ಬಸುರಿಯಾಗಿದ್ದಾಗಲೇ ನಟಿ ಉಮಾಶ್ರೀಗೆ ಕೈ ಕೊಟ್ಟ ಗಂಡ -ಮಕ್ಕಳಿಗಾಗಿ ಮತ್ತೆ ಮದುವೆಯಾಗದ ನಟಿ!

0
3139

Umashree ಈ ಕಥೆ ಖ್ಯಾತ ನಟಿ ಉಮಾಶ್ರೀಗೆ ಸಂಬಂಧಪಟ್ಟಿದ್ದು. ಉಮಾಶ್ರೀ ಅವರು 350ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆಯನ್ನು ಮಾಡಿದ್ದಾರೆ. 31 ವರ್ಷಕ್ಕೂ ಹೆಚ್ಚು ಕಾಲ ರಂಗ ಭೂಮಿಯಲ್ಲಿ ಕೆಲಸ ಮಾಡಿದ್ದಾರೆ.6 ರಾಜ್ಯ ಪ್ರಶಸ್ತಿ, ಗುಲಾಬಿ ಟಾಕೀಸ್ ಚಿತ್ರಕ್ಕೆ ರಜತ ಪ್ರಶಸ್ತಿ ಕೂಡ ಬಂದಿದೆ.ಶಾಸಕರು, ಸಚಿವರು ಮತ್ತು ಸಿನಿಮಾ ರಂಗದಲ್ಲಿ ಬಹು ದೊಡ್ಡ ಹೆಸರನ್ನು ಮಾಡಿದ್ದಾರೆ. ತನ್ನ ಮಕ್ಕಳನ್ನು ಅದ್ಬುತವಾಗಿ ಸಾಕುತ್ತಿದ್ದಾರೆ. ಅದರೆ ಉಮಾಶ್ರೀ ಅವರ ಬದುಕು ಹೂವಿನ ಹಾಸಿಗೆ ಆಗಿರಲಿಲ್ಲ. ಅವರ ಬದುಕು ಕಲ್ಲು ಮುಳ್ಳಿನ ಹಾದಿಯಾಗಿತ್ತು. ಅವರು ಬದುಕನ್ನು ಜಯಿಸಿದ್ದು ಮತ್ತು ಬದುಕನ್ನು ಕಟ್ಟಿಕೊಂಡಿದ್ದು ಅದ್ಬುತವಾದ ಸ್ಟೋರಿ ಸ್ನೇಹಿತರೆ. ಇದರಿಂದ ಪ್ರತಿಯೊಬ್ಬರೂ ತಿಳಿದುಕೊಳ್ಳುವುದು ತುಂಬಾ ಇದೆ.

ಹಿರಿಯ ನಟಿ ಶಾಂತಮ್ಮ:ಮುಖ ನೋಡೋಕು ಮಕ್ಕಳು ಬರಲಿಲ್ಲ ಡ್ರೈವರ್ ನಿಂದ ಅಂತ್ಯಕ್ರಿಯೆ

ಜೀವನ: ಉಮಾಶ್ರೀ Umashree ಅವರು ಮೇ ೧೦, ೧೯೫೭ರಂದು ತುಮಕೂರು ಜಿಲ್ಲೆಯ ನೊಣವಿನಕೆರೆ ಗ್ರಾಮದಲ್ಲಿ ಜನಿಸಿದರು. ಅವರ ಜೀವನ ಬಡತನದ ಬವಣೆಯಲ್ಲಿ ಮೂಡಿ ಬಂದದ್ದು.ಚಿಕ್ಕ ವಯಸ್ಸಿನಲ್ಲಿ ತಂದೆ ತಾಯಿ ತೀರಿ ಹೋಗುತ್ತಾರೆ. ನಂತರ ದೊಡ್ಡಮ್ಮನ ಜೊತೆಯಲ್ಲಿ ಬೆಂಗಳೂರಿಗೆ ಬರುತ್ತಾರೆ. ಕೆಲವು ದಿನಗಳ ನಂತರ ಅವರು ತೆಗೆದುಕೊಂಡ ತಪ್ಪು ನಿರ್ಧಾರಗಳಿಂದ ಅವರು ಇಟ್ಟ ತಪ್ಪು ಹೆಜ್ಜೆಗಳಿಂದ. ಕಾಲೇಜ್ ಗೆ ಅಂತ ಮಹಾರಾಣಿ ಕಾಲೇಜ್ ಗೆ ಸೇರುತ್ತಾರೆ. ಕಲಾವಿಭಾಗದಲ್ಲಿ ಓದಿನಲ್ಲಿ ಮುಂದುಕೂಡ ಇರುತ್ತಾರೆ. ಅದರೆ ಅವರ ಗೆಳತಿಯರಿಗೆ ಎಲ್ಲರಿಗೂ ಓರ್ವ ಗೆಳೆಯರು ಇರುತ್ತಾರೆ. ಹೀಗಾಗಿ ಉಮಾಶ್ರೀ ಅವರಿಗೂ ಕೂಡ ಆಕರ್ಷಣೆ ಆಗಿ ನನಗು ಒಬ್ಬ ಗೆಳೆಯ ಬೇಕು ಎನ್ನುವ ರೀತಿಯಲ್ಲಿ ಅವರಿಗೂ ಅನಿಸುತ್ತಾ ಇರುತ್ತದೇ.ಉಮಾಶ್ರೀ ಸ್ನೇಹಿತೆ ಮನೆಗೆ ಹೋದಾಗ ಒಬ್ಬ ಯುವಕನ ಮೇಲೆ ಅಕರ್ಷಿತರಾಗಿ ಅವನನ್ನೇ ಮದುವೆ ಕೂಡ ಆಗುತ್ತಾರೇ.

ಗಂಡನದ್ದು ಕೂಡು ಕುಟುಂಬ. ಗಂಡನಿಗೆ ಯಾವುದೇ ರೀತಿಯಲ್ಲಿ ದುಡಿಮೆ ಇರಲಿಲ್ಲ. ಅವನು ಪ್ರತಿದಿನ ಕುಡಿದು ಹಿಂಸೆ ಮಾಡುತ್ತಿದ್ದ. ಉಮಾಶ್ರೀ ಎಲ್ಲರಿಗೂ ಅಡುಗೆ ಮಾಡಿ ಬೇಯಿಸುವುದೇ ಕೆಲಸ ಆಗಿತ್ತಂತೆ.ನಂತರ ಒಂದು ಹೆಣ್ಣು ಮಗು ಆಗುತ್ತದೆ. ಒಂದು ದಿನ ಉಮಾಶ್ರೀ ದೊಡ್ಡಮ್ಮನಿಗೆ ಹುಷಾರ್ ಇರಲಿಲ್ಲ ಹಾಗಾಗಿ ಉಮಾಶ್ರೀ ಅವರು ತವರು ಮನೆಗೆ ಹೋಗುವ ಸಂದರ್ಭ ಬರುತ್ತದೆ. ಈ ಸಮಯದಲ್ಲಿ ಉಮಾಶ್ರೀ ಗಂಡ ವಿರೋಧ ವ್ಯಕ್ತಪಡಿಸಿದ್ದಾರೂ. ಆದರೂ ಉಮಾಶ್ರೀ ಹೋಗಿದ್ದಾರೆ ಇಬ್ಬರ ನಡುವೆ ಬಿರುಕು ಎದುರು ಆಗುತ್ತದೆ. ನಂತರ ಗಂಡನ ಮನೆಗೆ ಬಂದಾಗ ಮನೆಗೆ ಸೇರಿಸುವುದೇ ಇಲ್ಲವಂತೆ.

ನಂತರ ಗಂಡನನ್ನು ಕರೆದುಕೊಂಡು ಬಂದು ಹೇಗೋ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಾರೆ.ನಂತರ ಗಂಡನ ಕುಡಿತದ ಚಟ ಜಾಸ್ತಿ ಯಾಗುತ್ತದೆ.ಆಗ ಉಮಾಶ್ರೀ ಅವರಿಗೆ 17 ರಿಂದ 18 ವರ್ಷ. ಪ್ರತಿದಿನ ಹೀಗೆ ಹಿಂಸೆ ಕೊಡುವುದು ಅಲ್ಲದೆ ಇನ್ನೊಂದು ಮದುವೆ ಆಗಿ ಬಂದರಂತೆ. ಉಮಾಶ್ರೀಗೆ ಗಂಡನ ಜೊತೆ ಗಂಡನ ಹೆಂಡತಿಯನ್ನು ನೋಡಿಕೊಳ್ಳುವ ಪರಿಸ್ಥಿತಿ ಎದುರು ಆಗುತ್ತದೆ. ಆಗ ಮಗಳು ಇರುತ್ತಾಳೆ ಮತ್ತು ಇದೆ ಸಮಯದಲ್ಲಿ ಉಮಾಶ್ರೀ ಅವರು ಮತ್ತೆ ಬಸುರಿ ಆಗುತ್ತಾರೆ. ಒಂದು ದಿನ ಗಂಡ ಉಮಾಶ್ರೀ ಅವರನ್ನು ತಳ್ಳಿಯೇ ಬಿಡುತ್ತಾರೆ.

ಆಗ ತಾಯಿ ಮನೆಗೆ ಬಂದಾಗ ಅಕ್ಕಪಕ್ಕದವರು ಗಂಡನನ್ನು ಬಿಟ್ಟು ಬಂದವಳು ಎಂದು ಚುಚ್ಚು ಮಾತನಾಡುತ್ತಿದ್ದರು. ತಾಯಿ ಮನೆಗೆ ಇರುವುದಕ್ಕೆ ಆಗದೆ ಇರುವ ಹಾಗೆ ಪರಿಸ್ಥಿತಿ ಎದುರು ಆಗುತ್ತದೆ. ಒಂದು ದಿನ ಇಡ್ಲಿ ಬಿಸಿನೆಸ್ ಮಾಡುವುದಕ್ಕೆ ಶುರು ಮಾಡುತ್ತಾರೆ ಉಮಾಶ್ರೀ ಅವರು. ಹೀಗೆ ಸಣ್ಣ ಪುಟ್ಟ ಕೆಲಸ ಮಾಡುತ್ತ ಇರುತ್ತಾರೆ. ಒಂದು ದಿನ ನಾಟಕ ಮುಂದೆ ಕುಳಿತುಕೊಳ್ಳುತ್ತಾರೆ.

Darshan Thoogudeepa :ಹೊಸ ಪೇಟೆಯಲ್ಲಿ ದರ್ಶನ್ ಗೆ ಆಗಿದ್ದೇನು ?ನಟ ದರ್ಶನ್ ಏನಂದ್ರು ?

ಅಲ್ಲಿ ಒರ್ವ ವ್ಯಕ್ತಿ ಬರುತ್ತಾನೆ ಮತ್ತು ನಾಟಕದ ಬಗ್ಗೆ ಹೇಳುತ್ತಾನೆ. ದುಡಿಮೆಗೆ ಏನಾದರು ಮಾಡಬೇಕು ಎಂದು ನಾಟಕ ಮಾಡಲು ಶುರು ಮಾಡುತ್ತಾರೆ.2 ಮಕ್ಕಳು ಕಟ್ಟಿಕೊಂಡು ಊರು ಊರು ಸುತ್ತುತ್ತ ಇರುತ್ತಾರೆ. ಹಂತ ಹಂತವಾಗಿ ಬದುಕು ಬದಲಾಗುತ್ತದೆ. ನಂತರ ಒಂದೊಂದೇ ಬ್ಯಾಕ್ ಟು ಬ್ಯಾಕ್ ಚಿತ್ರ ಮಾಡಲು ಶುರು ಮಾಡುತ್ತಾರೆ. ಹೀಗೆ 350ಕ್ಕೂ ಹೆಚ್ಚು ಸಿನಿಮಾದಲ್ಲಿ ಅಭಿನಯವನ್ನು ಉಮಾಶ್ರೀ ಅವರು ಮಾಡಿದ್ದರು. ಇನ್ನೂ ಇಡ್ಲಿ ಮಾರುತ್ತಿದ್ದ ಮಹಿಳೆ ಸಚಿವರು ಕೂಡ ಆಗುತ್ತಾರೆ. ಇದು ನಿಜವಾದ ಸ್ಫೂರ್ತಿದಾಯಕವಾದ ಸ್ಟೋರಿ.

LEAVE A REPLY

Please enter your comment!
Please enter your name here