ಕಾಂತಾರ ನಮ್ಮ ಕನ್ನಡದ ಹೆಮ್ಮೆ: ತೆಲುಗಿಗೆ ಹೋದರೂ ಕನ್ನಡ ಪ್ರೇಮ ಬಿಟ್ಟುಕೊಡದ ಶ್ರೀಲೀಲಾ
Sree Leela ಪ್ರಸ್ತುತ ಟಾಲಿವುಡ್ ನಲ್ಲಿ ಸದ್ದು ಮಾಡುತ್ತಿರುವ ಕಿಸ್ ಮತ್ತು ಭರಾಟೆ ಸಿನಿಮಾಗಳ ಸ್ಯಾಂಡಲ್ವುಡ್ ನಲ್ಲಿ ಸದ್ದು ಮಾಡಿ, ಸಿನಿಮಾ ಪ್ರೇಮಿಗಳ ಮನಸ್ಸನ್ನು ಗೆದ್ದಿರುವ ನಟಿ ಶ್ರೀಲೀಲಾ(Sri Leela), ತೆಲುಗು ಸಿನಿಮಾ ರಂಗದಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ರಶ್ಮಿಕಾ ಮಂದಣ್ಣ ಗೆ(Rashmika Mandanna) ಟಫ್ ಫೈಪೋಟಿ ಎನ್ನುವಂತೆ ಈಗ ಶ್ರೀಲೀಲಾ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ನಾಯಕಿಯಾಗಿ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದು, ಪ್ರಸ್ತುತ ನಟಿ ತೆಲುಗಿನ ಮಾಸ್ ಮಹಾರಾಜ ಖ್ಯಾತಿಯ ರವಿತೇಜ(Raviteja) ಜೊತೆಗೆ ನಟಿಸಿರುವ ಧಮಾಕ( Dhamaka) ಸಿನಿಮಾ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ಧಮಾಕಾ ಸಿನಿಮಾದ ಪ್ರಚಾರದ ವೇಳೆ ಶ್ರೀಲೀಲಾ ಕನ್ನಡದ ಸೂಪರ್ ಹಿಟ್ ಸಿನಿಮಾ ಕಾಂತಾರ (Kantara) ದ ಬಗ್ಗೆ ಮಾತನಾಡಿದ್ದು, ನಟಿಯು ಕಾಂತಾರ ಸಿನಿಮಾ ನಮ್ಮ ಕನ್ನಡದ ಹೆಮ್ಮೆ ಎಂದು ಹಾಡಿ ಹೊಗಳಿ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಕನ್ನಡ ಸಿನಿಮಾಗಳ ಮೂಲಕ ಶ್ರೀಲೀಲಾ ಸಾಕಷ್ಟು ಜನಪ್ರಿಯತೆ ಪಡೆದ ನಂತರ ತೆಲುಗಿನ ಹಿರಿಯ ನಟ ಶ್ರೀಕಾಂತ್ ಅವರ ಪುತ್ರನ ಸಿನಿಮಾ ಮೂಲಕ ಟಾಲಿವುಡ್ ಗೆ ಎಂಟ್ರಿ ನೀಡಿದರು. ಮೊದಲ ಸಿನಿಮಾ ಸೋತರೂ ಸಹಾ ನಟಿ ಶ್ರೀಲೀಲಾಗೆ ಮಾತ್ರ ಭರ್ಜರಿ ಅವಕಾಶಗಳು ಅರಸಿ ಬಂದಿವೆ. ತೆಲುಗಿಗೆ ಹೋದರೂ ಸಹಾ ಶ್ರೀಲೀಲಾ ಕನ್ನಡ ಚಿತ್ರರಂಗದ ಮೇಲೆ ತಮ್ಮ ಪ್ರೀತಿಯನ್ನು ಬಿಟ್ಟು ಕೊಟ್ಟಿಲ್ಲ.
ಪ್ರಸ್ತುತ ರವಿತೇಜಾ ಮತ್ತು ಶ್ರೀಲೀಲಾ ನಟನೆಯ `ಧಮಾಕ’ (Dhamaka) ಚಿತ್ರದ ಪ್ರಚಾರ ಕಾರ್ಯದಲ್ಲಿ ನಟಿ ತೊಡಗಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ನಟಿ ಶ್ರೀಲೀಲಾ ಅವರನ್ನು ಕನ್ನಡ ಸಿನಿಮಾ ರಂಗದ ಬಗ್ಗೆ ಒಂದಷ್ಟು ಪ್ರಶ್ನೆಗಳನ್ನು ಕೇಳಿದ್ದು, ಈ ವೇಳೆ ಕಾಂತಾರ ಸಿನಿಮಾ ಬಗ್ಗೆ ಕೇಳಿದಾಗ ನಟಿ ಕಾಂತಾರ ನಮ್ಮ ಕನ್ನಡದ ಹೆಮ್ಮೆ ಎಂದು ಹೇಳಿದ್ದಾರೆ. ನಾನು ಕಾಂತಾರ ನೋಡಿದ್ದೇನೆ, ನಾನು ಕರ್ನಾಟಕದವಳು, ಕನ್ನಡ ಚಿತ್ರರಂಗದ ವ್ಯಾಪ್ತಿ ಹೆಚ್ಚುತ್ತಿರುವುದು ಹೆಮ್ಮೆ ತಂದಿದೆ ಎಂದು ಕನ್ನಡ ಸಿನಿಮಾ ರಂಗದ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.