Sunaina: ಸೆಲೆಬ್ರಿಟಿಗಳ ಲೈಫ್ ಬಗ್ಗೆ ತಿಳಿದುಕೊಳ್ಳಲು ಜನರಿಗೆ ಹೆಚ್ಚಿನ ಕುತೂಹಲ ಇರುತ್ತದೆ. ಸೋಷಿಯಲ್ ಮೀಡಿಯಾ ಮೂಲಕ ಕಲಾವಿದರು ತಮ್ಮ ಲೈಫ್ ಬಗ್ಗೆ ಅಪ್ಡೇಟ್ ಗಳನ್ನು ನೀಡುತ್ತಾ ಇರುತ್ತಾರೆ. ಅವರ ಬದುಕಿನಲ್ಲಿ ಏರು ಪೇರು ಉಂಟಾದ ವಿಷಯ ಏನಾದರೂ ಗೊತ್ತಾದರೆ ಅಭಿಮಾನಿಗಳು ಗಾಬರಿ ಆಗುವುದು ಉಂಟು. ಇದೀಗ ಅಂಥದ್ದೇ ಘಟನೆ ನಟಿ ಸುನೈನಾ ಅವರ ವಿಚಾರದಲ್ಲಿ ಆಗಿದೆ..
ನಟಿ ಸುನೈನಾ ಅವರು ಕನ್ನಡದ ಗಂಗೆ ಬಾರೆ ತುಂಗೆ ಬಾರೆ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ಅವರ ಜೊತೆಗೆ ನಾಯಕಿಯಾಗಿ ನಟಿಸಿದ್ದರು. ಈ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಬಳಿಕ ಕನ್ನಡದಲ್ಲಿ ಯಾವುದೇ ಸಿನಿಮಾದಲ್ಲಿ ನಟಿಸಲಿಲ್ಲ, ಆದರೆ ತೆಲುಗು ಮತ್ತು ತಮಿಳು ಸಿನಿಮಾದಲ್ಲಿ ನಟಿಸುತ್ತಿದ್ದರು. ಆದರೆ ಹೆಚ್ಚಾಗಿ ಕಾಣಿಸಿಕೊಂಡಿರಲಿಲ್ಲ.
ಇತ್ತೀಚೆಗೆ ವೆಬ್ ಸೀರೀಸ್ ಗಳಲ್ಲಿ, ಕೆಲವು ಸಿನಿಮಾಗಳಲ್ಲಿ ನಟಿಸುವುದಕ್ಕೂ ಒಪ್ಪಿಕೊಂಡಿದ್ದರು, ಆದರೆ ಈಗ ಸುನೈನಾ ಅವರ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಿರುವ ಹಾಗೆ ಕಾಣುತ್ತಿದೆ. ಆಸ್ಪತ್ರೆ ಬೆಡ್ ಮೇಲೆ ಮಲಗಿರುವ ಫೋಟೋ ಒಂದನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ ನಟಿ ಸುನೈನಾ. ಕೈಗೆ ಡ್ರಿಪ್ಸ್ ಹಾಕಿಕೊಂಡು, ಮೂಗಿಗೆ ಟ್ಯೂಬ್ ಹಾಕಿರುವ ಸ್ಥಿತಿಯಲ್ಲಿರುವ ಫೋಟೋ ಹಂಚಿಕೊಂಡಿದ್ದಾರೆ.
“ನನಗೆ ಸ್ವಲ್ಪ ಸಮಯ ಕೋಡಿ ವಾಪಸ್ ಬರುತ್ತೇನೆ..” ಎಂದು ಕ್ಯಾಪ್ಶನ್ ಬರೆದುಕೊಂಡಿದ್ದಾರೆ. ಇವರಿಗೆ ಏನಾಗಿದೆ ಎನ್ನುವ ಬಗ್ಗೆ ಕ್ಲಾರಿಟಿ ಇಲ್ಲ, ಯಾವ ಆರೋಗ್ಯ ಸಮಸ್ಯೆ ಆಗಿದೆ ಎನ್ನುವ ಬಗ್ಗೆ ಸುನೈನಾ ಅವರು ತಿಳಿಸಿಲ್ಲ. ಅಭಿಮಾನಿಗಳಿಗೆ ಇದರಿಂದ ಆತಂಕ ಉಂಟಾಗಿದ್ದು, ಕಮೆಂಟ್ಸ್ ಮೂಲಕ ಏನಾಗಿದೆ ಎಂದು ಕೇಳುತ್ತಿದ್ದಾರೆ, ಬೇಗ ಹುಷಾರಾಗಿ ಬನ್ನಿ ಎಂದು ಕಾಳಜಿ ತೋರಿಸುತ್ತಿದ್ದಾರೆ.
ಸುನೈನಾ ಅವರು ಇತ್ತೀಚೆಗೆ ರೆಜಿನಾ ಎನ್ನುವ ಸಿನಿಮಾದಲ್ಲಿ ನಟಿಸಿದ್ದರು. ಇನ್ನು ಕೆಲವು ಸಿನಿಮಾಗಳನ್ನು ಕೂಡ ಒಪ್ಪಿಕೊಂಡಿದ್ದಾರೆ. ಆದರೆ ಆರೋಗ್ಯದಲ್ಲಿ ಈ ರೀತಿ ಆಗಿದೆ. ರೆಜಿನಾ ಅವರು ತಮ್ಮಆರೋಗ್ಯದ ಬಗ್ಗೆ ಯಾವಾಗ ಅಪ್ಡೇಟ್ ಕೊಡುತ್ತಾರೆ ಎಂದು ಅಭಿಮಾನಿಗಳು ಸಹ ಆತಂಕಕ್ಕೆ ಒಳಗಾಗಿದ್ದಾರೆ..
View this post on Instagram