Tanisha Kuppanda: ಬಿಗ್ ಬಾಸ್ ಮನೆಯ ಬೆಂಕಿ ತನಿಷಾ ಕುಪ್ಪಂಡ ಇನ್ನು ಸಿಂಗಲ್ ಆಗಿದ್ದಾರಾ?

Written by Pooja Siddaraj

Published on:

Tanisha Kuppanda: ಬಿಗ್ ಬಾಸ್ ಮನೆಯಲ್ಲಿ ಬೆಂಕಿ ಎಂದೇ ಫೇಮಸ್ ಆಗಿರುವವರು ನಟಿ ತನಿಷಾ ಕುಪ್ಪಂಡ. ಕನ್ನಡ ಕಿರುತೆರೆಯಲ್ಲಿ ಮಂಗಳಗೌರಿ ಮದುವೆ ಧಾರವಾಹಿಯಲ್ಲಿ ರಾಜೀವನ ಅತ್ತಿಗೆಯ ಪಾತ್ರದಲ್ಲಿ ನಟಿಸಿದ್ದರು ತನಿಷಾ. ಇದು ಖಡಕ್ ವಿಲ್ಲನ್ ಪಾತ್ರ ಆಗಿತ್ತು. ಈ ಪಾತ್ರ ತನಿಷಾ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತು ಎಂದರೆ ತಪ್ಪಲ್ಲ. ಇದೀಗ ಇವರು ಬಿಗ್ ಬಾಸ್ ಮನೆಯಲ್ಲಿ ಶೈನ್ ಆಗುತ್ತಿದ್ದಾರೆ.

ಬಿಗ್ ಬಾಸ್ ಮನೆಗೆ ಬಂದ ಮೊದಲ ದಿನದಿಂದಲೂ ತನಿಷಾ ಅವರು ತಮ್ಮ ನೇರ ನಡೆ, ಖಡಕ್ ಮಾತುಗಳಿಂದಲೇ ಹೆಸರುವಾಸಿ ಆಗಿದ್ದಾರೆ. ವಿನಯ್ ಅವರಿಗೆ ಸರಿಯಾಗಿ ಠಕ್ಕರ್ ಕೊಡುವ ಸ್ಪರ್ಧಿ ತನಿಷಾ ಎಂದರೆ ತಪ್ಪಲ್ಲ. ಜೋರಾದ ಮಾತುಗಳಿಂದ ಮನೆಯಲ್ಲಿ ಹೆಚ್ಚು ಸೌಂಡ್ ಮಾಡಿದ್ದಾರೆ ತನಿಷಾ. ಹಾಗೆಯೇ ಟಾಸ್ಕ್ ಗಳಲ್ಲಿ ಕೂಡ ಉತ್ತಮವಾಗಿ ಪರ್ಫಾರ್ಮ್ ಮಾಡಿದ್ದಾರೆ. 7 ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಪ್ರಯಾಣ ಮಾಡಿದ್ದಾರೆ..

ತನಿಷಾ ಮತ್ತು ಕಾರ್ತಿಕ್ ಫ್ರೆಂಡ್ಶಿಪ್ ಕೂಡ ಜನರಿಗೆ ತುಂಬಾ ಇಷ್ಟವಾಗಿದೆ. ಎಷ್ಟೇ ಮನಸ್ತಾಪ,ಜಗಳಗಳು ಬೇರೆಯವರ ನಡುವೆ ಬಂದರು ಕೂಡ ತನಿಷಾ ಮತ್ತು ಕಾರ್ತಿಕ್ ಸ್ನೇಹದಲ್ಲಿ ಸ್ವಲ್ಪವೂ ಬಿರುಕು ಮೂಡಿಲ್ಲ. ಇಬ್ಬರು ಕೂಡ ಒಬ್ಬರನ್ನೊಬ್ಬರು ಬಿಟ್ಟುಕೊಡದೆ ಇದ್ದಾರೆ. ಇದರಿಂದಲೇ ತನಿಷಾ ಅವರು ಫ್ರೆಂಡ್ಶಿಪ್ ಇಂದ ಒಳ್ಳೆಯತನದಿಂದ ಎಲ್ಲರ ಗಮನ ಸೆಳೆದಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಕೂಡ ತನಿಷಾ ಅವರಿಗೆ ಒಳ್ಳೆಯ ಫ್ಯಾನ್ ಬೇಸ್ ಇದೆ. ತನಿಷಾ ಅವರ ಬಗ್ಗೆ ಹೇಳುವುದಾದರೆ ನಟಿ ಆಗಿರುವ ತನಿಷಾ ಅವರಿಗೆ ಈಗ 33 ವರ್ಷ ಹಾಗೆಯೇ ಇವರು ಇನ್ನು ಸಿಂಗಲ್ ಆಗಿದ್ದಾರೆ. ಬಿಗ್ ಬಾಸ್ ಮನೆಯೊಳಗೆ ಶೈನ್ ಆಗುತ್ತಿರುವ ತನಿಷಾ ಅವರು ಫಿನಾಲೆವರೆಗು ಬರಲಿ ಎನ್ನುವುದು ಎಲ್ಲಾ ಅಭಿಮಾನಿಗಳ ಆಸೆ ಆಗಿದೆ.

Leave a Comment