Trisha Krishnan: ವಯಸ್ಸು 40 ದಾಟಿದ್ದರು ನಟಿ ತ್ರಿಷಾ ಅವರು ಮದುವೆ ಆಗದೆ ಇರೋದಕ್ಕೆ ಕಾರಣ ಇದೇ ಅಂತೆ!

0 16

Trisha Krishnan: ಸೌತ್ ಇಂಡಿಯನ್ ಸಿನಿಮಾ ರಂಗದ ಕಲಾವಿದೆಯರು ಈಗ ಯಾವುದೇ ಬಾಲಿವುಡ್ ನಟಿಯರಿಗೂ ಕಡಿಮೆ ಇಲ್ಲ ಎನ್ನುವ ಹಂತಕ್ಕೆ ಬೆಳೆಯುತ್ತಿದ್ದಾರೆ. ಈಗ ಬಾಲಿವುಡ್ ನಟಿಯರಿಗಿಂತ ಸೌಟಿ ನಟಿಯರನ್ನೇ ಅಭಿಮಾನಿಗಳು ಕೂಡ ಇಷ್ಟಪಡುತ್ತಿದ್ದಾರೆ. ನಮ್ಮ ಸೌತ್ ಇಂಡಿಯಾದ ಟಾಪ್ ನಟಿಯರಾಗಿ ಹೆಸರು ಪಡೆದಿರುವವರು ನಟಿ ತ್ರಿಷಾ ಮತ್ತು ನಟಿ ನಯನತಾರ. ಲೇಡಿ ಸೂಪರ್ ಸ್ಟಾರ್ ಎಂದೇ ಹೆಸರು ಮಾಡಿರುವ ನಟಿ ನಯನತಾರ ಅವರನ್ನೇ ಈಗ ತ್ರಿಷಾ ಅವರು ಹಿಂದಿಕ್ಕಿದ್ದಾರೆ.

ನಟಿ ತ್ರಿಷಾ ಅವರ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ., ಇವರು 20 ವರ್ಷಕ್ಕಿಂತ ಹೆಚ್ಚಿನ ಸಮಯದಿಂದ ಬಣ್ಣದ ಲೋಕದಲ್ಲಿದ್ದಾರೆ. ತ್ರಿಷಾ ಅವರು ತಮಿಳು ಮತ್ತು ತೆಲುಗು ಭಾಷೆಯಲ್ಲಿ ಹೆಚ್ಚಾಗಿ ನಟಿಸುತ್ತಿದ್ದರು ಕೂಡ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರೊಡನೆ ಪವರ್ ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿದ್ದರು. ತ್ರಿಷಾ ಅವರಿಗೆ ವಯಸ್ಸು 40 ದಾಟಿದೆ, ಆದರೆ ಇಂದಿಗೂ ಅವರಿಗೆ ಇರುವ ಬೇಡಿಕೆ ಮಾತ್ರ ಕಡಿಮೆ ಆಗಿಲ್ಲ.

ಈಗಲೂ ಸಾಕಷ್ಟು ಒಳ್ಳೆಯ ಸಿನಿಮಾಗಳು ತ್ರಿಷಾ ಅವರನ್ನು ಅರಸಿ ಬರುತ್ತಿದೆ. ಖ್ಯಾತ ನಿರ್ದೇಶಕ ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್ ಸಿನಿಮಾದಲ್ಲಿ ತ್ರಿಷಾ ಅವರು ಕುಂದವೈ ಪಾತ್ರದಲ್ಲಿ ನಟಿಸಿ ಎಲ್ಲರ ಗಮನ ಸೆಳೆದಿದ್ದರು. ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿತ್ತು. ಈಗಲೂ ಇಷ್ಟು ಯಂಗ್ ಆಗಿ ಕಾಣುವುದಕ್ಕೆ ತ್ರಿಶಾ ಅವರ ಆಹಾರ ಪದ್ಧತಿ ಮತ್ತು ವ್ಯಾಯಾಮ ಮುಖ್ಯ ಕಾರಣ ಅಂತೆ.

ಹಾಗೆಯೇ ತ್ರಿಷಾ ಅವರಿಗೆ ವಯಸ್ಸು 40 ದಾಟಿದ್ದರು ಇನ್ನು ಕೂಡ ಅವರು ಮದುವೆಯಾಗಿಲ್ಲ. ಅದಕ್ಕೆ ಅಸಲಿ ಕಾರಣ ಏನು ಗೊತ್ತಾ? ಹಳೆಯ ಸಂದರ್ಶನ ಒಂದರಲ್ಲಿ ಖುದ್ದು ತ್ರಿಷಾ ಅವರೇ ಈ ಬಗ್ಗೆ ಹೇಳಿದ್ದರು. “ವೃತ್ತಿಯ ವಿಚಾರಕ್ಕೆ ಮದುವೆ ನಂತರ ವಿಚ್ಛೇದನ ಪಡೆಯೋಕೆ ಇಷ್ಟವಿಲ್ಲ. ದಾಂಪತ್ಯ ಜೀವನದಲ್ಲಿ ಖುಷಿಯಿಲ್ಲ ಎಂದರೆ ಮದುವೆ ಯಾಕೆ ಆಗಬೇಕು..? ಮದುವೆ ಆಗಬೇಕು ಎಂದು ಎನ್ನಿಸುವಂಥ ವ್ಯಕ್ತಿಯನ್ನು ನಾನು ಇನ್ನು ಭೇಟಿ ಮಾಡಿಲ್ಲ..” ಎಂದು ತಾವು ಇನ್ನು ಸಿಂಗಲ್ ಆಗಿರುವುದಕ್ಕೆ ಕಾರಣ ಏನು ಎಂದು ತಿಳಿಸಿದ್ದರು ನಟಿ ತ್ರಿಷಾ.

Leave A Reply

Your email address will not be published.