Sudharani: ರಣರಂಗ ಸಿನಿಮಾ ಹಾಡಿಗೆ ಮಗಳ ಜೊತೆಗೆ ಹೆಜ್ಜೆ ಹಾಕಿದ ನಟಿ ಸುಧಾರಾಣಿ, ಈಗಲೂ ಹಾಗೆ ಇದ್ದೀರಾ ಎಂದ ಫ್ಯಾನ್ಸ್!

0 12

Sudharani: ನಟಿ ಸುಧಾರಾಣಿ ಚಂದನವನದ ಹ್ಯಾಟ್ರಿಕ್ ಹೀರೋಯಿನ್ ಎಂದೇ ಗುರುತಿಸಿಕೊಂಡಿದ್ದಾರೆ. ಒಂದು ಕಡೆ ನಟ ಶಿವ ರಾಜ್ ಕುಮಾರ್ ಮೊದಲ ಮೂರು ಸಿನಿಮಾ ಹಿಟ್ ಕೊಟ್ಟು ಹ್ಯಾಟ್ರಿಕ್ ಹೀರೋ ಎನ್ನಿಸಿಕೊಂಡರು. ಇನ್ನೊಂದೆಡೆ ನಟಿ ಸುಧಾರಾಣಿ ಹೀರೋಯಿನ್ ಆಗಿ ನಟಿಸಿದ ಮೊದಲ ಮೂರು ಸಿನಿಮಾಗಳು ಸೂಪರ್ ಆಗಿ ಅವರು ಹ್ಯಾಟ್ರಿಕ್ ಹೀರೋಯಿನ್ ಎನ್ನಿಸಿಕೊಂಡರು. ಇಂದಿಗೂ ಎವರ್ ಗ್ರೀನ್ ಹೀರೋಯಿನ್ ಆಗಿದ್ದಾರೆ ಸುಧಾರಾಣಿ.

ನಟಿ ಸುಧಾರಾಣಿ ಅವರು ಬಾಲ್ಯದಿಂದಲೂ ಚೈಲ್ಡ್ ಆರ್ಟಿಸ್ಟ್ ಆಗಿ, ಹಲವಾರು ಸಿನಿಮಾಗಳಲ್ಲಿ ಜಾಹೀರಾತುಗಳಲ್ಲಿ ನಟಿಸಿದ್ದರು. 12ನೇ ವಯಸ್ಸಿನಲ್ಲಿ ಶಿವ ರಾಜ್ ಕುಮಾರ್ ಅವರ ಮೊದಲ ಸಿನಿಮಾ ಆನಂದ್ ಗೆ ನಾಯಕಿಯಾಗಿ 1986ರಲ್ಲಿ ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಎಂಟ್ರಿ ಕೊಟ್ಟರು. ಅಲ್ಲಿಂದ ಇವರು ತಿರುಗಿ ನೋಡಿದ್ದೆ ಇಲ್ಲ. ಇವರು ನಟಿಸಿದ ಸಿನಿಮಾಗಳೆಲ್ಲವು ಸೂಪರ್ ಹಿಟ್ ಆಗುತ್ತಿದ್ದವು. ಇವರು ಚಿತ್ರರಂಗಕ್ಕೆ ಕಾಲಿಟ್ಟು 35 ವರ್ಷ ಕಳೆದಿದ್ದರೂ, ಇಂದಿಗೂ ಸಹ ಅಷ್ಟೇ ಬೇಡಿಕೆ ಉಳಿಸಿಕೊಂಡಿದ್ದಾರೆ.

ಹಾಗೂ ಅಂದಿನ ಹಾಗೆಯೇ ಅದೇ ಚೆಲುವು ಮತ್ತು ಮುಗ್ಧತೆ ಅವರಲ್ಲಿ ಹಾಗೆಯೇ. ಈಗಲೂ ಸಹ ಕನ್ನಡ ಸಿನಿಪ್ರಿಯರ ನೆಚ್ಚಿನ ನಟಿ ಸುಧಾರಾಣಿ. ಸೋಷಿಯಲ್ ಮೀಡಿಯಾದಲ್ಲಿ ಈಗ ಬಹಳ ಆಕ್ಟಿವ್ ಆಗಿರುವ ಸುಧಾರಾಣಿ ಅವರು ಅಭಿಮಾನಿಗಳಿಗೋಸ್ಕರ ಹಲವಾರು ಫೋಟೋ ಮತ್ತು ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಇದೀಗ ಇವರು ಮಗಳ ಜೊತೆಗೆ ಡ್ಯಾನ್ಸ್ ಮಾಡಿರುವ ಒಂದು ವಿಡಿಯೋ ಶೇರ್ ಮಾಡಿದ್ದಾರೆ..

ಈ ವಿಡಿಯೋದಲ್ಲಿ 35 ವರ್ಷಗಳ ಹಿಂದೆ ಶಿವಣ್ಣ ಹಾಗೂ ಸುಧಾರಾಣಿ ಅವರು ಜೊತೆಯಾಗಿ ನಟಿಸಿದ್ದ ರಣರಂಗ ಸಿನಿಮಾದ ಓ ಮೇಘವೇ ನಿಧಾನಗಾಗಿ ಹಾಡಿಗೆ ಮಗಳ ಜೊತೆಗೆ ಅದೇ ಶೈಲಿಯಲ್ಲಿ ಹೆಜ್ಜೆ ಹಾಕಿದ್ದು, ವಿಡಿಯೋ ನೋಡಿದ ನೆಟ್ಟಿಗರು ಫಿದಾ ಆಗಿದ್ದಾರೆ. ಇದರಲ್ಲಿ ಅಮ್ಮ ಯಾರು ಮಗಳು ಯಾರು ಅಂತ ಗೊತ್ತಾಗ್ತಿಲ್ಲ, ಈಗಲೂ ಹಾಗೆ ಇದ್ದೀರಾ ನಿಮಗೆ ವಯಸ್ಸೇ ಅಗಲ್ವಾ ಅಂತಿದ್ದಾರೆ ಫ್ಯಾನ್ಸ್!

Leave A Reply

Your email address will not be published.