Latest Breaking News

Tirumala Tirupati Temple ಈ ಕಾರಣಕ್ಕಾಗಿ 8 ತಿಂಗಳ ಕಾಲ ಮುಚ್ಚಲಿದೆ ತಿರುಪತಿ ತಿಮ್ಮಪ್ಪನ ದೇಗುಲದ ಗರ್ಭಗುಡಿ ಬಾಗಿಲು

0 6,798

Get real time updates directly on you device, subscribe now.

Tirumala Tirupati Temple ತಿರುಮಲ ತಿರುಪತಿ ಶ್ರೀ ವೆಂಕಟೇಶ್ವರನ (Tirumala Tirupati Temple) ದೇಗುಲ ದೇಶದ ಪ್ರಸಿದ್ಧ ದೇಗುಲಗಳಲ್ಲಿ ಒಂದಾಗಿದೆ. ತಿರುಮಲ ಗಿರಿಯಲ್ಲಿ ನೆಲೆಸಿರುವ ಶ್ರೀ ವೆಂಕಟೇಶ್ವರ ಸ್ವಾಮಿಯನ್ನು ಕಲಿಯುಗ ಪ್ರತ್ಯಕ್ಷ ದೈವವೆಂದೇ ಕರೆಯಲಾಗಿದೆ. ಪ್ರತಿ ದಿನವೂ ಈ ಪುಣ್ಯ ಕ್ಷೇತ್ರಕ್ಕೆ ಸಹಸ್ರಾರು ಜನ ಭಕ್ತಾದಿಗಳು ಸ್ವಾಮಿಯ ದರ್ಶನವನ್ನು ಮಾಡಲು ಬರುತ್ತಾರೆ. ತಿರುಮಲ ತಿರುಪತಿಯು ಪ್ರತಿದಿನವೂ ಸಹಾ ಭಕ್ತರಿಂದ ತುಂಬಿರುತ್ತದೆ, ಈ ಪುಣ್ಯಧಾಮದ ನಾಲ್ಕು ದಿಕ್ಕುಗಳಲ್ಲೂ ಸಹಾ ಶ್ರೀ ವೆ‌ಂಕಟೇಶ್ವರನ ಹೆಸರು ಮಾರ್ದನಿಸುತ್ತಲೇ ಇರುತ್ತದೆ. ಈ ಪುಣ್ಯಕ್ಷೇತ್ರದ ಕುರಿತಾಗಿ ಹೊಸದೊಂದು ಸುದ್ದಿ ಹೊರ ಬಂದಿದೆ.

Tirumala Tirupati Temple

Meena Rashi Bhavishya 2023 :ಮೀನ ರಾಶಿಯವರಿಗೆ 2023 ವರ್ಷ ಹೇಗಿರುತ್ತದೆ?

ಈಗ ಬಂದಿರುವ ಹೊಸ ಸುದ್ದಿಗಳ ಪ್ರಕಾರ ತಿರಮಲದ ಶ್ರೀ ವೆಂಕಟೇಶ್ವರ ನ ದೇಗುಲದ ಮುಖ್ಯ ಗರ್ಭಗುಡಿಯ(Sanctum) ಬಾಗಿಲನ್ನು ಸುಮಾರು ಆರರಿಂದ ಎಂಟು ತಿಂಗಳ ಕಾಲ ಮುಚ್ಚಲಾಗುವುದು ಎನ್ನಲಾಗಿದೆ. ಹೌದು, ಗರ್ಭಗುಡಿಯ ಮೇಲೆ ಇರುವ ವಿಮಾನ ಗೋಪುರ ಆನಂದ ನಿಲಯದ ಮೇಲೆ ಹೊದಿಸಲಾಗಿರುವ ಚಿನ್ನದ ಲೇಪನವನ್ನು (gold plating) ಬದಲಾಯಿಸಲು ತಿರುಮತ ತಿರುಪತಿ ದೇವಸ್ಥಾನಂ ಆಡಳಿತ ಮಂಡಳಿಯು ನಿರ್ಧಾರವನ್ನು ಮಾಡಿದೆ. ಅಲ್ಲದೇ ಈ ವೇಳೆಯಲ್ಲಿ ಶ್ರೀ ವೆಂಕಟೇಶ್ವರನ ತದ್ರೂಪಿ ಮೂರ್ತಿಯನ್ನು ದೇಗುಲದ ಪಕ್ಕದಲ್ಲಿ ಪ್ರತಿಷ್ಟಾಪನೆ‌ ಮಾಡಲಾಗುವುದು‌.

Tirumala Tirupati Temple

Meena Rashi Bhavishya 2023 :ಮೀನ ರಾಶಿಯವರಿಗೆ 2023 ವರ್ಷ ಹೇಗಿರುತ್ತದೆ?

ಭಕ್ತರು ಈ ತದ್ರೂಪಿ ಮೂರ್ತಿಯನ್ನು ದರ್ಶನ ಮಾಡಲು ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎನ್ನಲಾಗಿದೆ. 2023 ರ ಆರಂಭದಲ್ಲೇ ಆನಂದ ನಿಲಯಕ್ಕೆ ಚಿನ್ನದ ಹೊದಿಕೆ ಲೇಪನ ಮಾಡುವ ಕಾರ್ಯ ಆರಂಭವಾಗಲಿದ್ದು ಇದಕ್ಕೆ ಕನಿಷ್ಠ ಆರು ತಿಂಗಳು ಹಿಡಿಯುವುದು ಎಂದು ಟಿಟಿಡಿ ಅಧ್ಯಕ್ಷರಾದ ವೈ ವಿ ಸುಬ್ಬಾರಾವ್ ಅವರು ತಿಳಿಸಿದ್ದಾರೆ. ಡಿಸೆಂಬರ್ ಮೊದಲ ವಾರದಲ್ಲಿ ನಡೆದ ಸಭೆಯಲ್ಲಿ ಆಗಮ ಶಾಸ್ತ್ರದ ಸಲಹೆಗಾರರು, ಪುರೋಹಿತರು, ಸಿವಿಲ್ ಇಂಜಿನಿಯರ್ ಗಳು ಮತ್ತು ತಜ್ಞರೊಡನೆ ಸುದೀರ್ಘ ಚರ್ಚೆಯನ್ನು ನಡೆಸಿ ತೀರ್ಮಾನ ಮಾಡಲಾಗಿದೆ ಎನ್ನಲಾಗಿದೆ‌.

Get real time updates directly on you device, subscribe now.

Leave a comment