Sushma Nanaiah: ಪತಿ ಮತ್ತು ಮಗನ ಜೊತೆಗೆ ಲಕ್ಷ್ಮೀ ಬಾರಮ್ಮ ಕಾವೇರಿ ಫೋಟೋಶೂಟ್! ಸುಂದರ ಕುಟುಂಬ ಎಂದ ನೆಟ್ಟಿಗರು!

0 1

Sushma Nanaiah: ಕಲರ್ಸ್ ಕನ್ನಡ ವಾಹಿನಿಯ ಪಾಪ್ಯುಲರ್ ಧಾರವಾಹಿಗಳಲ್ಲಿ ಒಂದು ಲಕ್ಷ್ಮಿ ಬಾರಮ್ಮ. ಭಾಗ್ಯಲಕ್ಷ್ಮಿ ನಂತರ ಅತಿಹೆಚ್ಚು ಜನಪ್ರಿಯತೆ ಪಡೆದುಕೊಂಡಿರುವ ಧಾರವಾಹಿ ಇದೆ ಎಂದು ಹೇಳಿದರೆ ತಪ್ಪಲ್ಲ. ಈ ಧಾರವಾಹಿ ಈಗ ರೋಚಕ ಘಟ್ಟದಲ್ಲಿ ಸಾಗುತ್ತಿದೆ. ಲಕ್ಷ್ಮಿ ವೈಷ್ಣವ್ ನಡುವೆ ಮಧುರ ಬಾಂಧವ್ಯ ಶುರುವಾಗುತ್ತಿದೆ. ಈ ಧಾರವಾಹಿಯಲ್ಲಿ ವೈಷ್ಣವ್ ತಾಯಿ ಕಾವೇರಿ ಅವರ ನಿಜ ಜೀವನದ ಸಂಸಾರ ಎಷ್ಟು ಮುದ್ದಾಗಿದೆ ಗೊತ್ತಾ?

ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ಈಗ ಲಕ್ಷ್ಮಿಗೆ ಪೂರಕವಾಗಿ ಎಲ್ಲವೂ ನಡೆಯುತ್ತಿದೆ. ವೈಷ್ಣವ್ ತಾಯಿ ಕಾವೇರಿಗೆ ಮಗ ಹೆಂಡತಿ ಜೊತೆಗೆ ಜಾಸ್ತಿ ಇದ್ದು, ಕೈತಪ್ಪಿ ಹೋಗ್ತಾನೆ ಅನ್ನೋ ಭಯ. ಅದಕ್ಕಾಗಿ ಏನೇನೋ ನಾಟಕ ಮಾಡುತ್ತ ಇದ್ದಾಳೆ. ಇನ್ನು ಕೀರ್ತಿ ಕೂಡ ಲಕ್ಷ್ಮಿ ವೈಷ್ಣವ್ ಇಂದ ದೂರ ಆಗುವ ಹಾಗೆ ಮಾಡೋದಕ್ಕೆ ಏನೇನೋ ಮಾಡುತ್ತಿದ್ದಾಳೆ. ಆದರೆ ಅದ್ಯಾವುದು ನಡೆಯುತ್ತಿಲ್ಲ. ಈಗ ಧಾರವಾಹಿಯಲ್ಲಿ ತನಗೆ ಮತ್ತು ತನ್ನ ಹೆಂಡತಿಗೆ ಅವಮಾನ ವ್ಯಕ್ತಿಗೆ ಬುದ್ಧಿ ಕಲಿಸಲು ಹೊರಟಿದ್ದಾನೆ ವೈಷ್ಣವ್.

ಇದರಿಂದಲೂ ವೈಷ್ಣವ್ ಲಕ್ಷ್ಮಿ ಹತ್ತಿರ ಆಗುತ್ತಿರುವುದು ಕಾವೇರಿಗೆ ಇಷ್ಟವಿಲ್ಲ. ಧಾರಾವಾಹಿಯಲ್ಲಿ ಮಗನ ಮೇಲೆ ಅತಿಯಾದ ವ್ಯಾಮೋಹ ಹೊಂದಿರುವ ಪಾತ್ರ ಕಾವೇರಿಯದ್ದು. ತನ್ನನ್ನು ಬಿಟ್ಟು ಮಗ ಸೊಸೆ ಚೆನ್ನಾಗಿರೋದನ್ನ ಸಹಿಸೋಕೆ ಕಾವೇರಿ ಇಂದ ಆಗ್ತಿಲ್ಲ. ಮಗ ತನ್ನ ಜೊತೆ ಮಾತ್ರ ಚೆನ್ನಾಗಿರಬೇಕು ಎಂದು ಬಯಸುತ್ತಾಳೆ ಕಾವೇರಿ. ಒಂದು ರೀತಿ ಸ್ವಾರ್ಥ ತುಂಬಿದ ಪಾತ್ರ ಕಾವೇರಿಯದ್ದು ಆದರೆ ನಿಜ ಜೀವನದಲ್ಲಿ ಇವರು ಆ ಪಾತ್ರಕ್ಕೆ ವಿರುದ್ಧವಾದ ಸ್ವಭಾವ ಹೊಂದಿದ್ದಾರೆ ಎಂದರೆ ತಪ್ಪಲ್ಲ.

ಕಾವೇರಿ ಪಾತ್ರದಲ್ಲಿ ನಟಿಸುತ್ತಿರುವುದು ಸುಶ್ಮಾ ನಾಣಯ್ಯ ಅವರು. ಇವರು ಕಿರುತೆರೆಗೆ ಹೊಸಬರಲ್ಲ, ಕೆಲ ವರ್ಷಗಳ ಹಿಂದೆ ಧಾರವಾಹಿಗಳಲ್ಲಿ ನಟಿಸಿದ್ದಾರೆ. ನಟಿ ಎನ್ನುವುದರ ಜೊತೆಗೆ ಇವರು ಮೇಕಪ್ ಆರ್ಟಿಸ್ಟ್ ಕೂಡ ಹೌದು. ಸುಶ್ಮಾ ಅವರು ನಿಜ ಜೀವನದಲ್ಲಿ ಬಹಳ ಸೌಮ್ಯ ವ್ಯಕ್ತಿತ್ವ ಹೊಂದಿರುವವರು. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ಸುಶ್ಮಾ ಅವರು ಸಾಕಷ್ಟು ವಿಚಾರಗಳನ್ನು ಶೇರ್ ಮಾಡಿಕೊಳ್ಳುತ್ತಾರೆ..

ಇದೀಗ ಇವರು ತಮ್ಮ ಪತಿ ಮತ್ತು ಮಗು ಜೊತೆಗೆ ಹೊಸದಾಗಿ ಫೋಟೋಶೂಟ್ ಮಾಡಿಸಿದ್ದು ಅವುಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಮೊದಲ ಸಾರಿಗೆ ಮಗಳು ಮತ್ತು ಪತಿಯ ಜೊತೆಗೆ ಫೋಟೋಶೂಟ್ ಮಾಡಿಸಿ ಬಹಳ ಸಂತೋಷದಿಂದ ಕಾಣಿಸಿಕೊಂಡಿದ್ದಾರೆ ಸುಶ್ಮಾ. ಇವರ ಫ್ಯಾಮಿಲಿ ಫೋಟೋಸ್ ನೆಟ್ಟಿಗರಿಗೆ ತುಂಬಾ ಇಷ್ಟವಾಗಿದ್ದು, ಸುಂದರವಾದ ಕುಟುಂಬ ಎಂದು ಮೆಚ್ಚುಗೆ ಸೂಚಿಸುತ್ತಿದ್ದಾರೆ.

Leave A Reply

Your email address will not be published.