ಲಿ ಕೂಡಾ ಪ್ರಸಾರ ಕಂಡು ಹೊಸ ದಾಖಲೆಯನ್ನು ಬರೆದಿದೆ. ಮೊದಲು ಕನ್ನಡದಲ್ಲಿ ಬಂದ ಸಿನಿಮಾ ಇಲ್ಲಿ ಕಂಡ ಯಶಸ್ಸಿನ ಬಳಿಕ ಪ್ರೇಕ್ಷಕರ ಬೇಡಿಕೆಯ ಮೇರೆಗೆ ಅನಂತರ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಿಗೆ ಡಬ್ ಆಗಿ ಎಲ್ಲ ಭಾಷೆಗಳಲ್ಲೂ ಯಶಸ್ಸನ್ನು ಪಡೆದುಕೊಂಡು ಬೀಗುತ್ತಿದೆ. ಸಿನಿಮಾದ ಯಶಸ್ಸಿನ ನಂತರ ರಿಷಬ್ ಶೆಟ್ಟಿ ಅವರನ್ನು ಡಿವೈನ್ ಸ್ಟಾರ್ ಎಂದು ಕರೆಯಲಾಗುತ್ತಿದೆ.

ಇನ್ನು ಇತ್ತೀಚಿಗಷ್ಟೇ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಓಟಿಟಿ ಬಿಗ್ ಬಾಸ್ ಖ್ಯಾತಿಯ, ಸೋಶಿಯಲ್ ಮೀಡಿಯಾ ಸ್ಟಾರ್ ಸೋನು ಶ್ರೀನಿವಾಸ್ ಗೌಡ(Sonu Srinivas Gowda) ಕಾಂತರಾ ಸಿನಿಮಾ ಹೇಗಿತ್ತು ಎನ್ನುವುದನ್ನು ಹೇಳಿಕೊಂಡಿದ್ದಾರೆ. ಸೋನು ಮಾತನಾಡುತ್ತಾ, ಸ್ನೇಹಿತರು ನನಗೆ ಕಾಂತರಾ(Kantara) ಸಿನಿಮಾ ನೋಡುವಂತೆ ಹೇಳಿದರು. ಆದರೆ ನನಗೆ ಸಿನಿಮಾ ನೋಡುವ ಆಸಕ್ತಿ ಇರಲಿಲ್ಲ. ಬಿಗ್ ಬಾಸ್ ಓಟಿಟಿ ಮನೆಯಿಂದ ಬಂದ ನಂತರ ಹೊರಗೆ ಹೋಗಲು ಇಷ್ಟವಿರಲಿಲ್ಲ. ಅಷ್ಟೊಂದು ಸುಸ್ತಾಗಿತ್ತು. ವಿಶ್ರಾಂತಿ ಬೇಕೆನಿಸಿತ್ತು. ಎಲ್ಲರೂ ಸಿನಿಮಾ ನೋಡು ಅಂತ ಹೇಳುತ್ತಿದ್ದಾರೆ ಎಂದು ಅಕ್ಕನನ್ನು ಕರೆದುಕೊಂಡು ರಾತ್ರಿ ಶೋಗೆ ಸಿನಿಮಾಗೆ ಹೋದೆ.
ಆ ಸಿನಿಮಾ ಇರುವುದು ಮಂಗಳೂರು ಭಾಷೆಯಲ್ಲಿ. ಆರಂಭದಲ್ಲಿ ನನಗೆ ಏನೂ ಅರ್ಥವಾಗಲಿಲ್ಲ. ಇರಲಿ ಇರಲಿ ಅಂತ ಹಾಡುಗಳನ್ನು ನೋಡಿಕೊಂಡು ಸುಮ್ಮನಿದ್ದೆ. ಹೋಗ್ತಾ ಹೋಗ್ತಾ ಸಿನಿಮಾ ಸೂಪರ್ ಆಗಿತ್ತು. ಕೊನೆಯ 20 ನಿಮಿಷವಂತೂ ಬಹಳ ಚೆನ್ನಾಗಿತ್ತು. ಯಾರು ನಂಬೋದಿಲ್ಲ ಕಾಂತಾರ ಸಿನಿಮಾ ನೋಡಿಕೊಂಡು ಬಂದ ಮೇಲೆ ಮಲಗಿದ್ದ ನನಗೆ ಚಳಿ ಜ್ವರ ಬಂದಿತ್ತು. ಸ್ವಲ್ಪ ಆರೋಗ್ಯ ಕೆಟ್ಟತ್ತು, ಜೊತೆಗೆ ಚಳಿ ಜ್ವರ ಬಂದ ಕಾರಣ ಆಸ್ಪತ್ರೆಗೆ ಹೋದೆ. ಎರಡು ವಾರಗಳ ಕಾಲ ಆಸ್ಪತ್ರೆಯಲ್ಲಿದ್ದೆ. ಒಂದು ವಾರ ಬೆಂಗಳೂರಿನಲ್ಲಿ ಇನ್ನೊಂದು ವಾರ ಮಂಡ್ಯದಲ್ಲಿ ಆಸ್ಪತ್ರೆಯಲ್ಲಿದ್ದೆ.
ಓಟಿಟಿಯಲ್ಲಿ ಕಾಂತರಾ ಬಿಡುಗಡೆಯಾದಾಗ ನನ್ನ ಅಕ್ಕ ಹುಷಾರು, ಸಿನಿಮಾ ನೋಡುವಾಗ ಮತ್ತೆ ಚಳಿ ಜ್ವರ ಬರಬಹುದು ಎಂದಿದ್ದರು. ಚಿತ್ರದ ಕೊನೆಯ 20 ನಿಮಿಷ ನೋಡಿ ನನಗೆ ಹೇಗೆ ಅನಿಸುತ್ತೆಂದರೆ, ಈ ರೀತಿ ಸಿನಿಮಾ ಹೇಗೆ ಮಾಡಲು ಸಾಧ್ಯ ಎಂದು. ಕೆಲವೊಂದು ಸಿನಿಮಾಗಳಲ್ಲಿ ಬಹಳ ಗ್ರಾಫಿಕ್ಸ್ ಬಳಸುತ್ತಾರೆ. ಆದರೆ ಕಾಂತಾರ ಬಹಳ ಸಿಂಪಲ್ ಮತ್ತು ಕ್ರಿಯೇಟಿವ್ ಆಗಿದೆ. ಇಂಥ ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ನಾವು ಬೆಳೆಯಬೇಕು. ಇವರುಗಳ ಜೊತೆ ಒಂದು ಹೆಜ್ಜೆ ಇಡುತ್ತಿದ್ದೇವೆ ಎಂದು ಯೋಚನೆ ಮಾಡಿದಾಗ ತುಂಬಾ ಖುಷಿಯಾಗುತ್ತದೆ ಎಂದು ಸೋನು ಹೇಳಿದ್ದಾರೆ.Sonu gowda about kantara