Srinath: ಚಂದನವನದ ಪ್ರಣಯರಾಜ ಶ್ರೀನಾಥ್ ಅವರ ಹುಟ್ಟುಹಬ್ಬ ಆಚರಿಸಿದ ಎವರ್ ಗ್ರೀನ್ ನಟಿಯರು!

0 26

Srinath: 70ರ ದಶಕದಲ್ಲಿ ಹೆಂಗೆಳೆಯರ ಫೇವರೆಟ್ ಆಗಿದ್ದ ನಟರಲ್ಲಿ ಒಬ್ಬರು ಶ್ರೀನಾಥ್. ಇವರು 1943 ರಲ್ಲಿ ಮೈಸೂರಿನಲ್ಲಿ ಜನಿಸಿದರು. ನಟನೆ ಶುರು ಮಾಡುವ ಮೊದಲು ನಾಟಕಗಳಲ್ಲಿ ಅಭಿನಯಿಸಿದ್ದರು ಶ್ರೀನಾಥ್. ಇವರ ನಿಜವಾದ ಹೆಸರು ನಾರಾಯಣ ಸ್ವಾಮಿ, ಕನ್ನಡ ಚಿತ್ರರಂಗದ ಖ್ಯಾತ ನಟ ಸಿ.ಆರ್.ಸಿಂಹ ಶ್ರೀನಾಥ್ ಅವರ ಅಣ್ಣ. 1967 ರಲ್ಲಿ ಲಗ್ನ ಪತ್ರಿಕೆ ಸಿನಿಮಾದಲ್ಲಿ ಚಿಕ್ಕ ಪಾತ್ರ ಒಂದರಲ್ಲಿ ನಟಿಸಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ನಂತರ 1969 ರಲ್ಲಿ ಮಧುರ ಮಿಲನ ಸಿನಿಮಾ ಮೂಲಕ ನಾಯಕ ನಟನಾದರು.

70 ಹಾಗು 80ರ ದಶಕದಲ್ಲಿ ಹಲವಾರು ಯಶಸ್ವಿ ಸಿನಿಮಾಗಳಲ್ಲಿ ನಟಿಸಿದ್ದರು ಶ್ರೀನಾಥ್. ಚಿತ್ರಬ್ರಹ್ಮ ಎಂದೇ ಖ್ಯಾತಿಯಾಗಿರುವ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಇವರ ಗುರುಗಳು. 350ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಶ್ರೀನಾಥ್ ಅವರು ನಟಿಸಿದ್ದು, ಇವರ ಕೆರಿಯರ್ ನ ಬೆಸ್ಟ್ ಸಿನಿಮಾ ಶುಭಮಂಗಳ ಆಗಿದೆ. ಬೆಸುಗೆ, ಕಿಲಾಡಿ ಜೋಡಿ, ಮಯೂರ, ಎರಡು ರೇಖೆಗಳು, ಪಾವನ ಗಂಗಾ ಸೇರಿದಂತೆ ನೂರಾರು ಒಳ್ಳೆಯ ಕಥೆ ಇರುವ ಸಿನಿಮಾಗಳಲ್ಲಿ ಶ್ರೀನಾಥ್ ಅಭಿನಯಿಸಿದ್ದಾರೆ. ಶ್ರೀನಾಥ್ ಹಾಗು ಮಂಜುಳಾ ಅವರ ಜೋಡಿ ಆಗಿನ ಕಾಲದಲ್ಲಿ ಬಹಳ ಜನಪ್ರಿಯತೆ ಗಳಿಸಿತ್ತು.

ತಮ್ಮ ಗುರುಗಳಾದ ಪುಟ್ಟಣ್ಣ ಕಣಗಾಲ್ ಅವರಿಗಾಗಿ ಮಾನಸ ಸರೋವರ ಸಿನಿಮಾದಲ್ಲಿ ನಟಿಸುವುದರ ಜೊತೆಗೆ ಆ ಸಿನಿಮಾವನ್ನು ನಿರ್ಮಾಣ ಕೂಡ ಮಾಡಿದ್ದರು ಶ್ರೀನಾಥ್. ಹೆಚ್ಚಾಗಿ ಲವ್ ಸ್ಟೋರಿ ಹಾಗೂ ಪ್ರೀತಿ ಭರಿತ ಸಿನಿಮಾಗಳಲ್ಲಿ ನಟಿಸಿದ್ದರಿಂದ ಶ್ರೀನಾಥ್ ಅವರಿಗೆ ಪ್ರಣಯರಾಜ ಎಂದು ಬಿರುದ್ಧು ನೀಡಲಾಗಿದೆ. ಇವರ ನಟನೆಗೆ ಫಿಲ್ಮ್ ಫೇರ್ ಅವಾರ್ಡ್, ಕರ್ನಾಟಕ ಸ್ಟೇಟ್ ಅವಾರ್ಡ್, ಲೈಫ್ ಟೈಮ್ ಅಚೀವ್ಮೆಂಟ್ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ದೊರಕಿದೆ.

ನಾಯಕನಟನಾಗಿ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದ ಶ್ರೀನಾಥ್ ಅವರು 80ರ ದಶಕ ಮುಗಿಯುವ ಸಮಯದಿಂದ ಪೋಷಕ ಪಾತ್ರಗಳಲ್ಲಿ ನಟಿಸಲು ಆರಂಭಿಸಿದರು. ಇಂದಿಗೂ ಸಹ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ, ಆಗಾಗ ಪೋಷಕ ಪಾತ್ರಗಳಲ್ಲಿ ನಟಿಸುತ್ತಾರೆ. ನಿನ್ನೆ ಶ್ರೀನಾಥ್ ಅವರ 80ನೇ ವರ್ಷದ ಹುಟ್ಟುಹಬ್ಬ. ನಿನ್ನೆಯ ವಿಶೇಷ ದಿನ ಚಂದನವನದ ಎವರ್ ಗ್ರೀನ್ ನಟಿಯರಾದ ಸುಧಾರಾಣಿ ಅವರು, ಶ್ರುತಿ ಅವರು ಹಾಗೂ ಮಾಳವಿಕಾ ಅವರು ಶ್ರೀನಾಥ್ ಅವರ ಮನೆಗೆ ಭೇಟಿ ನೀಡಿದ್ದಾರೆ.

ಹಿರಿಯನಟನ ಹುಟ್ಟುಹಬ್ಬವನ್ನು ಗೌರವಪೂರ್ವಕವಾಗಿ ಆಚರಿಸಿದ್ದಾರೆ. ಸುಧಾರಾಣಿ ಅವರು ಈ ವಿಶೇಷ ವಿಡಿಯೋ ಒಂದನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದು, ಈ ಮೂವರು ಹಿರಿಯರಿಗೆ ನೀಡುತ್ತಿರುವ ಗೌರವವನ್ನು ಕಂಡು ಜನರು ಇವರಿಗೆ ಮೆಚ್ಚುಗೆ ಸೂಚಿಸಿದ್ದಾರೆ, ಎಲ್ಲರೂ ಇವರ ಹೆಜ್ಜೆ ಗುರುತಲ್ಲಿ ನಡೆಯಬೇಕು ಎಂದು ಹೇಳುತ್ತಿದ್ದಾರೆ ನೆಟ್ಟಿಗರು.

Leave A Reply

Your email address will not be published.