Trisha: ಈಗಲೂ 18ರ ಹರೆಯದ ಹುಡುಗಿಯ ಕಾಣುವ ತ್ರಿಷಾ ಅವರು ಈ ಒಂದು ಕೆಲಸ ಮಾಡೋದಿಲ್ಲ, ಅದೇ ಅವರ ಬ್ಯೂಟಿ ಸೀಕ್ರೆಟ್!

0 16

Trisha: ಸೌತ್ ಇಂಡಿಯನ್ ಸಿನಿಮಾ ರಂಗದ ಕಲಾವಿದೆಯರು ಈಗ ಯಾವುದೇ ಬಾಲಿವುಡ್ ನಟಿಯರಿಗೂ ಕಡಿಮೆ ಇಲ್ಲ ಎನ್ನುವ ಹಂತಕ್ಕೆ ಬೆಳೆಯುತ್ತಿದ್ದಾರೆ. ಈಗ ಬಾಲಿವುಡ್ ನಟಿಯರಿಗಿಂತ ಸೌಟಿ ನಟಿಯರನ್ನೇ ಅಭಿಮಾನಿಗಳು ಕೂಡ ಇಷ್ಟಪಡುತ್ತಿದ್ದಾರೆ. ನಮ್ಮ ಸೌತ್ ಇಂಡಿಯಾದ ಟಾಪ್ ನಟಿಯರಾಗಿ ಹೆಸರು ಪಡೆದಿರುವವರು ನಟಿ ತ್ರಿಷಾ ಮತ್ತು ನಟಿ ನಯನತಾರ. ಲೇಡಿ ಸೂಪರ್ ಸ್ಟಾರ್ ಎಂದೇ ಹೆಸರು ಮಾಡಿರುವ ನಟಿ ನಯನತಾರ ಅವರನ್ನೇ ಈಗ ತ್ರಿಷಾ ಅವರು ಹಿಂದಿಕ್ಕಿದ್ದಾರೆ.

ನಟಿ ತ್ರಿಷಾ ಅವರ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ., ಇವರು 20 ವರ್ಷಕ್ಕಿಂತ ಹೆಚ್ಚಿನ ಸಮಯದಿಂದ ಬಣ್ಣದ ಲೋಕದಲ್ಲಿದ್ದಾರೆ. ತ್ರಿಷಾ ಅವರು ತಮಿಳು ಮತ್ತು ತೆಲುಗು ಭಾಷೆಯಲ್ಲಿ ಹೆಚ್ಚಾಗಿ ನಟಿಸುತ್ತಿದ್ದರು ಕೂಡ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರೊಡನೆ ಪವರ್ ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿದ್ದರು. ತ್ರಿಷಾ ಅವರಿಗೆ ವಯಸ್ಸು 40 ದಾಟಿದೆ, ಆದರೆ ಇಂದಿಗೂ ಅವರಿಗೆ ಇರುವ ಬೇಡಿಕೆ ಮಾತ್ರ ಕಡಿಮೆ ಆಗಿಲ್ಲ.

ಈಗಲೂ ಸಾಕಷ್ಟು ಒಳ್ಳೆಯ ಸಿನಿಮಾಗಳು ತ್ರಿಷಾ ಅವರನ್ನು ಅರಸಿ ಬರುತ್ತಿದೆ. ಖ್ಯಾತ ನಿರ್ದೇಶಕ ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್ ಸಿನಿಮಾದಲ್ಲಿ ತ್ರಿಷಾ ಅವರು ಕುಂದವೈ ಪಾತ್ರದಲ್ಲಿ ನಟಿಸಿ ಎಲ್ಲರ ಗಮನ ಸೆಳೆದಿದ್ದರು. ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿತ್ತು. ಈಗಲೂ ಇಷ್ಟು ಯಂಗ್ ಆಗಿ ಕಾಣುವುದಕ್ಕೆ ತ್ರಿಶಾ ಅವರ ಆಹಾರ ಪದ್ಧತಿ ಮತ್ತು ವ್ಯಾಯಾಮ ಮುಖ್ಯ ಕಾರಣ ಅಂತೆ.

ತ್ರಿಷಾ ಅವರು ಯಾವುದೇ ಕಾರಣಕ್ಕೂ ಎಣ್ಣೆಯುಲ್ಲಿ ಕರಿದ ಪದಾರ್ಥಗಳನ್ನು ತಿನ್ನುವುದಿಲ್ಲ, ಹಾಗೆಯೇ ಫಾಸ್ಟ್ ಫುಡ್ ತಿನ್ನುವುದಿಲ್ಲ. ಫ್ಯಾಟ್ ಇರುವ ಆಹಾರವನ್ನು ತಿನ್ನುವುದಿಲ್ಲ. ಪ್ರತಿದಿನ ಬೆಳಗ್ಗೆ ಎದ್ದಾಗ ಶುಂಠಿ ನೀರು, ಜೀರಿಗೆ ನೀರು ಅಥವಾ ಗ್ರೀನ್ ಟೀ ಕುಡಿಯುತ್ತಾರಂತೆ. ವಿಟಮಿನ್ ಸಿ ಅಂಶ ಜಾಸ್ತಿ ಇರುವ ಹಣ್ಣುಗಳನ್ನು ಸೇವಿಸುತ್ತಾರೆ. ಈ ಕಾರಣಗಳಿಂದ ಈಗಲೂ ತುಂಬಾ ಯಂಗ್ ಆಗಿದ್ದಾರೆ ಎನ್ನಲಾಗುತ್ತದೆ.

Leave A Reply

Your email address will not be published.