Surya Jyotika: ವಿಚ್ಛೇದನ ಪಡೆಯುತ್ತಿದ್ದಾರಾ ತಮಿಳಿನ ಖ್ಯಾತ ಜೋಡಿ ಸೂರ್ಯ ಜ್ಯೋತಿಕಾ? ಅಸಲಿ ವಿಚಾರ ಇಲ್ಲಿದೆ

0 17

Surya Jyotika: ತಮಿಳಿನ ಸ್ಟಾರ್ ನಟ ಸೂರ್ಯ ಅವರ ಬಗ್ಗೆ ನಮಗೆಲ್ಲ ಗೊತ್ತೇ ಇದೆ. ತಮ್ಮ ಆಕ್ಟಿಂಗ್ ಸ್ಕಿಲ್ ಹಾಗೂ ವಿಭಿನ್ನವಾದ ಪಾತ್ರಗಳನ್ನು ಆಯ್ಕೆ ಮಾಡಿಕೊಂಡು, ಅಧ್ಭುತವಾದ ಸಿನಿಮಾಗಳನ್ನು ಮಾಡುವ ಮೂಲಕ ಸೂರ್ಯ ಅವರು ಗುರುತಿಸಿಕೊಂಡಿದ್ದಾರೆ. ತಮಿಳುನಾಡಿನಲ್ಲಿ ಮಾತ್ರವಲ್ಲದೆ, ಇಡೀ ಭಾರತದಲ್ಲಿ ಇವರಿಗೆ ಒಳ್ಳೆಯ ಅಭಿಮಾನಿ ಬಳಗ ಇದೆ. ಇದೀಗ ಇವರು ಪತ್ನಿ ಜ್ಯೋತಿಕಾ ಅವರಿಂದ ವಿಚ್ಛೇದನ ಪಡೆಯುತ್ತಾರೆ ಎನ್ನುವ ಸುದ್ದಿ ವೈರಲ್ ಆಗಿದೆ.

ನಟ ಸೂರ್ಯ ಅವರು ತಮಿಳು ಭಾಷೆಯಲ್ಲೇ ಸ್ಟಾರ್ ಹೀರೋಯಿನ್ ಆಗಿದ್ದ ಜ್ಯೋತಿಕಾ ಅವರನ್ನು ಪ್ರೀತಿಸಿ ಮದುವೆಯಾದರು. ಜ್ಯೋತಿಕಾ ಅವರು ಮೂಲತಃ ಮುಂಬೈನವರೇ ಅವರು ನಾಯಕಿಯಾಗಿ ಹೆಚ್ಚು ಹೆಸರು ಮಾಡಿದ್ದು ದಕ್ಷಿಣ ಭಾರತದಲ್ಲೇ. ತಮಿಳು, ತೆಲುಗು, ಕನ್ನಡ, ಮಲಯಾಳಂ, ಹಿಂದಿ ಎಲ್ಲಾ ಭಾಷೆಯ ಸಿನಿಮಾಗಳಲ್ಲೂ ನಟಿಸಿದ್ದಾರೆ ಜ್ಯೋತಿಕಾ. ಇವರು ಹಾಗೂ ಸೂರ್ಯ ಅವರದ್ದು ಲವ್ ಮ್ಯಾರೇಜ್..

ಈ ಜೋಡಿಗೆ ದಿಯಾ ಹಾಗೂ ದೇವ್ ಹೆಸರಿನ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಬಹಳ ಸುಂದರವಾಗಿದ್ದ ಇವರ ಸಂಸಾರದಲ್ಲಿ ಬಿರುಕು ಮೂಡಿದೆ, ಸೂರ್ಯ ಹಾಗೂ ಜ್ಯೋತಿಕಾ ಬೇರೆಯಾಗಿದ್ದಾರೆ, ವಿಚ್ಚೇದನ ಪಡೆಯುತ್ತಾರೆ, ಇಬ್ಬರು ಬೇರೆ ಬೇರೆಯಾಗಿ ವಾಸ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಕೇಳಿಬಂದಿತ್ತು. ಅದಕ್ಕೆ ಕಾರಣ ಸೂರ್ಯ ಅವರು ತಮಿಳುನಾಡಿನಲ್ಲಿದ್ದು, ಜ್ಯೋತಿಕಾ ಅವರು ಮುಂಬೈನಲ್ಲಿದ್ದಾರೆ.

ಈ ಕಾರಣಕ್ಕೆ ಇವರಿಬ್ಬರ ದಾಂಪತ್ಯ ಜೀವನದ ಬಗ್ಗೆ ಗಾಸಿಪ್ ಗಳು ಕೇಳಿಬಂದಿದ್ದವು. ಆದರೆ ಖುದ್ಧು ಜ್ಯೋತಿಕಾ ಅವರೇ ಈ ವಿಚಾರದ ಬಗ್ಗೆ ಕ್ಲಾರಿಟಿ ನೀಡಿದ್ದು, ತಾವು ಸಿನಿಮಾದಲ್ಲಿ ನಟಿಸುತ್ತಿದ್ದು ಜೊತೆಗೆ ಮಕ್ಕಳ ವಿದ್ಯಾಭ್ಯಾಸ ಮುಂಬೈನಲ್ಲಿ ನಡೆಯುತ್ತಿರುವ ಕಾರಣ ಅವರು ಮಕ್ಕಳ ಜೊತೆಗೆ ಮುಂಬೈನಲ್ಲಿ ಇರುವುದಾಗಿ ತಿಳಿಸಿದ್ದಾರೆ ಜ್ಯೋತಿಕಾ. ಇದನ್ನು ಹೊರತುಪಡಿಸಿ ಇನ್ಯಾವುದೇ ಕಾರಣ ಇಲ್ಲ ಎಂದು ಹೇಳಿದ್ದು, ತಾವಿಬ್ಬರು ಚೆನ್ನಾಗಿಯೇ ಇರುವುದಾಗಿ ಹೇಳಿದ್ದಾರೆ.

Leave A Reply

Your email address will not be published.