Varthur Santhosh: ಹಳ್ಳಿಕಾರ್ ಒಡೆಯ ವರ್ತೂರ್ ಸಂತೋಷ್ ಅವರ ವಿದ್ಯಾಭ್ಯಾಸ ಎಷ್ಟು ಗೊತ್ತಾ?

0 1

Varthur Santhosh: ಬಿಗ್ ಬಾಸ್ ಕನ್ನಡ ಸೀಸನ್ 10 ಶುರುವಾಗಿ 50 ದಿನಗಳ ಸಮಯ ಕಳೆದಿದೆ. ರೈತನಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ ವರ್ತೂರ್ ಸಂತೋಷ್ ಇಂದು ಮನೆಯಲ್ಲಿರುವ ಸ್ಟ್ರಾಂಗ್ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದಾರೆ. ವಾರದಿಂದ ವಾರಕ್ಕೆ ಇವರು ಸ್ಟ್ರಾಂಗ್ ಆಗುತ್ತಿದ್ದಾರೆ. ಇವರು ಬಿಗ್ ಬಾಸ್ ಮನೆಯೊಳಗೆ ಇದ್ದರು ಹೊರಗಡೆ ಇವರ ಮದುವೆ ಬಗ್ಗೆ ಭಾರಿ ಚರ್ಚೆ ಆಗುತ್ತಿತ್ತು. ಇನ್ನು ಪಕ್ಕಾ ಹಳ್ಳಿ ಹುಡುಗ ಆಗಿರುವ ವರ್ತೂರ್ ಸಂತೋಷ್ ಓದಿರೋದು ಎಷ್ಟು ಗೊತ್ತಾ?

ವರ್ತೂರ್ ಸಂತೋಷ್ ಪಕ್ಕಾ ಹಳ್ಳಿಯ ರೈತ, ವ್ಯವಸಾಯ ಮಾಡಿ ಜೀವನ ಸಾಗುತ್ತಿರುವ ವ್ಯಕ್ತಿ ಮಾತ್ರ ಎಂದುಕೊಂಡಿದ್ದರೆ, ಆ ಊಹೆ ಖಂಡಿತ ತಪ್ಪು. ವರ್ತೂರ್ ಸಂತೋಷ್ ಬಹಳ ಶ್ರೀಮಂತ ವ್ಯಕ್ತಿ ಎನ್ನುವುದು ಹಲವರಿಗೆ ಗೊತ್ತಿಲ್ಲದ ವಿಷಯ. ಬಿಗ್ ಬಾಸ್ ಮನೆಯಲ್ಲಿ ನೂರು ದಿನಗಳ ಕಾಲ ಇರಬೇಕು, ಹಳ್ಳಿಕಾರ್ ತಳಿ ಹಸುವಿನ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು ಎಂದು ಬಂದಿದ್ದ ವರ್ತೂರ್ ಸಂತೋಷ್ ಬಹಳ ದೊಡ್ಡ ಮನೆತನಕ್ಕೆ ಸೇರಿದ ಶ್ರೀಮಂತ ವ್ಯಕ್ತಿ ಎಂದರೆ ತಪ್ಪಲ್ಲ.

ಬಿಗ್ ಬಾಸ್ ಮನೆಗೆ ಬಂದು 2 ವಾರ ಆಗುತ್ತಿದ್ದ ಹಾಗೆ ಹುಲಿ ಉಗುರು ಇರುವ ಪೆಂಡೆಂಟ್ ಧರಿಸಿದ್ದ ಕಾರಣ ವರ್ತೂರ್ ಸಂತೋಷ್ ಅವರನ್ನು ಅರೆಸ್ಟ್ ಮಾಡಲಾಗಿತ್ತು. ಕೆಲ ದಿನಗಳ ಕಾಲ ಜೈಲಿನಲ್ಲಿ ವಾಸ ಮಾಡಿದ ಬಳಿಕ ವರ್ತೂರ್ ಸಂತೋಷ್ ಅವರು ಬಿಗ್ ಬಾಸ್ ಮನೆಗೆ ರೀಎಂಟ್ರಿ ಕೊಟ್ಟರು. ಆದರೆ ಆಗಿನಿಂದಲು ಇವರ ಮದುವೆ ಬಗ್ಗೆ ಊಹಾಪೋಹಗಳು ಕೇಳಿಬಂದಿದ್ದವು. ಇತ್ತೀಚೆಗೆ ವರ್ತೂರ್ ಸಂತೋಷ್ ಅವರು ಬಿಗ್ ಬಾಸ್ ಮನೆಯಲ್ಲೇ ಇದಕ್ಕೆಲ್ಲ ಉತ್ತರ ಕೊಟ್ಟಿದ್ದಾರೆ.

ಹಾಗೆಯೇ ವರ್ತೂರ್ ಸಂತೋಷ್ ಅವರು ಈ ವಾರ ಸ್ಕೂಲ್ ಟಾಸ್ಕ್ ನಲ್ಲಿ ಎಲ್ಲರ ಗಮನ ಸೆಳೆದಿದ್ದರು. ಹಾಗೆಯೇ ಇವರ ವಿದ್ಯಾಭ್ಯಾಸದ ಬಗ್ಗೆ ಕೂಡ ತಿಳಿಸಿದ್ದು, ಇವರು ಓದಿದ್ದು ಪೂರ್ತಿ ಇಂಗ್ಲಿಷ್ ಮೀಡಿಯಂ ನಲ್ಲೇ ಎಂದು ಹೇಳಿದ್ದಾರೆ, ಹಾಗೆಯೇ ಹಣದ ಬೆಲೆ ಗೊತ್ತಾಗಿದ್ದು, ಡಿಗ್ರಿ ಓದುವಾಗ ಎಂದಿದ್ದಾರೆ. ಜೊತೆಗೆ ಎಂಬಿಎ ಸೇರಿಕೊಂಡು ಪೂರ್ತಿ ಮಾಡಲಾಗಿಲ್ಲ, ಒಂದು ವರ್ಷ ಮಾತ್ರ ಹೋಗಿದ್ದು ಎಂದಿದ್ದಾರೆ.

Leave A Reply

Your email address will not be published.