Urfi Javed: ಕೀಬೋರ್ಡ್ ಧರಿಸಿ ಬಂದ ಉರ್ಫಿ, ಶಾಕ್ ಆದ ನೆಟ್ಟಿಗರು

Written by Pooja Siddaraj

Published on:

Urfi Javed: ನಟಿ ಉರ್ಫಿ ಜಾವೇದ್ ನಟನೆ ಅಥವಾ ಬಿಗ್ ಬಾಸ್ ಶೋ ಇಂದ ಇವರು ಹೆಸರು ಮಾಡಿದ್ದಕ್ಕಿಂತ ಧರಿಸುವ ವಿಚಿತ್ರ ಬಟ್ಟೆಗಳ ಕಾರಣಕ್ಕೆ ಹೆಚ್ಚು ಸುದ್ದಿಯಾಗುತ್ತಾರೆ. ಉರ್ಫಿ ಜಾವೇದ್ ಅವರ ಬಗ್ಗೆ ಬಹುತೇಕ ಎಲ್ಲಾ ನೆಟ್ಟಿಗರಿಗೂ ಗೊತ್ತಿರುತ್ತದೆ. ಚಿತ್ರ ವಿಚಿತ್ರ ರೀತಿಯಲ್ಲಿ ಬಟ್ಟೆಗಳನ್ನು ಧರಿಸಿ ಬರುವ ಉರ್ಫಿ ಜಾವೇದ್, ಯಾವಾಗಲೂ ಸುದ್ದಿಯಲ್ಲಿರುತ್ತಾರೆ ಎಂದರೆ ತಪ್ಪಲ್ಲ. ಇದೀಗ ಉರ್ಫಿ ಅವರು ಮತ್ತೊಂದು ಹೊಸ ರೀತಿಯ ಡ್ರೆಸ್ ಇಂದ ಸುದ್ದಿಯಾಗಿದ್ದಾರೆ.

ಉರ್ಫಿ ಜಾವೇದ್ ಏನನ್ನೋ ಧರಿಸಿ ಬಂದು ಅದನ್ನೇ ಫ್ಯಾಶನ್ ಎನ್ನುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಯಾವಾಗಲೂ ಟ್ರೋಲ್ ಅಥವಾ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ಉರ್ಫಿ ಜಾವೇದ್ ಅವರು ಮತ್ತೊಮ್ಮೆ ಸುದ್ದಿಯಾಗಿರುವುದು ಕೀಬೋರ್ಡ್ ಧರಿಸಿ. ಹೌದು, ಕಂಪ್ಯೂಟರ್ ಕೀಬೋರ್ಡ್ ಗೆ ಒಂದು ದಾರ ಹಾಕಿ, ಅದನ್ನೇ ಮೈಮೇಲೆ ಧರಿಸಿ, ಹೊಸದಾಗಿ ಫೋಟೋಶೂಟ್ ಮಾಡಿಸಿದ್ದಾರೆ ಉರ್ಫಿ.

ಈ ಫೋಟೋಸ್ ಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಪ್ರಸ್ತುತ ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಉರ್ಫಿಯ ಹೊಸ ಅವತಾರ ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ. ಒಂದು ವೇಳೆ ಕಂಪ್ಯೂಟರ್ ಕಂಡುಹಿಡಿದವನು ಉರ್ಫಿ ಜಾವೇದ್ ಅವತಾರ ನೋಡಿದ್ದರೆ ಖಂಡಿತವಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದ ಎನ್ನುತ್ತಿದ್ದಾರೆ ನೆಟ್ಟಿಗರು. ಈ ಫೋಟೋಸ್ ನೋಡಿದರೆ ನಿಮಗು ಹಾಗೆ ಅನ್ನಿಸುವುದು ಗ್ಯಾರಂಟಿ.

ಕೀಬೋರ್ಡ್ ಧರಿಸಿಕೊಂಡು, ಪ್ಯಾಂಟ್ ಅನ್ನು ಕೂಡ ಕೀಬೋರ್ಡ್ ರೀತಿಯಲ್ಲೇ ಇರುವ ಕೀಗಳಿಂದ ಡಿಸೈನ್ ಮಾಡಲಾಗಿದೆ. ಈ ಥರದ ಬಟ್ಟೆಯನ್ನು ಧರಿಸಿರುವ ಉರ್ಫಿ ಜಾವೇದ್, ವಿಭಿನ್ನವಾಗಿ ಫೋಟೋಶೂಟ್ ಮಾಡಿಸಿ ಸುದ್ದಿಯಾಗಿದ್ದಾರೆ. ಈಗಾಗಲೇ ವೈರಲ್ ಆಗಿರುವ ಫೋಟೋಗಳಿಗೆ, ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಮೆಂಟ್ಸ್ ಗಫು ಕೂಡ ಬರುತ್ತಿವೆ. ಒಟ್ಟಿನಲ್ಲಿ ಒಂದಲ್ಲ ಒಂದು ಕಾರಣದಿಂದ ಸುದ್ದಿಯಲ್ಲೇ ಇರುತ್ತಾರೆ ಉರ್ಫಿ..

ಇತ್ತೀಚೆಗೆ ಇವರು ಎಂಗೇಜ್ಮೆಂಟ್ ಮಾಡಿಕೊಂಡಿರಬಹುದು ಎನ್ನುವ ಮತ್ತೊಂದು ಸುದ್ದಿ ಕೂಡ ವೈರಲ್ ಆಗಿತ್ತು. ಉರ್ಫಿ ಜಾವೇದ್ ಒಬ್ಬ ವ್ಯಕ್ತಿಯ ಪಕ್ಕ ಕೂತು ಪೂಜೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿ, ಯಾರಿಗೂ ಹೇಳದೆ ಉರ್ಫಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರಾ ಎಂದು ಸುದ್ದಿಯಾಗಿತ್ತು. ಆದರೆ ಈ ಬಗ್ಯೆ ಉರ್ಫಿ ಅವರು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ..

Leave a Comment