Sreeleela: ಹಸಿರು ಸೀರೆಯಲ್ಲಿ ಶ್ರೀಲೀಲಾ ಅವರನ್ನು ನೋಡಿ ದಂಗಾದ ನೆಟ್ಟಿಗರು! ಈ ಸೀರೆಯ ಬೆಲೆ ಎಷ್ಟು ಗೊತ್ತಾ?

0 1

Sreeleela: ಬೆಂಗಳೂರಿನ ಹುಡುಗಿ ನಟಿ ಶ್ರೀಲೀಲಾ ಇಂದು ತೆಲುಗು ಚಿತ್ರರಂಗದಲ್ಲಿ ಭಾರಿ ಸದ್ದು ಮಾಡುತ್ತಿರುವ ನಟಿ. ತೆಲುಗಿನ ಎಲ್ಲಾ ಸ್ಟಾರ್ ಹೀರೋ ಗಳ ಸಿನಿಮಾದಲ್ಲಿ ನಟಿಸುವ ಅವಕಾಶ ಶ್ರೀಲೀಲಾ ಅವರಿಗೆ ಸಿಗುತ್ತಿದೆ. ಕೈಯಲ್ಲಿ 8 ರಿಂದ 10 ಸಿನಿಮಾಗಳನ್ನು ಹೊಂದಿರುವ ಶ್ರೀಲೀಲಾ ಬ್ಯುಸಿ ಆಗಿದ್ದಾರೆ. ಆದರೆ ಇದೀಗ ಇವರು ನಟನೆ ಇಂದ ಬ್ರೇಕ್ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ಹೌದು, ನಟಿ ಶ್ರೀಲೀಲಾ ಅವರು ಈಗ ಟಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ಬ್ಯುಸಿ, ಸ್ಟಾರ್ ಹೀರೋಗಳು ಹೊಸಬರು ಎಲ್ಲರ ಜೊತೆಗೆ ಕೂಡ ನಟಿಸುತ್ತಿದ್ದಾರೆ. ಈ ವರ್ಷವೇ ಶ್ರೀಲೀಲಾ ಅಭಿನಯದ ಮೂರ್ನಾಲ್ಕು ಸಿನಿಮಾಗಳು ತೆರೆಕಂಡು ಸಕ್ಸಸ್ ಕಂಡಿದೆ. ಸಿನಿಮಾ ಪ್ರೀರಿಲೀಸ್ ಇವೆಂಟ್ ಗಳಲ್ಲಿ ಕೂಡ ಶ್ರೀಲೀಲಾ ಅವರು ಬ್ಯುಸಿ ಆಗಿದ್ದಾರೆ.

ಮೊನ್ನೆಯಷ್ಟೇ ಇವರು ನಟ ಮಹೇಶ್ ಬಾಬು ಅವರೊಡನೆ ನಟಿಸಿರುವ ಗುಂಟೂರು ಖಾರಂ ಸಿನಿಮಾ ಬಿಡುಗಡೆಯಾಗಿ, ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾದ ಪ್ರೀರಿಲೀಸ್ ಇವೆಂಟ್ ನಲ್ಲಿ ಶ್ರೀಲೀಲಾ ಅವರು ಹಸಿರು ಬಣ್ಣದ ಸೀರೆ ಧರಿಸಿ ಕಾಣಿಸಿಕೊಂಡಿದ್ದರು, ಈ ಸೀರೆಯಲ್ಲಿ ಮನಮೋಹಕವಾಗಿ ಕಾಣುತ್ತಿದ್ದ ಶ್ರೀಲೀಲಾ ಅವರನ್ನು ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ. ಜೊತೆಗೆ ಶ್ರೀಲೀಲಾ ಅವರು ಧರಿಸಿರುವ ಬೆಲೆ ಕೂಡ ಚರ್ಚೆ ಆಗುತ್ತಿದೆ.

ಬಹಳ ಚಿಕ್ಕ ವಯಸ್ಸಿನಕ್ಕೆ ಶ್ರೀಲೀಲಾ ಅವರು ಇಷ್ಟು ಎತ್ತರಕ್ಕೆ ಬೆಳೆದಿರುವುದು ಸಂತೋಷದ ವಿಚಾರವೆ, ಕಾರ್ಯಕ್ರಮಗಳಲ್ಲಿ ಕಲರ್ ಫುಲ್ ಆಗಿ ಕಾಣಿಸಿಕೊಳ್ಳುವ ಶ್ರೀಲೀಲಾ ಅವರು ಈಗ ಧರಿಸಿರುವ ಹಸಿರು ಸೀರೆ ಬಹಳ ಸುಂದರವಾಗಿದ್ದು, ಈ ಸೀರೆಯ ಬೆಲೆ ಬರೋಬ್ಬರಿ 1.59 ಲಕ್ಷ ರೂಪಾಯಿಗಳು ಎಂದು ಮಾಹಿತಿ ಸಿಕ್ಕಿದೆ.

Leave A Reply

Your email address will not be published.