Urfi Javed: ಇದ್ದಕ್ಕಿದ್ದಂತೆ ಎಂಗೇಜ್ಮೆಂಟ್ ಮಾಡಿಕೊಂಡ್ರಾ ನಟಿ ಉರ್ಫಿ ಜಾವೇದ್?

Written by Pooja Siddaraj

Published on:

ಬಾಲಿವುಡ್ ನಲ್ಲಿ ಸದಾ ಸುದ್ದಿಯಲ್ಲಿರುವ ನಟಿಯರಲ್ಲಿ ಒಬ್ಬರು ಉರ್ಫಿ ಜಾವೇದ್. ಇವರ ಬಗ್ಗೆ ಹೊಸದಾಗಿ ಹೇಳುವ ಅಗತ್ಯವಿಲ್ಲ. ಉರ್ಫಿ ಜಾವೇದ್ ಅವರು ಬಿಗ್ ಬಾಸ್ ಶೋಗೆ ಸ್ಪರ್ಧಿಯಾಗಿ ಬ ದ ನಂತರ ಹೆಚ್ಚು ಪ್ರಚಾರ ಪಡೆದುಕೊಂಡಿದ್ದರು. ಬಿಗ್ ಬಾಸ್ ಮನೆಯೊಳಗೆ ಇದ್ದಾಗಲು ಕೂಡ ಒಂದಲ್ಲಾ ಒಂದು ಕಾರಣಕ್ಕೆ ಸುದ್ದಿಯಾಗುತ್ತಿದ್ದ ಉರ್ಫಿ ಜಾವೇದ್ ಅವರು ಹೊರಬಂದಮೇಲೆ ವಿಚಿತ್ರ ಕಾರಣಕ್ಕೆ ಸುದ್ದಿಯಾಗುತ್ತಿದ್ದರು.

ಉರ್ಫಿ ಅವರು ತಾವು ಧರಿಸುವ ಚಿತ್ರ ವಿಚಿತ್ರ ಬಟ್ಟೆಗಳಿಂದ ಹೆಚ್ಚಾಗಿ ಸುದ್ದಿಯಾಗುತ್ತಾರೆ. ಪಾಪಾರಾಜಿಗಳ ಕಣ್ಣಿಗೆ ಇವರ ಕಾಸ್ಟ್ಯೂಮ್ ಗಳು ಸೆರೆಯಾಗಿ, ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತದೆ. ಹಾಗೆಯೇ ಇವರು ನೀಡುವ ಹೇಳಿಕೆಗಳಿಂದ ಕೂಡ ಸುದ್ದಿಯಾಗುತ್ತಾರೆ. ಹೀಗೆ ಬಿಸಿ ಬಿಸಿ ಸುದ್ದಿಗಳಿಂದಲೇ ಸುದ್ದಿಯಾಗುವ ಉರ್ಫಿ ಜಾವೇದ್ ಅವರ ಬಗ್ಗೆ ಇದೀಗ ದೊಡ್ಡ ವಿಷಯ ಒಂದು ವೈರಲ್ ಆಗಿದೆ.

ಇದೀಗ ಉರ್ಫಿ ಜಾವೇದ್ ಅವರು ಸದ್ದಿಲ್ಲದೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ ಎನ್ನುವ ವಿಷಯ ಭಾರಿ ಸದ್ದು ಮಾಡುತ್ತಿದೆ. ಇದು ನಿಜವೇ ಇರಬಹುದು ಎನ್ನುವಂತಹ ಫೋಟೋಗಳು ಕೂಡ ವೈರಲ್ ಆಗುತ್ತಿದೆ. ಈ ಫೋಟೋಗಳನ್ನು ಗಮನಿಸಿದರೆ, ಅದರಲ್ಲಿ ಉರ್ಫಿ ಜಾವೇದ್ ಅವರು ಒಬ್ಬ ವ್ಯಕ್ತಿಯ ಜೊತೆಗೆ ಪೂಜೆಗೆ ಕುಳಿತಿದ್ದಾರೆ. ಅಲ್ಲಿ ನಡೆಯುತ್ತಿರುವುದು ಯಾವ ಪೂಜೆ ಎಂದು ಯಾರಿಗು ಮಾಹಿತಿ ಇಲ್ಲ..

ಫೋಟೋದಲ್ಲಿ ಹುಡುಗನ ಮುಖವನ್ನು ಬ್ಲರ್ ಮಾಡಲಾಗಿದೆ. ಈ ಫೋಟೋ ಶೇರ್ ಮಾಡಿರುವುದು ಉರ್ಫಿ ಜಾವೇದ್ ಅವರ ಸಹೋದರಿ ಆಗಿದ್ದು, ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್ ಮಾಡಿರುವ ಈ ಫೋಟೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಾಗೆಯೇ ಈ ಫೋಟೋ ನೋಡಿದ ನೆಟ್ಟಿಗರು ಮತ್ತು ಉರ್ಫಿ ಜಾವೇದ್ ಅವರ ಅಭಿಮಾನಿಗಳು, ಯಾವುದೇ ಸುಳಿವು ನೀಡದೆ ಉರ್ಫಿ ಜಾವೇದ್ ಅವರು ಎಂಗೇಜ್ಮೆಂಟ್ ಮಾಡಿಕೊಂಡು ಬಿಟ್ರ ಎಂದು ಆಶ್ಚರ್ಯ ಪಡುತ್ತಿದ್ದಾರೆ.

ಆದರೆ ಇದು ನಿಜಕ್ಕೂ ಎಂಗೇಜ್ಮೆಂಟ್ ಫೋಟೋನ ಅಥವಾ ಬೇರೆ ಯಾವುದಾದರೂ ಫೋಟೋ ಆಗಿರಬಹುದಾ ಎನ್ನುವ ಅನುಮಾನ ಕೂಡ ಶುರುವಾಗಿದೆ. ಉರ್ಫಿ ಜಾವೇದ್ ಅವರಿಂದ ಈ ಫೋಟೋ ಬಗ್ಗೆ ಇನ್ನು ಕ್ಲಾರಿಟಿ ಸಿಕ್ಕಿಲ್ಲ. ಉರ್ಫಿ ಅವರ ಪ್ರತಿಕ್ರಿಯೆ ಹೇಗಿರುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

Leave a Comment