Tanisha Kuppanda: ಕಿರುತೆರೆಯ ನಟನ ಜೊತೆಗೆ ರಿಲೇಶನ್ಷಿಪ್ ನಲ್ಲಿದ್ರಂತೆ ಬಿಗ್ ಬಾಸ್ ತನಿಷಾ! ಯಾರದು ಗೊತ್ತಾ?

0 24

Tanisha Kuppanda: ಬಿಗ್ ಬಾಸ್ ಮನೆಯಲ್ಲಿ ಬೆಂಕಿ ಎಂದೇ ಫೇಮಸ್ ಆಗಿರುವವರು ನಟಿ ತನಿಷಾ ಕುಪ್ಪಂಡ. ಕನ್ನಡ ಕಿರುತೆರೆಯಲ್ಲಿ ಮಂಗಳಗೌರಿ ಮದುವೆ ಧಾರವಾಹಿಯಲ್ಲಿ ರಾಜೀವನ ಅತ್ತಿಗೆಯ ಪಾತ್ರದಲ್ಲಿ ನಟಿಸಿದ್ದರು ತನಿಷಾ. ಇದು ಖಡಕ್ ವಿಲ್ಲನ್ ಪಾತ್ರ ಆಗಿತ್ತು. ಈ ಪಾತ್ರ ತನಿಷಾ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತು ಎಂದರೆ ತಪ್ಪಲ್ಲ. ಇವರು ಬಿಗ್ ಬಾಸ್ ಮನೆಯಲ್ಲಿ ಶೈನ್ ಆಗಿದ್ದರು ಎಂದರೆ ತಪ್ಪಲ್ಲ.

ಬಿಗ್ ಬಾಸ್ ಮನೆಗೆ ಬಂದ ಮೊದಲ ದಿನದಿಂದಲೂ ತನಿಷಾ ಅವರು ತಮ್ಮ ನೇರ ನಡೆ, ಖಡಕ್ ಮಾತುಗಳಿಂದಲೇ ಹೆಸರುವಾಸಿ ಆಗಿದ್ದರು. ವಿನಯ್ ಅವರಿಗೆ ಸರಿಯಾಗಿ ಠಕ್ಕರ್ ಕೊಡುತ್ತಿದ್ದ ಸ್ಪರ್ಧಿ ತನಿಷಾ ಎಂದರೆ ತಪ್ಪಲ್ಲ. ಜೋರಾದ ಮಾತುಗಳಿಂದ ಮನೆಯಲ್ಲಿ ಹೆಚ್ಚು ಸೌಂಡ್ ಮಾಡಿದ್ದರು ತನಿಷಾ. ಹಾಗೆಯೇ ಟಾಸ್ಕ್ ಗಳಲ್ಲಿ ಕೂಡ ಉತ್ತಮವಾಗಿ ಪರ್ಫಾರ್ಮ್ ಮಾಡಿದ್ದರು. ಫಿನಾಲೆ ವರೆಗು ಬಿಗ್ ಬಾಸ್ ಮನೆಯಲ್ಲಿ ಪ್ರಯಾಣ ಮಾಡಿದ್ದರು.

ತನಿಷಾ ಮತ್ತು ಕಾರ್ತಿಕ್ ಫ್ರೆಂಡ್ಶಿಪ್ ಕೂಡ ಜನರಿಗೆ ತುಂಬಾ ಇಷ್ಟವಾಗಿತ್ತು. ಆದರೆ ಕೊನೆಯ ಹಂತದಲ್ಲಿ ಇವರ ಫ್ರೆಂಡ್ಶಿಪ್ ನಲ್ಲಿ ಬಿರುಕು ಮೂಡಿದ್ದು ಕೂಡ ನಿಜ, ಆದರೆ ತನಿಷಾ ಅವರು ಹೊರಬಂದಮೇಲೆ ಎಲ್ಲರೊಡನೆ ಚೆನ್ನಾಗಿಯೇ ಇದ್ದಾರೆ. ವರ್ತೂರ್ ಸಂತೋಷ್ ಅವರ ಮನೆಯ ಕಾರ್ಯಕ್ರಮಕ್ಕೆ ಹೋಗಿದ್ದರು, ಕಾರ್ತಿಕ್ ಅವರ ತಂಗಿ ಮಗುವನ್ನು ಭೇಟಿ ಮಾಡಿ ಬಂದಿದ್ದಾರೆ. ಹೀಗೆ ಬಿಗ್ ಬಾಸ್ ಬಳಿಕ ಬ್ಯುಸಿ ಆಗಿದ್ದಾರೆ ತನಿಷಾ.

ತನಿಷಾ ಹಾಗೂ ವರ್ತೂರ್ ಸಂತೋಷ್ ಅವರ ನಡುವೆ ಪ್ರೀತಿ ಇತ್ತು ಎನ್ನುವ ವಿಷಯ ವೈರಲ್ ಆಗಿತ್ತು, ಆದರೆ ಅದು ಸುಳ್ಳು ಎಂದು ತನಿಷಾ ಹೇಳಿದ್ದಾರೆ. ಅಸಲಿ ವಿಷಯ ಏನು ಎಂದರೆ, ಇದೇ ಫೀಲ್ಡ್ ನಲ್ಲಿದ್ದ ಒಬ್ಬ ನಟನ ಜೊತೆಗೆ ಲವ್ ನಲ್ಲಿದ್ದರಂತೆ ತನಿಷಾ. 1.5 ವರ್ಷ ಸ್ನೇಹ, 6 ವರ್ಷ ರಿಲೇಶನ್ಷಿಪ್ ಇತ್ತಂತೆ, ಬಳಿಕ ಬ್ರೇಕಪ್ ಆಯಿತಂತೆ. ಒಂದೇ ಫೀಲ್ಡ್ ಆಗಿದ್ದರಿಂದ ಅವರಿಗೆ ಎಲ್ಲಾ ಅರ್ಥ ಆಗುತ್ತೆ ಅಂದುಕೊಂಡಿದ್ರಂತೆ ತನಿಷಾ. ಆದರೆ ಆ ರೀತಿ ಆಗಿಲ್ಲ…

ತುಂಬಾ ಪ್ರೀತಿಸುತ್ತಿದ್ದ ತನಿಷಾ, ಅವರನ್ನು ಮದುವೆಯಾಗಿ ಮಗು ಪಡೆಯಬೇಕು ಅಂದುಕೊಂಡಿದ್ದರಂತೆ ಆದರೆ ಪ್ರತಿ ವಿಷಯಕ್ಕೂ ಬಾಯ್ ಫ್ರೆಂಡ್ ಗೆ ಕೇಳಬೇಕಿತ್ತಂತೆ. ಒಂದು ಕೆಲಸ ಒಪ್ಪಿಕೊಳ್ಳಬೇಕು ಅಂದ್ರೆ ತನಿಷಾ ಅವರು ಡೈರೆಕ್ಟರ್ ಪ್ರೊಡ್ಯುಸರ್ ಜೊತೆಗೆ ಮಾತಾನಾಡಿದ ನಂತರ ಅವರ ಬಾಯ್ ಫ್ರೆಂಡ್ ಬೇಡ ಎಂದು ಹೇಳುತ್ತಿದ್ದರಂತೆ. ಈ ರೀತಿ ಪ್ರತಿ ವಿಷಯಕ್ಕೆ ತನ್ನ ಮಾತೇ ನಡೆಯಬೇಕು ಎನ್ನುವಂತಿದ್ದ ಕಾರಣ, ತನಿಷಾ ಬ್ರೇಕಪ್ ಮಾಡಿಕೊಂಡಿದ್ದಾರೆ.

Leave A Reply

Your email address will not be published.