Sreeleela: ನಟನೆ ಇಂದ ಬ್ರೇಕ್ ತೆಗೆದುಕೊಳ್ಳಲಿದ್ದಾರಂತೆ ಶ್ರೀಲೀಲಾ! ಒಪ್ಪಿಕೊಂಡಿರೋ ಟಾಲಿವುಡ್ ಸಿನಿಮಾಗಳ ಕಥೆ ಏನು?

0 14

Sreeleela: ಬೆಂಗಳೂರಿನ ಹುಡುಗಿ ನಟಿ ಶ್ರೀಲೀಲಾ ಇಂದು ತೆಲುಗು ಚಿತ್ರರಂಗದಲ್ಲಿ ಭಾರಿ ಸದ್ದು ಮಾಡುತ್ತಿರುವ ನಟಿ. ತೆಲುಗಿನ ಎಲ್ಲಾ ಸ್ಟಾರ್ ಹೀರೋ ಗಳ ಸಿನಿಮಾದಲ್ಲಿ ನಟಿಸುವ ಅವಕಾಶ ಶ್ರೀಲೀಲಾ ಅವರಿಗೆ ಸಿಗುತ್ತಿದೆ. ಕೈಯಲ್ಲಿ 8 ರಿಂದ 10 ಸಿನಿಮಾಗಳನ್ನು ಹೊಂದಿರುವ ಶ್ರೀಲೀಲಾ ಬ್ಯುಸಿ ಆಗಿದ್ದಾರೆ. ಆದರೆ ಇದೀಗ ಇವರು ನಟನೆ ಇಂದ ಬ್ರೇಕ್ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ಹೌದು, ನಟಿ ಶ್ರೀಲೀಲಾ ಅವರು ಈಗ ಟಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ಬ್ಯುಸಿ, ಸ್ಟಾರ್ ಹೀರೋಗಳು ಹೊಸಬರು ಎಲ್ಲರ ಜೊತೆಗೆ ಕೂಡ ನಟಿಸುತ್ತಿದ್ದಾರೆ. ಈ ವರ್ಷವೇ ಶ್ರೀಲೀಲಾ ಅಭಿನಯದ ಮೂರ್ನಾಲ್ಕು ಸಿನಿಮಾಗಳು ತೆರೆಕಂಡು ಸಕ್ಸಸ್ ಕಂಡಿದೆ. ಸಿನಿಮಾ ಪ್ರೀರಿಲೀಸ್ ಇವೆಂಟ್ ಗಳಲ್ಲಿ ಕೂಡ ಶ್ರೀಲೀಲಾ ಅವರು ಬ್ಯುಸಿ ಆಗಿದ್ದಾರೆ.

ಮುಂದಿನ ವರ್ಷ ಇವರು ಮಹೇಶ್ ಬಾಬು ಅವರೊಡನೆ ನಟಿಸಿರುವ ಗುಂಟೂರು ಖಾರಂ ಸಿನಿಮಾ ತೆರೆ ಕಾಣಲಿದೆ. ಹೀಗೆ ಸಿನಿಮಾ ಶೂಟಿಂಗ್, ಈವೆಂಟ್ ಗಳು ಎಂದು ಬ್ಯುಸಿ ಇರುವ ಶ್ರೀಲೀಲಾ ಅವರು ಇದೀಗ ನಟನೆ ಇಂದ ಬ್ರೇಕ್ ತೆಗೆದುಕೊಳ್ಳುತ್ತಾರೆ ಎಂದು ಮಾಹಿತಿ ಸಿಕ್ಕಿದೆ. ಅಂದರೆ ಇವರು ಪೂರ್ತಿಯಾಗಿ ನಟನೆ ಇಂದ ದೂರ ಉಳಿಯುತ್ತಿಲ್ಲ, ಈ ಬ್ರೇಕ್ ಗೆ ಕಾರಣ ಶ್ರೀಲೀಲಾ ಅವರ ವಿದ್ಯಾಭ್ಯಾಸ.

ಹೌದು, ಶ್ರೀಲೀಲಾ ಅವರು ನಟನೆಯ ಜೊತೆಗೆ ಎಂಬಿಬಿಎಸ್ ವಿದ್ಯಾರ್ಥಿನಿ ಕೂಡ ಹೌದು, ಶೂಟಿಂಗ್ ನಡುವೆಯೇ ಮೆಡಿಕಲ್ ಪುಸ್ತಕಗಳನ್ನು ಕೂಡ ಇಟ್ಟುಕೊಂಡು ಓದುತ್ತಿದ್ದರಂತೆ. ಇದೀಗ ಅವರಿಗೆ ಕಾಲೇಜಿನಲ್ಲಿ ಸೆಮಿಸ್ಟರ್ ಎಕ್ಸಾಂ ಇರುವ ಕಾರಣ ಸ್ವಲ್ಪ ದಿನಗಳ ಕಾಲ ನಟನೆ ಇಂದ ದೂರ ಉಳಿಯಲಿದ್ದಾರಂತೆ. ಪರೀಕ್ಷೆ ನಂತರ ಮತ್ತೆ ನಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಕನ್ನಡದ ಹುಡುಗಿ ಆಗಿರುವ ಶ್ರೀಲೀಲಾ ಮತ್ತೆ ಕನ್ನಡ ಸಿನಿಮಾ ಮಾಡಲಿ ಎನ್ನುವುದು ಅಭಿಮಾನಿಗಳ ಆಸೆ ಕೂಡ ಆಗಿದೆ. ಮುಂದಿನ ಕನ್ನಡ ಸಿನಿಮಾ ಯಾವಾಗ ಮಾಡುತ್ತಾರೆ ಎಂದು ಕಾದು ನೋಡಬೇಕಿದೆ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಶ್ರೀಲೀಲಾ ಅವರು ಫೋಟೋಶೂಟ್ ಗಳ ಮೂಲಕ ಸದ್ದು ಮಾಡುತ್ತಿದ್ದಾರೆ.

Leave A Reply

Your email address will not be published.