ಭಾರತೀಯ ಚಿತ್ರರಂಗದಲ್ಲಿ ಮಿಂಚ್ತಾರೆ: ನಟಿ ಶ್ರೀಲೀಲಾನ ಹಾಡಿ ಹೊಗಳಿದ ತೆಲುಗಿನ ಸ್ಟಾರ್ ನಟ
Sri leela ಕನ್ನಡ ಸಿನಿಮಾ ರಂಗದಿಂದ ಬೆಳ್ಳಿ ತೆರೆಗೆ ಪರಿಚಯವಾದ ನಟಿ ಶ್ರೀಲೀಲಾ(Sri Leela) ತೆಲುಗು ಸಿನಿಮಾ ರಂಗಕ್ಕೆ ಅಡಿಯಿಟ್ಟಿದ್ದು, ಮೊದಲ ಸಿನಿಮಾದಿಂದಲೇ ಸಿನಿಮಾ ಮಂದಿಯ ಕಣ್ಣಿಗೆ ಬಿದ್ದಿದ್ದಾರೆ. ಅಲ್ಲದೇ ಈಗಾಗಲೇ ಟಾಲಿವುಡ್ ನಲ್ಲಿ ತನಗಾಗಿ ಒಂದು ನೆಲೆ ಕಂಡುಕೊಳ್ಳುವ ಹಾದಿಯಲ್ಲಿ ಶ್ರೀಲೀಲಾ ಹೆಜ್ಜೆ ಹಾಕಿದ್ದಾರೆ. ಟಾಲಿವುಡ್ ನಲ್ಲಿ ಶ್ರೀ ಲೀಲಾ(Sri Leela) ಮೊದಲ ಸಿನಿಮಾ ‘ಪೆಳ್ಳಿ ಸಂದಡಿ’ ಸಿನಿಮಾ ನಿರೀಕ್ಷಿತ ಗೆಲುವನ್ನು ಸಾಧಿಸದೇ ಇದ್ದರೂ, ನಟಿ ಮಾತ್ರ ಸಿನಿ ಪ್ರೇಮಿಗಳ ಮನಸ್ಸನ್ನು ಗೆದ್ದಿದ್ದಾರೆ. ಅದರ ಫಲವಾಗಿ ಈಗ ನಟಿಯು ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಾ ಸಖತ್ ಬ್ಯುಸಿಯಾಗಿದ್ದಾರೆ.
ಪ್ರಸ್ತುತ ನಟಿ ತೆಲುಗಿನ ಮಾಸ್ ಮಹರಾಜ ಖ್ಯಾತಿಯ ರವಿತೇಜ(Ravi Teja) ಅವರೊಂದಿಗೆ ನಟಿಸಿರುವ ‘ಧಮಾಕಾ(Dhamaka)’ ಸಿನಿಮಾ ಬಾಕ್ಸ್ ಅಫೀಸ್ನಲ್ಲಿ ಸಿಕ್ಕಾಪಟ್ಟೆ ಸದ್ದನ್ನು ಮಾಡುತ್ತಿದೆ. ಈ ಸಿನಿಮಾದ ಯಶಸ್ಸು ಈಗ ನಟಿಗೆ ತೆಲುಗಿನಲ್ಲಿ ಒಂದು ದೊಡ್ಡ ಬ್ರೇಕ್ ನೀಡಿದೆ. ಇತ್ತೀಚಿಗೆ ಸಿನಿಮಾದ ಸಕ್ಸಸ್ ಮೀಟ್ ನಡೆದಿದ್ದು, ಈ ವೇಳೆ ಸಿನಿಮಾದ ನಾಯಕ ನಟ ರವಿತೇಜಾ ಅವರು ನಟಿ ಶ್ರೀಲೀಲಾ ಅವರನ್ನು ಸಿಕ್ಕಾಪಟ್ಟೆ ಹಾಡಿ ಹೊಗಳುವ ಮೂಲಕ ಗಮನ ಸೆಳೆದಿದ್ದಾರೆ. ರವಿತೇಜ ಅವರು ಹೇಳಿದ್ದೇನು ಎನ್ನುವುದನ್ನು ತಿಳಿಯುವ ಆಸಕ್ತಿ ನಿಮ್ಮದಾದ್ರೆ ಇಲ್ಲಿದೆ ಉತ್ತರ.
ರವಿತೇಜಾ(Ravi Teja) ಮಾತನಾಡುತ್ತಾ ಶ್ರೀಲೀಲಾ(Sri Leela) ಬಹಳ ಪ್ರತಿಭಾವಂತೆ, ಅವರು ಬಹಳ ಸುಂದರ ಮತ್ತು ಪಾಸಿಟಿವ್ ವ್ಯಕ್ತಿತ್ವವನ್ನು ಹೊಂದಿದ್ದಾರೆ. ಶ್ರೀಲೀಲಾ ಡ್ಯಾನ್ಸಿಂಗ್ ಶೈಲಿಯು ಅದ್ಭುತವಾಗಿದೆ. ನಾನು ಹೇಳುವ ಮಾತುಗಳನ್ನು ನೆನಪಿಟ್ಟುಕೊಳ್ಳಿ, ಅವರು ತೆಲುಗು ಸಿನಿಮಾ ರಂಗದಲ್ಲಿ ಮಾತ್ರವೇ ಅಲ್ಲ, ಭಾರತೀಯ ಸಿನಿಮಾ ರಂಗದಲ್ಲಿ ದೊಡ್ಡ ಹೆಸರನ್ನು ಮಾಡುತ್ತಾರೆ ಎಂದು ಹಾಡಿ ಹೊಗಳಿದ್ದಾರೆ. ಇನ್ನು ನಟಿ ಶ್ರೀಲೀಲಾ ಮಹೇಶ್ ಬಾಬು(Mahesh Babu) ಅವರ ಹೊಸ ಸಿನಿಮಾದಲ್ಲಿ ಸಹಾ ನಾಯಕಿಯಾಗಿ ಮಿಂಚಲು ಸಜ್ಜಾಗಿದ್ದಾರೆ.