Suhani Bhatnagar: ಕೇವಲ 19 ವರ್ಷಕ್ಕೆ ಇಹಲೋಕ ತ್ಯಜಿಸಿದ ಯುವನಟಿ!

0 22

Suhani Bhatnagar: ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಕಲಾವಿದರು ನಿಧನ ರಾಗುತ್ತಿರುವ ವಿಚಾರಗಳನ್ನು ಕೇಳಿ ಚಿತ್ರರಂಗ ಶಾಕ್ ಆಗುತ್ತಿದೆ. ಇತ್ತೀಚೆಗೆ ಕನ್ನಡದಲ್ಲಿ ಹಿರಿಯನಟಿ ಲೀಲಾವತಿ ಅವರು ವಿಧಿವಶರಾದರು. ಇದೀಗ ಬಾಲಿವುಡ್ ನಟಿ ಯುವ ಪ್ರತಿಭೆ ಕೇವಲ 19 ವರ್ಷಕ್ಕೆ ನಿಧನರಾಗಿದ್ದಾರೆ ಎನ್ನುವ ಸುದ್ದಿ ಕೇಳಿಬಂದಿದೆ. ಇದರಿಂದ ಬಾಲಿವುಡ್ ಶಾಕ್ ಆಗುವುದರ ಜೊತೆಗೆ ಎಲ್ಲರಲ್ಲೂ ಗೊಂದಲ ಕೂಡ ಶುರುವಾಗಿದೆ.

ಇನ್ನು ಸುಹಾನಿ ಅವರು ಆಮಿರ್ ಖಾನ್ ಅವರ ದಂಗಾಲ್ ಸಿನಿಮಾದಲ್ಲಿ ಅವರ ಕೊನೆಯ ಮಗಳ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ಇಡೀ ದೇಶದಲ್ಲಿ ಎಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು ಎನ್ನುವ ವಿಷಯ ನಮಗೆಲ್ಲಾ ಗೊತ್ತೇ ಇದೆ. ಸುಹಾನಿ ಅವರ ಅಭಿನಯ ಕೂಡ ದಂಗಾಲ್ ಸಿನಿಮಾದಲ್ಲಿ ಅಷ್ಟೇ ಚೆನ್ನಾಗಿ ಮೂಡಿಬಂದಿತ್ತು. ಇದೀಗ ಈ ನಟಿ ವಿಧಿವಶರಾಗಿದ್ದಾರೆ ಎಂದು ಹೇಳಲಾಗುತ್ತಿದೆ..

ಇತ್ತೀಚೆಗೆ ಸುಹಾನಿ ಅವರಿಗೆ ಅಪಘಾತವಾಗಿ, ಕಾಲು ಮುರಿದುಕೊಂಡು ಚಿಕಿತ್ಸೆ ಪಡೆಯುತ್ತಿದ್ದರು. ಅದಕ್ಕಾಗಿ ತೆಗೆದುಕೊಳ್ಳುತ್ತಿದ್ದ ಮಾತ್ರೆಗ ಸೈಡ್ ಎಫೆಕ್ಟ್ಸ್ ಇಂದ ಪ್ರಾಣ ಹೋಗಿದೆ ಎಂದು ಹೇಳಲಾಗುತ್ತಿದೆ. ಆದರೆ ಇದು ಎಷ್ಟರ ಮಟ್ಟಿಗೆ ನಿಜವೋ ಅಥವಾ ಸುಳ್ಳೋ ಎಂದು ತಿಳಿದುಬಂದಿಲ್ಲ. ಯಾರ ಕಡೆಯಿಂದಲೂ ಇನ್ನು ಕೂಡ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಮತ್ತೊಂದು ಕಡೆ ಬೇರೆಯದೇ ಮಾತು ಕೇಳಿಬರುತ್ತಿದೆ.

ಇತ್ತೀಚೆಗೆ ಬಾಲಿವುಡ್ ನಟಿ ಪೂನಂ ಪಾಂಡೆ ಅವರು ವಿಧಿವಶರಾಗಿದ್ದಾರೆ ಎನ್ನುವ ಸುದ್ದಿ ಕೇಳಿಬಂದಿತ್ತು, ಬಳಿಕ ಅದು ಸುಳ್ಳು ಆಕೆ ಬದುಕಿದ್ದಾರೆ, ಕ್ಯಾನ್ಸರ್ ರೋಗಕ್ಕೆ ಜಾಗೃತಿ ಮೂಡಿಸುವುದಕ್ಕಾಗಿ ಈ ರೀತಿ ಮಾಡಲಾಗಿತ್ತು ಎಂದು ಹೇಳಲಾಯಿತು. ಈ ಘಟನೆ ಬಹಳಷ್ಟು ಜನರಿಗೆ ಶಾಕ್ ನೀಡಿತ್ತು, ಹಾಗಾಗಿ ಯಾರು ಕೂಡ ಸುಹಾನಿ ಅವರ ವಿಚಾರವನ್ನು ನಂಬುವುದಕ್ಕೆ ಕೆಲವರು ತಯಾರಿಲ್ಲ, ಪ್ರಚಾರಕ್ಕಾಗಿಯೇ ಈ ರೀತಿ ಮಾಡುತ್ತಿದ್ದಾರಾ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.