Tukali Santhosh: ಬಿಗ್ ಬಾಸ್ ಗೆ ಹೋಗುವ ವೇಳೆ ಶುರುವಾಗಿತ್ತು ಖಾಯಿಲೆ! ತುಕಾಲಿ ಸಂತೋಷ್ ಅವರಿಗೆ ಏನಾಗಿದೆ ಗೊತ್ತಾ?

0 21

Tukali Santhosh: ಬಿಗ್ ಬಾಸ್ ಶೋ ಮೂಲಕ ಫೇಮಸ್ ಆದವರಲ್ಲಿ ತುಕಾಲಿ ಸಂತೋಷ್ ಕೂಡ ಒಬ್ಬರು. ಬಿಗ್ ಬಾಸ್ ಗಿಂತ ಮೊದಲು ಕೆಲವು ಕಾಮಿಡಿ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದರು. ಆದರೆ ಇವರಿಯೇ ಹೆಚ್ಚು ಹೆಸರು ಬಂದಿದ್ದು, ಬಿಗ್ ಬಾಸ್ ಶೋ ಮೂಲಕ. ಬಿಗ್ ಬಾಸ್ ಮನೆಯಲ್ಲಿ ಕಾಮಿಡಿಗೆ ಹೆಚ್ಚು ಹೆಸರುವಾಸಿ ಆಗಿದ್ದರು, ಜೊತೆಗೆ ವರ್ತೂರ್ ಸಂತೋಷ್ ಅವರ ಜೊತೆಗಿನ ಸ್ನೇಹ ಎಲ್ಲರ ಗಮನ ಸೆಳೆದಿತ್ತು..

ತುಕಾಲಿ ಸಂತೋಷ್ ಹಾಗೂ ವರ್ತೂರ್ ಸಂತೋಷ್ ಸ್ನೇಹಕ್ಕೆ ದೊಡ್ಡ ಅಭಿಮಾನಿ ಬಳಗ ಇತ್ತು. ತುಕಾಲಿ ಮತ್ತು ವರ್ತೂರ್ ಇಬ್ಬರು ಸಹ ಬೀನ್ ಬ್ಯಾಗ್ ನಲ್ಲಿ ಕೂತು ಮಾತನಾಡುತ್ತಾ ಇದ್ದದ್ದು ವೀಕ್ಷಕರಿಗೆ ಮನರಂಜನೆ ನೀಡಿತ್ತು. ಇಬ್ಬರು ಜೊತೆಯಾಗಿಯೇ ಫಿನಾಲೆವರೆಗು ಬಂದಿದ್ದರು. ಬಳಿಕ 6ನೇ ಸ್ಥಾನಕ್ಕೆ ತುಕಾಲಿ ಸಂತೋಷ್, 5ನೇ ಸ್ಥಾನಕ್ಕೆ ವರ್ತುರ್ ಸಂತೋಷ್ ಎಲಿಮಿನೇಟ್ ಆದರು..

ಇವರಿಬ್ಬರ ಸ್ನೇಹ ಬಿಗ್ ಬಾಸ್ ಮನೆಯಿಂದ ಹೊರಬಂದಮೇಲು ಅದೇ ರೀತಿ ಮುಂದುವರೆದಿದೆ. ಇನ್ನು ತುಕಾಲಿ ಸಂತೋಷ್ ಅವರು ಹೊರಬಂದಮೇಲೆ ರಿಯಾಲಿಟಿ ಶೋ, ಸಿನಿಮಾ ಎಂದು ಬ್ಯುಸಿ ಆಗಿದ್ದಾರೆ. ಜೊತೆಗೆ ಇಂಟರ್ವ್ಯೂಗಳಲ್ಲಿ ಕೂಡ ಪಾಲ್ಗೊಳ್ಳುತ್ತಿದ್ದಾರೆ. ಇತ್ತೀಚೆಗೆ ಒಂದು ಇಂಟರ್ವ್ಯೂ ನಲ್ಲಿ ಬಿಗ್ ಬಾಸ್ ಗೆ ಹೋಗುವಾಗ ತಮಗೆ ಆ ಖಾಯಿಲೆ ಇದ್ದಿದ್ದು ಗೊತ್ತಾಗಿದ್ದು ಎಂದು ಹೇಳಿದ್ದಾರೆ. ತುಕಾಲಿ ಅವರಿಗೆ ನಿಜಕ್ಕೂ ಏನಾಗಿದೆ ಗೊತ್ತಾ?

ತುಕಾಲಿ ಸಂತೋಷ್ ಅವರು ಹೇಳಿರುವ ಪ್ರಕಾರ, ಬಿಗ್ ಬಾಸ್ ಗೆ ಹೋಗುವಾಗ ಮೆಡಿಕಲ್ ಚೆಕಪ್ ಮಾಡಿಸಿದಾಗ ಅವರಿಗೆ ಶುಗರ್ ಇರುವ ವಿಚಾರ ಗೊತ್ತಾಗಿದ್ದು, ಅದುವರೆಗೂ ಗೊತ್ತಿರಲಿಲ್ಲ ಎಂದು ಹೇಳಿದ್ದಾರೆ. ಬಿಗ್ ಬಾಸ್ ಮನೆಯೊಳಗೆ ಸಮಯಕ್ಕೆ ಸರಿಯಾಗಿ ಮೆಡಿಸಬ್ ಕೊಡ್ತಿದ್ರು ನನ್ನ ಹೆಂಡತಿ ಕೂಡ ಅಷ್ಟು ಚೆನ್ನಾಗಿ ಟೈಮ್ ಗೆ ಸರಿಯಾಗಿ ಕೊಡುತ್ತಿರಲಿಲ್ಲ ಎಂದು ಹೇಳಿದ್ದಾರೆ. ಶುಗರ್ ಇದೆ ಅಂತ ಗೊತ್ತಾದಾಗ ಸ್ವಲ್ಪ ಗೊಂದಲದಲ್ಲೇ ಬಿಗ್ ಬಾಸ್ ಗೆ ಹೋಗಬೇಕು ಎಂದು ಡಾಕ್ಟರ್ ಗೆ ಕೇಳಿದ್ದರಂತೆ.

ಆಗ ಡಾಕ್ಟರ್ ಈಗ ಶುಗರ್ ಎಲ್ಲರಿಗೂ ಇರುತ್ತದೆ, ಹೋಗಿ ಎಂದು ಹೇಳಿದ್ದರಂತೆ. ಆಗ ದೈರ್ಯದಿಂದ ಬಿಗ್ ಬಾಸ್ ಮನೆಗೆ ಹೋಗಿದ್ದಾರೆ ತುಕಾಲಿ ಸಂತೋಷ್. ಈ ವಿಷಯವನ್ನು ಇತ್ತೀಚೆಗೆ ಒಂದು ಇಂಟರ್ವ್ಯೂನಲ್ಲಿ ಹೇಳಿಕೊಂಡಿದ್ದಾರೆ.

Leave A Reply

Your email address will not be published.