ಭಾರತದಲ್ಲಿ ಅದೆಷ್ಟೋ ಕೋಟೆಗಳಿವೆ.ಒಂದು ಕಾಲದಲ್ಲಿ ವೈಭವವನ್ನು ಕಂಡಿದ್ದ ಕೋಟೆಗಳು ನಂತರದ ದಿನಗಳಲ್ಲಿ ಅನೇಕ ದುರಂತಗಳಿಗೆ ಸಾಕ್ಷಿಯಾಗಿದೆ.ಇದೇ ದುರಂತ ಕಾಲಕ್ರಮೇಣ ಭಯಹುಟ್ಟಿಸುವ ಕಥೆಗೆ ಕಾರಣವಾಗಿ ಇಡಿ ಕೋಟೆ ಯನ್ನು ಇನ್ನಷ್ಟು ರಹಸ್ಯಗಳ ಕಂಗಟ್ಟಾಗಿ ಬಿಡಿಸಲಾಗದ ಒಗಟನ್ನಾಗಿ ಮಾಡಿಬಿಟ್ಟಿದೆ.ಇನ್ನು ಒಂದು ಕಾಲದಲ್ಲಿ ರಕ್ತದ ಕೋಟೆ , ಅಷ್ಟೇ ಭದ್ರವಾದ ಕೋಟೆ.
1932 ರಲ್ಲಿ ನಿರ್ಮಾಣವಾದ ಈ ಕೋಟೆಯ ಬೃಹತ್ ಪ್ರವೇಶದ್ವಾರ ಕ್ಕೆ ಅಳವಡಿಸಿರುವಂತಹ ಭರ್ಜರಿಯಾದಂತಹ ವಸ್ತುಗಳನ್ನು ಇರಿಸಿದ್ದರು.ಇನ್ನು ಇಲ್ಲಿ ಸುರಕ್ಷತೆಗೆ ಹೆಚ್ಚು ಒತ್ತು ನೀಡಿದ್ದಾರೆ.ಶತ್ರು ಸೇನೆ ಕೋಟೆಯ ಬಾಗಿಲಿಗೆ ಯಾವುದಾದರೂ ವಸ್ತುಗಳಿಂದ ಬಲವಾಗಿ ಒಡೆದು ಒಳ ಪ್ರವೇಶ ಮಾಡಬಹುದು ಎಂದು ಇಲ್ಲಿ ಸುರಕ್ಷತೆಯನ್ನು ನೀಡಲಾಗಿದೆ.ಇಂತಹ ಅಪೂರ್ವವಾದಂತಹ ಕೋಟೆ ಇರುವುದು ಪುಣೆಯ ಶನಿವಾರ ವಾಡ ಕೋಟೆ.ಈ ಕೋಟೆ ಸಮೃದ್ಧ ಇತಿಹಾಸಕ್ಕೆ ಸಾಕ್ಷಿ.ಶನಿವಾರ ವಾಡ ಕೋಟೆ ಪುಣೆಯ ಒಂದು ಹೆಗ್ಗುರುತು.
ಸಮೃದ್ಧ ಇತಿಹಾಸಕ್ಕೆ ಸಾಕ್ಷಿಯಾಗಿ ನಿಂತ ಕೋಟೆ ಇದಾಗಿದೆ.ಇತಿಹಾಸದ ಪುಟಗಳಲ್ಲಿ ಸ್ಥಾನ ಪಡೆದಿರುವ ಬಾಜಿರಾವ್ ಪೇಶ್ವಾ ಕಟ್ಟಿಸಿದ ಕೋಟೆ ಇದಾಗಿದೆ.10 ಜನವರಿ 1730 ರಂದು ಈ ಕೋಟೆ ನಿರ್ಮಾಣ ಕಾರ್ಯ ಆರಂಭವಾಗಿತ್ತು .22 ಜನವರಿ 1732ರಂದು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಕೋಟೆಯ ಗೃಹ ಪ್ರವೇಶ ನಡೆದಿತ್ತು.ಇದು ಮರಾಠ ಸಾಮ್ರಾಜ್ಯದ ಹೆಮ್ಮೆಯ ಕೋಟೆಯಾಗಿದೆ. ಸದ್ಯಕ್ಕೆ ಇದು ಪ್ರವಾಸಿ ತಾಣ , ಈಗಲೂ ಇಲ್ಲಿಗೆ ಸಾವಿರಾರು ಪ್ರವಾಸಿಗರು ಬಂದು ಖುಷಿ ಪಡುತ್ತಾರೆ.ಈ ಕೋಟೆಯನ್ನು ಕಲ್ಲು ಮತ್ತು ಇಟ್ಟಿಗೆಗಳಿಂದ ನಿರ್ಮಾಣ ಮಾಡಲಾಗಿದೆ.
ವಾಸ್ತುಶಿಲ್ಪ ಕ್ಕೂ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ ಆದರೆ ಇಂತಹ ಕೋಟೆಯೊಳಗೆ ಒಂದು ರಹಸ್ಯವಿದೆ.ಆ ರಹಸ್ಯ ಎಲ್ಲರಿಗೂ ಭಯ ಹುಟ್ಟುವಂತೆ ಮಾಡುತ್ತಂತೆ.ಪುರಾತನ ಕೋಟೆಗಳ ಹಿಂದೆ
ಭಯಾನಕ ಕಥೆ ಇರೋದು ಹೊಸದೇನಲ್ಲ ,ಬಹುತೇಕ ಎಲ್ಲಾ ಕೋಟೆಗಳ ಹಿಂದೆ ಒಂದೊಂದು ಭಯಾನಕ ಕಥೆ ಇದ್ದೆ ಇರುತ್ತದೆ ಅದರಿಂದ ಈ ಶನಿವಾರ ವಾಡ ಕೋಟೆ ಸಹ ಹೊರತಾಗಿಲ್ಲ.ಹುಣ್ಣಿಮೆಯ ರಾತ್ರಿಯಂದು ಇಲ್ಲಿಗೆ ಯಾರೂ ಹೋಗಬಾರದು ಎನ್ನುವ ನಂಬಿಕೆ ಈಗಲೂ ಸಹ ಚಾಲ್ತಿಯಲ್ಲಿದೆ.
ಅಷ್ಟೆ ಅಲ್ಲದೆ ಅಲ್ಲಿನ ಜನರಲ್ಲಿ ಇದೊಂದು ಭಯ ಭದ್ರವಾಗಿ ಬೇರೂರಿದೆ.ಇನ್ನು ಹುಣ್ಣಿಮೆ ರಾತ್ರಿ ಅಲ್ಲಿಗೆ ಯಾಕೆ ಹೋಗಬಾರದು ಎಂಬುದಕ್ಕೆ ಒಂದು ಶಾಪ ಕಾರಣ ಎನ್ನಲಾಗಿದೆ.ಒಂದು ಕಾಲದಲ್ಲಿ ಈ ಕೋಟೆಯನ್ನು ತುಂಬಾ ಖುಷಿಪಟ್ಟು ಕಟ್ಟಲಾಗಿತ್ತು ಆದ್ರೆ ಈಗ ಈ ಕೋಟೆ ಈ ಸ್ಥಿತಿಬಂದಿದೆ ಅಂದರೆ ನಂಬಲು ಸಾಧ್ಯವಾಗುವುದಿಲ್ಲಆದರೆ ಈಗಿನ ಶನಿವಾರ ವಾಡ ಕೋಟೆ ಐತಿಹಾಸಿಕವಾಗಿ ಸಾಕಷ್ಟು ಪ್ರಸಿದ್ಧಿ ಮತ್ತು ಮಹತ್ವವನ್ನು ಪಡೆದಿದೆ ಅಷ್ಟೇ ಅಲ್ಲದೆ ಭಯಾನಕ ಕಥೆಯ ಹಿಂದೆ ದಿಗಿಲು ಹುಟ್ಟಿಸುವುದು ಕಾರಣವಾಗಿದೆ.
ಶನಿವಾರ ವಾಡ ಕೋಟೆ ನಿರ್ಮಾಣವದ ಕೆಲ ತಿಂಗಳಷ್ಟರಲ್ಲಿ ಬಾಜೀರಾವ್ ಮರಣ ಎಲ್ಲರಿಗೆ ಆಘಾತ ತಂದಿತ್ತು
ಇದಾದ ಬಳಿಕ ಸಿಂಹಾಸನ ಏರಿದ ಯಾವ ರಾಜ ಕೂಡ ತುಂಬ ದಿನ ಬದುಕಲಿಲ್ಲ.ಒಂದು ಮೂಲಗಳ ಪ್ರಕಾರ ಇದಕ್ಕೆಲ್ಲ ಕಾರಣ 1 ಶಾಪವಂತೆ.ಬಾಜಿರಾವ್ ಅವರ ಮೊದಲ ಪತ್ನಿ ಕಾಶೀಬಾಯಿಯ ಸಖಿ ಈ ಶಾಪ ಕೊಟ್ಟರಂತೆ ಇದಕ್ಕೆ ಕಾರಣ ಸೇಡು.ಮರಾಠ ಸಮಾಜಕ್ಕೆ ದ್ರೋಹ ಬಗೆದ ಅನುಮಾನದಲ್ಲಿ ಈಕೆಯ ಪತಿಯನ್ನು ಬಾಜಿರಾವ್ ಸಾಯಿಸಿದ್ದರು.
ಇದರಿಂದ ಆಕೆ ಕೋಪಗೊಂಡು ಇನ್ನು ಮುಂದೆ ಈ ಶನಿವಾರ ವಾಡದಲ್ಲಿ ಖುಷಿಯೇ ಇರುವುದಿಲ್ಲ ಎಂಬ ಶಾಪವನ್ನು ನೀಡಿದ್ದಳಂತೆ.ಈಕೆಯ ಶಾಪದ ಪರಿಣಾಮವೇ ನಂತರದ ದಿನಗಳಲ್ಲಿ ಶನಿವಾರ ವಾಡ ತನ್ನೆಲ್ಲ ವೈಭವವನ್ನ ಕಳೆದುಕೊಳ್ಳುತ್ತದೆ.ಇನ್ನು ಕೆಲವರ ಪ್ರಕಾರ ಈ ಕೋಟೆಯಲ್ಲಿ ಆತ್ಮಗಳು ಸಂಚರಿಸುತ್ತದೆ
ಎಂದು ಹೇಳಲಾಗುತ್ತದೆ.ಕೆಲವರು ಹೇಳುವ ಪ್ರಕಾರ ಈ ಕೋಟೆಯಲ್ಲಿ ಆ ತ್ಮವೊಂದು ಸಂಚರಿಸುತ್ತದೆ ಎಂದು ಹೇಳಲಾಗಿದೆ.ಅದು ಬಾಜಿರಾವ್ ಅವರ ಮೊಮ್ಮಗ ನಾರಾಯಣ ರಾವ್ ಪೇಶ್ವ ರವರ ಆ ತ್ಮವಂತೆ.
ಅಧಿಕಾರದ ಆಸೆಯಿಂದ ತನ್ನ ಚಿಕ್ಕಪ್ಪ ಮತ್ತು ಆತನ ಕುಟುಂಬದಿಂದ ಹತನಾಗಿದ್ದ ನಾರಾಯಣ ರಾವ್ ಆ ತ್ಮ ಮುಕ್ತಿ ಇಲ್ಲದೆ ಓಡಾಡುತ್ತಿದೆ ಎಂದು ಅಲ್ಲಿನ ಜನರ ನಂಬಿಕೆ.ಅಂದು ನಾರಾಯಣರಾವ್ ಅವರನ್ನು ಹ ತ್ಯೆ ಮಾಡಿದವರು ದೇಹವನ್ನು ತುಂಡು ತುಂಡಾಗಿ ಮಾಡಿ ನದಿಗೆ ಎಸೆದಿದ್ದರಂತೆ.ಹೀಗಾಗಿ ಮುಕ್ತಿ ಸಿಗದೆ ಇರುವ ಕಾರಣ ನಾರಾಯಣ ರಾವ್ ಅವರ ಆ ತ್ಮ ಇಲ್ಲಿ ಓಡಾಡುತ್ತಿದೆ ಎಂದು ಹೇಳಲಾಗುತ್ತದೆ.
ಅವರ ಧ್ವನಿ ಈ ಕೋಟೆಯಲ್ಲಿ ಈಗಲೂ ಕೇಳಿಸುತ್ತದೆ ಎಂದು ಅಲ್ಲಿನ ಸ್ಥಳೀಯರ ನಂಬಿಕೆಯಾಗಿದೆ.ಹೀಗಾಗಿ ಹುಣ್ಣಿಮೆಯ ರಾತ್ರಿ ದಿನ ಯಾರು ಇಲ್ಲಿಗೆ ಹೋಗಬಾರದು ಎಂದು ನಂಬಿಕೆ ಇಟ್ಟಿದ್ದಾರೆ.
ಧನ್ಯವಾದಗಳು.