Upendra Priyanka: ಉಪೇಂದ್ರ ಪ್ರಿಯಾಂಕ ದಂಪತಿಗೆ 20ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮ!

0 33

Upendra Priyanka: ರಿಯಲ್ ಸ್ಟಾರ್ ಉಪೇಂದ್ರ ಅವರು ವಿಶ್ವದಲ್ಲಿ ಅತ್ಯಂತ ಶ್ರೇಷ್ಠ ಡೈರೆಕ್ಟರ್ ಗಳಲ್ಲಿ ಒಬ್ಬರು ಎಂದು ಗುರುತಿಸಿಕೊಂಡಿರುವ ಪ್ರತಿಭೆ. ಉಪೇಂದ್ರ ಅವರ ಪ್ರತಿಭೆ, ಅವರು ಯೋಚನೆ ಮಾಡುವ ರೀತಿ ಇದೆಲ್ಲವು ಬೇರೆ ಎಲ್ಲರಿಗಿಂತ ಭಿನ್ನವಾಗಿರುತ್ತದೆ. ಇವರು ನಿರ್ದೇಶನ ಮಾಡುವ ಸಿನಿಮಾ ಎಂದರೆ ಅಭಿಮಾನಿಗಳು ಕಾಯುತ್ತಾ ಕೂರುತ್ತಾರೆ.

ಇಂಥ ರಿಯಲ್ ಸ್ಟಾರ್ ಉಪೇಂದ್ರ ಅವರು UI ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಹಾಲಿವುಡ್ ರೇಂಜ್ ನಲ್ಲಿರೋದು ಪಕ್ಕಾ ಎಂದು ಹೇಳಲಾಗುತ್ತಿದೆ. ಶೀಘ್ರದಲ್ಲೇ UI ಸಿನಿಮಾ ಬಗ್ಗೆ ಅಪ್ಡೇಟ್ ಕೊಡಲಿದ್ದಾರೆ ರಿಯಲ್ ಸ್ಟಾರ್. ಇವರ ಪರ್ಸನಲ್ ಲೈಫ್ ಬಗ್ಗೆ ಹೇಳೋದಾದರೆ, ಕನ್ನಡದಲ್ಲಿ ಮಿಂಚುತ್ತಿದ್ದ ಬೆಂಗಾಲಿ ಬ್ಯೂಟಿ ಪ್ರಿಯಾಂಕ ಉಪೇಂದ್ರ ಅವರನ್ನು ಪ್ರೀತಿಸಿ ಮದುವೆಯಾದರು ಉಪೇಂದ್ರ.

ಈ ಜೋಡಿಗೆ ಆಯುಷ್ ಮತ್ತು ಐಶ್ವರ್ಯ ಹೆಸರಿನ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಈ ಜೋಡಿ ಆಗಾಗ ಟ್ರಿಪ್ ಹೋಗುತ್ತಾ, ಲೈಫ್ ಎಂಜಾಯ್ ಮಾಡುತ್ತಾರೆ. ಮೂರು ದಿನಗಳ ಹಿಂದೆಯಷ್ಟೇ ಪ್ರಿಯಾಂಕ ಉಪೇಂದ್ರ ದಂಪತಿಯ ವಿವಾಹ ವಾರ್ಷಿಕೋತ್ಸವ ನಡೆದಿದೆ, ಈ ಜೋಡಿಗೆ ಅಭಿಮಾನಿಗಳು ವಿವಾಹ ವಾರ್ಷಿಕೋತ್ಸವಕ್ಕೆ ವಿಶ್ ಮಾಡಿದರು, ಹಾಗೆಯೇ ಇವರು ಫ್ಯಾಮಿಲಿ ಜೊತೆಗೆ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದ್ದಾರೆ.

ಸಂಭ್ರಮದ ಫೋಟೋಸ್ ಗಳನ್ನು ಪ್ರಿಯಾಂಕ ಉಪೇಂದ್ರ ಅವರು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದು, ಉಪೇಂದ್ರ ಹಾಗೂ ಪ್ರಿಯಾಂಕ ಜೋಡಿ ಇಡೀ ಕುಟುಂಬದ ಜೊತೆಗೆ 20ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದ್ದಾರೆ. ಈ ಫೋಟೋಸ್ ಈಗ ವೈರಲ್ ಆಗಿದೆ.

Leave A Reply

Your email address will not be published.