ಬಾಲಿವುಡ್ ನ ಸ್ಟಾರ್ ನಟಿ, ಅತಿಲೋಕ ಸುಂದರಿ ಶ್ರೀದೇವಿ ಅವರ ಸಿನಿಮಾಗಳು ಮತ್ತು ಹಾಡುಗಳು ಇಂದಿಗೂ ಎಲ್ಲರ ಫೇವರೆಟ್ ಎಂದರೆ ತಪ್ಪಲ್ಲ. ಶ್ರೀದೇವಿ ಅವರು ಇಂದು ನಮ್ಮೊಡನೆ ಇಲ್ಲ, ಆದರೆ ಅವರ ನೆನಪುಗಳು ಮತ್ತು ಸಿನಿಮಾಗಳು ಶ್ರೀದೇವಿ ಅವರ ಅಭಿಮಾನಿಗಳ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಶ್ರೀದೇವಿ ಅವರ ಬಗ್ಗೆ ಆಗಾಗ ಕೆಲವು ವಿಚಾರಗಳು ಚರ್ಚೆ ಆಗುತ್ತಲೇ ಇರುತ್ತದೆ. ಇದೀಗ ಶ್ರೀದೇವಿ ಅವರ ಬಗ್ಗೆ ಮತ್ತೊಂದು ವಿಚಾರ ಚರ್ಚೆ ಆಗುತ್ತಿದೆ.
ಅದೇನು ಎಂದರೆ, ಶ್ರೀದೇವಿ ಅವರು ಮದುವೆಗಿಂತ ಮೊದಲೇ ಗರ್ಭಿಣಿ ಆಗಿದ್ರ ಎನ್ನುವ ವಿಷಯವೊಂದು ಈಗ ಭಾರಿ ಚರ್ಚೆಯಾಗುತ್ತಿದೆ. ಆ ಪ್ರಶ್ನೆಗೆ ಶ್ರೀದೇವಿ ಅವರ ಪತಿ ಬೋನಿ ಕಪೂರ್ ಅವರೇ ಉತ್ತರ ಕೊಟ್ಟಿದ್ದಾರೆ. ಇತ್ತೀಚೆಗೆ ಬೋನಿ ಕಪೂರ್ ಅವರು ಒಂದು ಸಂದರ್ಶನದಲ್ಲಿ ಪಾಲ್ಗೊಂಡಿದ್ದರು, ಯೂಟ್ಯೂಬ್ ಚಾನೆಲ್ ಒಂದಕ್ಕೆ ಬೋನಿ ಕಪೂರ್ ಅವರು ನೀಡಿರುವ ಸಂದರ್ಶನದಲ್ಲಿ ತಮ್ಮ ವೈಯಕ್ತಿಕ ವಿಚಾರದ ಬಗ್ಗೆ ಮಾತನಾಡಿದ್ದಾರೆ.
ಬೋನಿ ಕಪೂರ್ ಅವರು ಶ್ರೀದೇವಿ ಅವರೊಡನೆ ಮದುವೆ ಆದ ವಿಚಾರದ ಬಗ್ಗೆ ಮತ್ತು ಅವರು ಮದುವೆಗಿಂತ ಮೊದಲೇ ಗರ್ಭಿಣಿ ಆಗಿರುವ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಬೋನಿ ಕಪೂರ್ ಅವರು ತಿಳಿಸಿರುವ ಹಾಗೆ, ನಟಿ ಶ್ರೀದೇವಿ ಮತ್ತು ನಿರ್ಮಾಪಕ ಬೋನಿ ಕಪೂರ್ ಅವರ ಮದುವೆ ನಡೆದದ್ದು 1996ರ ಜೂನ್ 2ರಂದು. ಮದುವೆಯಾಗಿ ಒಂದಷ್ಟು ತಿಂಗಳುಗಳ ಬಳಿಕ ಇವರಿಬ್ಬರು ಜೊತೆಯಾಗಿ ಕಾಣಿಸಿಕೊಂಡಾಗ ಶ್ರೀದೇವಿ ಅವರನ್ನು ನೋಡಿ, ಗರ್ಭಿಣಿ ಆಗಿದ್ದಾರೆ ಎನ್ನುವ ವಿಚಾರ ಬೆಳಕಿಗೆ ಬಂದಿತ್ತು.
ಆಗ ಜನರು ಶ್ರೀದೇವಿ ಅವರು ಮದುವೆಗಿಂತ ಮೊದಲೇ ಗರ್ಭಿಣಿ ಆಗಿದ್ದಾರೆ ಎಂದು ಮಾತನಾಡಿಕೊಂಡಿದ್ದರಂತೆ, ಆದರೆ ಅದು ನಿಜವಾಗಿರಲಿಲ್ಲ, ಒಂದು ವರ್ಷದ ಮೊದಲೇ ಶ್ರೀದೇವಿ ಮತ್ತು ಬೋನಿ ಕಪೂರ್ ಅವರ ಮದುವೆಯಾಗಿತ್ತು. ಈ ದಂಪತಿಯ ಮೊದಲ ಮಗಳು ಜಾನ್ವಿ ಕಪೂರ್ 1997ರ ಮಾರ್ಚ್ 6ರಂದು ಜನಿಸಿದರು. ಬಳಿಕ ಎರಡನೇ ಮಗಳು ಖುಷಿ ಕಪೂರ್ ಕೂಡ ಜನಿಸಿದರು. ಈ ವಿಚಾರ ಹೇಳುವ ಮೂಲಕ ಶ್ರೀದೇವಿ ಅವರು ಮದುವೆಗಿಂತ ಮೊದಲೇ ಗರ್ಭಿಣಿ ಆಗಿರಲಿಲ್ಲ ಎಂದು ತಿಳಿಸಿದ್ದಾರೆ.
ಶ್ರೀದೇವಿ ಅವರಿಗೆ ಮಕ್ಕಳ ಮೇಲೆ ಬಹಳ ಪ್ರೀತಿ ಇತ್ತು. ಮುದ್ದಿನ ಜೊತೆಗೆ ಬಹಳ ಸ್ಟ್ರಿಕ್ಟ್ ಆಗಿ ಶ್ರೀದೇವಿ ಅವರು ಬೆಳೆಸಿದ್ದರು. ಶ್ರೀದೇವಿ ಅವರ ಮೊದಲ ಮಗಳು ಜಾನ್ವಿ ಕಪೂರ್ ಅವರು ಧಡಕ್ ಸಿನಿಮಾ ಮೂಲಕ ನಾಯಕಿಯಾಗಿ ಬಾಲಿವುಡ್ ಗೆ ಎಂಟ್ರಿ ಕೊಟ್ಟರು. ಜಾನ್ವಿ ಅವರಿಗೆ ಈಗ 26 ವರ್ಷ, ಬಾಲಿವುಡ್ ನಲ್ಲಿ ಹಲವು ಒಳ್ಳೆಯ ಸಿನಿಮಾಗಳಲ್ಲಿ ನಟಿಸುವ ಸಿನಿಮಾ ಮೂಲಕ ಒಳ್ಳೆಯ ನಟಿ ಎಂದು ಹೆಸರು ಪಡೆದಿದ್ದಾರೆ.
ಇನ್ನು ಶ್ರೀದೇವಿ ಅವರ ಎರಡನೇ ಮಗಳು ಖುಷಿ ಕಪೂರ್ ಸಹ ಶೀಘ್ರದಲ್ಲೇ ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ. ಈ ವಿಚಾರ ಮಾತ್ರವಲ್ಲದೆ ಶ್ರೀದೇವಿ ಅವರ ಮರಣದ ಬಗ್ಗೆ ಕೂಡ ಬೋನಿ ಕಪೂರ್ ಅವರು ಮಾತನಾಡಿದ್ದಾರೆ. ಶ್ರೀದೇವಿ ಅವರ ದಿಢೀರ್ ಸಾವಿನ ಹಿಂದಿನ ಕಾರಣ ಏನು ಎನ್ನುವ ಪ್ರಶ್ನೆ ಎಲ್ಲರಲ್ಲೂ ಇತ್ತು, ಅದಕ್ಕೆ ಬೋನಿ ಕಪೂರ್ ಅವರು ಉತ್ತರ ನೀಡಿದ್ದು, ಶ್ರೀದೇವಿ ಅವರದ್ದು ಸಹಜ ಸಾವಲ್ಲ, ಅದು ಆಕಸ್ಮಿಕವಾದ ಸಾವು ಎಂದು ತಿಳಿಸಿದ್ದಾರೆ.