Sreeleela: ಸಾಂಪ್ರದಾಯಿಕ ಲುಕ್ ನಲ್ಲಿ ಶ್ರೀಲೀಲಾ ಹೊಸ ಫೋಟೋಶೂಟ್! ನೆಟ್ಟಿಗರು ಫಿದಾ!

0 12

Sreeleela: ಬೆಂಗಳೂರಿನ ಹುಡುಗಿ ನಟಿ ಶ್ರೀಲೀಲಾ ಇಂದು ತೆಲುಗು ಚಿತ್ರರಂಗದಲ್ಲಿ ಭಾರಿ ಸದ್ದು ಮಾಡುತ್ತಿರುವ ನಟಿ. ತೆಲುಗಿನ ಎಲ್ಲಾ ಸ್ಟಾರ್ ಹೀರೋ ಗಳ ಸಿನಿಮಾದಲ್ಲಿ ನಟಿಸುವ ಅವಕಾಶ ಶ್ರೀಲೀಲಾ ಅವರಿಗೆ ಸಿಗುತ್ತಿದೆ. ಕೈಯಲ್ಲಿ 8 ರಿಂದ 10 ಸಿನಿಮಾಗಳನ್ನು ಹೊಂದಿರುವ ಶ್ರೀಲೀಲಾ ಬ್ಯುಸಿ ಆಗಿದ್ದಾರೆ. ಇದೀಗ ಶ್ರೀಲೀಲಾ ಫೋಟೋಶೂಟ್ ಇಂದ ಸುದ್ದಿಯಾಗಿದ್ದಾರೆ.

ಹೌದು, ನಟಿ ಶ್ರೀಲೀಲಾ ಅವರು ಈಗ ಟಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ಬ್ಯುಸಿ, ಸ್ಟಾರ್ ಹೀರೋಗಳು ಹೊಸಬರು ಎಲ್ಲರ ಜೊತೆಗೆ ಕೂಡ ನಟಿಸುತ್ತಿದ್ದಾರೆ. ಈ ವರ್ಷವೇ ಶ್ರೀಲೀಲಾ ಅಭಿನಯದ ಮೂರ್ನಾಲ್ಕು ಸಿನಿಮಾಗಳು ತೆರೆಕಂಡು ಸಕ್ಸಸ್ ಕಂಡಿದೆ. ಸಿನಿಮಾ ಪ್ರೀರಿಲೀಸ್ ಇವೆಂಟ್ ಗಳಲ್ಲಿ ಕೂಡ ಶ್ರೀಲೀಲಾ ಅವರು ಬ್ಯುಸಿ ಆಗಿದ್ದಾರೆ.

ಮೊನ್ನೆಯಷ್ಟೇ ಇವರು ನಟ ಮಹೇಶ್ ಬಾಬು ಅವರೊಡನೆ ನಟಿಸಿರುವ ಗುಂಟೂರು ಖಾರಂ ಸಿನಿಮಾ ಬಿಡುಗಡೆಯಾಗಿ, ಉತ್ತಮ ಪ್ರದರ್ಶನ ಕಾಣುತ್ತಿದೆ. ತೆಲುಗಿನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುವ ಅವಕಾಶ ಪಡೆಯುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಕೂಡ ಅಷ್ಟೇ ಆಕ್ಟಿವ್. ಇದೀಗ ಶ್ರೀಲೀಲಾ ಅವರು ಫೋಟೋಶೂಟ್ ಮೂಲಕ ಸುದ್ದಿಯಾಗಿದ್ದು, ಸಾಂಪ್ರದಾಯಿಕ ಉಡುಪಿನಲ್ಲಿ ಶ್ರೀಲೀಲಾ ಅವರನ್ನು ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ.

Leave A Reply

Your email address will not be published.