Srirasthu Shubhamasthu: ತುಳಸಿ ಮಾಧವ ದಾಂಪತ್ಯ ಗೀತೆ! ಶ್ರೀರಸ್ತು ಶುಭಮಸ್ತು ವೀಕ್ಷಕರು ಶಾಕ್!

0 1

Srirasthu Shubhamasthu: ಜೀಕನ್ನಡ ವಾಹಿನಿಯ ಶ್ರೀರಸ್ತು ಶುಭಮಸ್ತು ಧಾರವಾಹಿ ಶುರುವಾಗಿ 1 ವರ್ಷವೇ ಕಳೆದುಹೋಗಿದೆ. ಬೇರೆ ಧಾರವಾಹಿಗಳಿಗಿಂತ ಇದು ವಿಭಿನ್ನವಾದ ಕಥೆ ಎಂದರೆ ತಪ್ಪಲ್ಲ. ಅತ್ತೆ ಸೊಸೆ ಕಿತ್ತಾಟ ನೋಡಿರುವ ವೀಕ್ಷಕರಿಗೆ ಈ ಧಾರವಾಹಿಯಲ್ಲಿ ಅತ್ತೆ ಸೊಸೆ ಬಾಂಧವ್ಯ ನೋಡಿದರೆ, ನಮ್ಮ ಅತ್ತೆ ಕೂಡ ತುಳಸಿ ಥರ ಇರಬೇಕು ಅಂತ ಅನ್ನಿಸದೆ ಇರದು. ಇದೀಗ ಈ ಧಾರಾವಾಹಿಯ ಹೊಸ ಹಾಡು ಬಿಡುಗಡೆ ಆಗಿದ್ದು ವೀಕ್ಷಕರು ಶಾಕ್ ಆಗಿದ್ದಾರೆ.

ಇಲ್ಲಿ ಅತ್ತೆ ತುಳಸಿ ಪಾತ್ರದಲ್ಲಿ ಸುಧಾರಾಣಿ ಅವರು ನಟಿಸುತ್ತಿದ್ದು, ಸೊಸೆ ಸಿರಿ ಪಾತ್ರದಲ್ಲಿ ಚಂದನ ರಾಘವೇಂದ್ರ, ಮಾಧವ ಪಾತ್ರದಲ್ಲಿ ನಟ ಅಜಿತ್ ಹಂದೆ, ದತ್ತ ಪಾತ್ರದಲ್ಲಿ ಹಿರಿಯನಟ ವೆಂಕಟ್ ರಾವ್, ಸಮರ್ಥ ಪಾತ್ರದಲ್ಲಿ ದರ್ಶಿತ್ ಗೌಡ ನಟಿಸುತ್ತಿದ್ದಾರೆ. ಮಧ್ಯವಯಸ್ಸಿನಲ್ಲಿ ತುಳಸಿಗೆ ಮಾಧವನ ಪರಿಚಯವಾಗುತ್ತದೆ, ಮಾಧವನ ಫ್ಯಾನ್ ಆಗಿರುವ ತುಳಸಿ, ನಂತರ ಇಬ್ಬರು ಸ್ನೇಹಿತರಾಗುತ್ತಾರೆ.. ಮಾಧವನಿಗೆ ತುಳಸಿ ಮೇಲೆ ಪ್ರೀತಿ ಕೂಡ ಶುರುವಾಗುತ್ತದೆ.

ಆದರೆ ಸಮಾಜ ಇವರ ಬಗ್ಗೆ ಕೆಟ್ಟದಾಗಿ ಮಾತನಾಡುವುದಕ್ಕೆ ಶುರು ಮಾಡಿದಾಗ, ತುಳಸಿಯ ಮಾವ ದತ್ತ ಮತ್ತು ಸೊಸೆ ಸಿರಿ ಇಬ್ಬರು ಸೇರಿ ತುಳಸಿ ಮಾಧವರ ಮದುವೆ ಮಾಡಿಸುತ್ತಾರೆ. ಈಗ ತುಳಸಿಗೆ ಸಾಕಷ್ಟು ಸವಾಲುಗಳು ಎದುರಾಗುತ್ತಿದ್ದು, ಇತ್ತ ಮಾಧವನ ಮನೆಯಲ್ಲೂ ಕಷ್ಟಪಡುತ್ತಾ, ಮಗನನ್ನು ಸರಿಯಾಗಿ ನೋಡಿಕೊಳ್ಳಲು ಸಾಧ್ಯವಾಗದೆ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಧಾರವಾಹಿ ಕಥೆ ಈ ರೀತಿ ಸಾಗುತ್ತಿದೆ, ಆದರೆ ಇತ್ತೀಚೆಗೆ ಜೀಕನ್ನಡ ಬಿಡುಗಡೆ ಮಾಡಿರುವ ಶ್ರೀರಸ್ತು ಶುಭಮಸ್ತು ಧಾರಾವಾಹಿಯ ಲಿರಿಕಲ್ ವಿಡಿಯೋ ಇದಕ್ಕೆ ತದ್ವಿರುದ್ಧವಾಗಿದೆ.

ತುಳಸಿ ಮಾಧವ ಬೇರೆಯದೇ ಮನೆಯಲ್ಲಿದ್ದಾರೆ, ಇಬ್ಬರು ಜೊತೆಯಾಗಿ ಅಡುಗೆ ಮಾಡುತ್ತಿದ್ದಾರೆ, ಹೊರಗಡೆ ಸುತ್ತಾಡುತ್ತಿದ್ದಾರೆ, ವಾಕಿಂಗ್ ಹೋಗುತ್ತಿದ್ದಾರೆ, ಮೊದಲ ಸಾರಿ ತುಳಸಿ ತನ್ನ ಹೆಸರನ್ನು ತುಳಸಿ ಮಾಧವ ಎಂದು ಹೇಳಿದ್ದಾರೆ. ಇಬ್ಬರು ಜೊತೆಯಾಗಿ ದೀಪಾವಳಿ ಹಬ್ಬ ಆಚರಿಸಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಶಾಕ್ ಆಗಿದ್ದು, ಧಾರವಾಹಿಯಲ್ಲಿ ಇಂಥ ಸಂದರ್ಭ ಬರೋಕೆ ಚಾನ್ಸ್ ಇಲ್ಲ ಎನ್ನುತ್ತಿದ್ದಾರೆ.

ಏಕೆಂದರೆ ತುಳಸಿ ಮಾಧವ ಫ್ರೆಂಡ್ಸ್ ಆಗಿದ್ದಾರೆ, ಜೊತೆಗೆ ನಿಂತು ಸಮಸ್ಯೆಗಳನ್ನು ಎದುರಿಸುದ್ದಾರೆ, ಆದರೆ ದಂಪತಿಗಳ ಹಾಗಿಲ್ಲ ಸ್ನೇಹಿತರ ಹಾಗಿದ್ದಾರೆ. ಮನೆಯಲ್ಲಿ ಇವರಿಬ್ಬರನ್ನು ಸಾಕಷ್ಟು ಜನ ಇನ್ನು ಒಪ್ಪಿಕೊಂಡಿಲ್ಲ. ಹಾಗಾಗಿ ವೀಕ್ಷಕರು ಇದೆಲ್ಲಾ ನಡೆಯುವುದಕ್ಕೆ ಸಾಧ್ಯವೆ ಇಲ್ಲ ಎನ್ನುತ್ತಿದ್ದಾರೆ. ಇನ್ನು ಕೆಲವರು ಕನಸಿನ ರೀತಿಯಲ್ಲಿ ಈ ಹಾಡು ತುಂಬಾ ಚೆನ್ನಾಗಿದೆ, ಅರ್ಥಪೂರ್ಣವಾದ ಸಾಹಿತ್ಯ ಎಂದು ಹೊಗಳುತ್ತಿದ್ದಾರೆ.

Leave A Reply

Your email address will not be published.