Thamannaah and Vijay Varma ಕಳೆದ ಕೆಲವು ದಿನಗಳಿಂದ ಮಿಲ್ಕಿ ಬ್ಯೂಟಿ, ನಟಿ ತಮನ್ನಾ ಭಾಟಿಯಾ(Thamannah Bhatia) ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಅಂದರೆ ನಟಿ ತಮ್ಮ ಯಾವುದೇ ಹೊಸ ಸಿನಿಮಾದ ವಿಚಾರವಾಗಿ ಸುದ್ದಿಯಾಗಿಲ್ಲ. ಬದಲಿದೆ ತಮನ್ನಾ ಭಾಟಿಯಾ (Thamannaah Bhatia), ನಟ ವಿಜಯ್ ವರ್ಮಾ (Vijay Varma) ಜೊತೆಗಿನ ಲಿಪ್ ಲಾಕ್ ವೀಡಿಯೋ ಕಾರಣದಿಂದ ಭರ್ಜರಿ ಸುದ್ದಿಯಾಗಿದ್ದಾರೆ. ಈ ವೀಡಿಯೋ ವೈರಲ್ ಆದ್ಮೇಲೆ ಇವರಿಬ್ಬರ ನಡುವೆ ಚಿಗುರೊಡೆದ ಪ್ರೇಮ ಕಥೆಯನ್ನು ತಿಳಿಯುವುದಕ್ಕೆ ಬಹಳಷ್ಟು ಜನರು ಕುತೂಹಲದಿಂದ ಕಾಯುತ್ತಿದ್ದಾರೆ. ಇದೆಲ್ಲಾ ಆಗಿದ್ದಾದ್ರು ಹೇಗೆ ಎಂದು ಅಭಿಮಾನಿಗಳು ಅಚ್ಚರಿ ಯನ್ನು ಪಡುವಂತಾಗಿದೆ.
ತುಳು ನಾಡಿನವರು ಹೆಣ್ಣಿಗೆ ಗೌರವ ಕೊಡ್ತಾರೆ: ಸಾನ್ಯಾ ಜೊತೆಗಿನ ಘಟನೆ ಬಗ್ಗೆ ರೂಪೇಶ್ ಶೆಟ್ಟಿ ಸ್ಪಷ್ಟನೆ

ನಟಿ ತಮನ್ನಾ ದಕ್ಷಿಣ ಸಿನಿಮಾಗಳು ಮಾತ್ರವೇ ಅಲ್ಲದೇ ಅತ್ತ ಬಾಲಿವುಡ್ ನಲ್ಲಿ(Bollywood) ಸಹಾ ಸಕ್ರಿಯವಾಗಿದ್ದಾರೆ. ಪ್ರಸ್ತುತ ನಟಿ ಲಸ್ಟ್ ಸ್ಟೋರೀಸ್ 2 (Lust Stories 2) ನಲ್ಲಿ ನಟಿಸುತ್ತಿದ್ದು, ಇದರಲ್ಲಿ ನಟ ವಿಜಯ್ ವರ್ಮಾ ಕೂಡಾ ನಟಿಸುತ್ತಿದ್ದಾರೆ. ತಮನ್ನಾ ಮತ್ತು ವಿಜಯ್ ವರ್ಮಾ ಮೊದಲ ಭೇಟಿ ಆಗಿದ್ದು ಸಹಾ ಇದೇ ವೆಬ್ ಸಿರೀಸ್ ನ ಶೂಟಿಂಗ್ ವೇಳೆ ಎನ್ನಲಾಗಿದೆ. ಶೂಟಿಂಗ್ ಸೆಟ್ ನಲ್ಲಿ ಆದ ಪರಿಚಯ ಸ್ನೇಹವಾಗಿದೆ. ಇಬ್ಬರೂ ತಮ್ಮ ಕೆಲಸದ ಬಗ್ಗೆ ಪರಸ್ಪರ ಮೆಚ್ಚುಗೆ ನೀಡಿದ್ದಾರೆ. ಹೀಗೆ ಬೆಳೆದ ಸ್ನೇಹ ದಿನ ಕಳೆದ ಹಾಗೆ ಪ್ರೀತಿಯಾಗಿ ಬದಲಾಗಿದೆ.
ತುಳು ನಾಡಿನವರು ಹೆಣ್ಣಿಗೆ ಗೌರವ ಕೊಡ್ತಾರೆ: ಸಾನ್ಯಾ ಜೊತೆಗಿನ ಘಟನೆ ಬಗ್ಗೆ ರೂಪೇಶ್ ಶೆಟ್ಟಿ ಸ್ಪಷ್ಟನೆ
ತಮನ್ನಾ ಮತ್ತು ವಿಜಯ್ ವರ್ಮಾ ಅವರ ನಡುವಿನ ಪ್ರೀತಿಯ ವಿಚಾರ ಕೇಳಿ ಅವರ ಅಭಿಮಾನಿಗಳು ಸಿಕ್ಕಾಪಟ್ಟೆ ಥ್ರಿಲ್ ಆಗಿದ್ದಾರೆ. ಇವರ ಈ ಪ್ರೀತಿಯ ವಿಚಾರ ಕೇಳಿದ ನಂತರ ಅಭಿಮಾನಿಗಳು ಇವರ ಮದುವೆ ಯಾವಾಗ? ಎನ್ನುವ ಪ್ರಶ್ನೆಗಳನ್ನು ಸಹಾ ಕೇಳಲು ಆರಂಭಿಸಿದೆ. ತಮನ್ನಾ ಮತ್ತು ವಿಜಯ ವರ್ಮಾ ಇಬ್ಬರೂ ಹೊಸ ವರ್ಷವನ್ನು ಸಂಭ್ರಮಿಸಲು ಗೋವಾಕ್ಕೆ(Goa) ತೆರಳಿದ್ದರು. ಈ ವೇಳೆ ಈ ಜೋಡಿ ಸಂಭ್ರಮದ ನಡುವೆ ತುಟಿಗೆ ತುಟಿ ಒತ್ತಿ ಚುಂಬಿಸಿದ್ದರು. ಆ ದೃಶ್ಯದ ವೀಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು.