Vaishnavi Gowda: ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಕರ್ನಾಟಕದ ಎಲ್ಲೆಡೆ ಸನ್ನಿಧಿಯಾಗಿ ನಮ್ಮ ಮನೆ ಹುಡುಗಿ ಎನ್ನುವ ಹಾಗೆ ಖ್ಯಾತಿ ಗಳಿಸಿದವರು ನಟಿ ವೈಷ್ಣವಿ ಗೌಡ. ಇವರನ್ನು ಎಲ್ಲರೂ ಸನ್ನಿಧಿ ಎಂದೇ ಕರೆಯುತ್ತಾರೆ. ಬಿಗ್ ಬಾಸ್ ಕನ್ನಡ ಸೀಸನ್ 8ಕ್ಕೆ ಸ್ಪರ್ಧಿಯಾಗಿ ಅಗಮಿಸಿದ ವೈಷ್ಣವಿ, ತಮ್ಮ ನಿಜ ಸ್ವಭಾವದಿಂದ, ಸರಳತೆಯಿಂದ ಬಿಗ್ ಬಾಸ್ ವೀಕ್ಷಕರಿಗೆ ಬಹಳ ಇಷ್ಟವಾಗಿದ್ದರು. ನಟನೆ ಜೊತೆಗೆ ನಿರೂಪಣೆ ಸಹ ಮಾಡಿದ್ದರು ವೈಷ್ಣವಿ ಗೌಡ..
ಜೀಕನ್ನಡ ವಾಹಿನಿಯ ದೇವಿ ಧಾರಾವಾಹಿ ಮೂಲಕ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟರು ವೈಷ್ಣವಿ. ನಂತರ ಕುಣಿಯೋಣು ಬಾರ ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ್ದರು. ಆದರೆ ವೈಷ್ಣವಿ ಅವರಿಗೆ ಹೆಚ್ಚಿನ ಜನಪ್ರಿಯತೆ ತಂದುಕೊಟ್ಟಿದ್ದು ಅಗ್ನಿಸಾಕ್ಷಿ ಧಾರಾವಾಹಿ. ಸನ್ನಿಧಿ ಪಾತ್ರದಿಂದ ಸಾಕಷ್ಟು ಜನಪ್ರಿಯತೆ ಪಡೆದುಕೊಂಡರು ವೈಷ್ಣವಿ. ಸನ್ನಿಧಿ ಪಾತ್ರದ ಮುಗ್ಧತೆ ಜೊತೆಗೆ ಧೈರ್ಯ ಎಲ್ಲವು ಜನರಿಗೆ ಇಷ್ಟವಾಗಿ, ವೈಷ್ಣವಿ ಅವರನ್ನು ತಮ್ಮ ಮನೆಯ ಮಗಳ ಹಾಗೆ ಭಾವಿಸುತ್ತಿದ್ದರು.
ಈಗಲೂ ಸಹ ಸನ್ನಿಧಿ ಪಾತ್ರದ ಮೇಲೆ ಬಹಳ ಪ್ರೀತಿ ಇಟ್ಟಕೊಂಡಿದ್ದಾರೆ.ಇನ್ನು ಬಿಗ್ ಬಾಸ್ ಮನೆಗೆ ಬಂದಮೇಲೆ ವೈಷ್ಣವಿ ಅವರಿಗೆ ಜನಪ್ರಿಯತೆ ಹೆಚ್ಚಾಯಿತು. ಅವರ ನಿಜಾವಾದ ವ್ಯಕ್ತಿತ್ವವನ್ನು ಜನರು ಇನ್ನು ಹೆಚ್ಚು ಇಷ್ಟಪಡಲು ಶುರುಮಾಡಿದರು. ಸರಳತೆಯ ಸ್ವಭಾವದಿಂದಲೇ ವೈಷ್ಣವಿ ಅವರು ಹೆಚ್ಚಿನ ಅಭಿಮಾನಿಗಳನ್ನು ಗಳಿಸಿಕೊಂಡರು. ವೈಷ್ಣವಿ ಅವರು ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಕೆಲವು ಪ್ರಾಜೆಕ್ಟ್ಸ್ ಗಳಲ್ಲಿ ಬ್ಯುಸಿ ಇದ್ದಾರೆ.
ನಟಿ ವೈಷ್ಣವಿ ಗೌಡ ಅವರಿಗೆ ನೃತ್ಯದಲ್ಲಿ ಬಹಳ ಆಸಕ್ತಿ ಇದೆ, ಚಿಕ್ಕ ವಯಸ್ಸಿನಿಂದಲೇ ಭರತನಾಟ್ಯ, ಕುಚುಪುಡಿ ಮುಂತಾದ ರೀತಿಯ ನೃತ್ಯಶೈಲಿಗಳನ್ನು ಕಲಿತು, ಪರಿಣಿತಿ ಹೊಂದಿದ್ದಾರೆ. ವೈಷ್ಣವಿ ಗೌಡ ಸಿನಿಮಾ ಧಾರಾವಾಹಿಗಳಲ್ಲಿ ನಟಿಸುವ ಮೊದಲು, ಒಂದು ನೃತ್ಯಶಾಲೆಯಲ್ಲಿ ಡ್ಯಾನ್ಸ್ ಹೇಳಿಕೊಡುತ್ತಿದ್ದರು. ಡ್ಯಾನ್ಸ್ ಮತ್ತು ನಟನೆ ಎರಡರಲ್ಲೂ ಅಸಕ್ತಿ ಇರುವವರು ವೈಷ್ಣವಿ. ಅಗ್ನಿಸಾಕ್ಷಿ ಬಳಿಕ ಕಿರುತೆರೆ ಇಂದ ಬಿಗ್ ಬ್ರೇಕ್ ತೆಗೆದುಕೊಂಡಿದ್ದ ವೈಷ್ಣವಿ ಇದೀಗ ಸೀತಾರಾಮ ಧಾರವಾಹಿ ಮೂಲಕ ಕಿರುತೆರೆಗೆ ರೀಎಂಟ್ರಿ ಕೊಟ್ಟಿದ್ದಾರೆ.
ಸೀತಾ ಪಾತ್ರದಲ್ಲಿ ನಟಿಸುತ್ತಿರುವ ವೈಷ್ಣವಿ ಮತ್ತೊಮ್ಮೆ ಅಭಿಮಾನಿಗಳ ಮನಸೆಳೆದಿದ್ದಾರೆ. ಇವರಿಗೆ ಹೇಳಿಮಾಡಿಸಿದ ಪಾತ್ರವೂ ಆಗಿದೆ. ಸೀತಾರಾಮ ಧಾರವಾಹಿ ಜನಪ್ರಿಯತೆ ಮತ್ತು ರೇಟಿಂಗ್ ಎರಡರಲ್ಲೂ ನಂಬರ್ 1 ಎಂದರೆ ತಪ್ಪಲ್ಲ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ವೈಷ್ಣವಿ ಅವರು ಇದೀಗ ಸೀರೆಯಲ್ಲಿ ಹೊಸ ಫೋಟೋಶೂಟ್ ಮಾಡಿಸಿ, ಅವುಗಳನ್ನು ಶೇರ್ ಮಾಡಿದ್ದು, ಸಾಕ್ಷಾತ್ ಸೀತೆಯ ಹಾಗೆ ಕಾಣುತ್ತಿದ್ದೀರಾ ಎಂದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನೀವು ಕೂಡ ವೈಷ್ಣವಿ ಅವರ ಈ ಸುಂದರವಾದ ಫೋಟೋಸ್ ನೋಡಿ..